ಮಧುಮೇಹ ಇರುವವರು ಚಪಾತಿ ತಿನ್ನಬಹುದೇ, ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಧುಮೇಹ ಇರುವವರು ಚಪಾತಿ ತಿನ್ನಬಹುದೇ, ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಇಲ್ಲಿದೆ ಮಾಹಿತಿ

ಮಧುಮೇಹ ಇರುವವರು ಚಪಾತಿ ತಿನ್ನಬಹುದೇ, ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಇಲ್ಲಿದೆ ಮಾಹಿತಿ

ಮಧುಮೇಹ ಇರುವ ಬಹಳಷ್ಟು ಜನರು ಅನ್ನಕ್ಕಿಂತ ಗೋಧಿಯನ್ನು ಹೆಚ್ಚು ಸೇವಿಸುತ್ತಾರೆ. ಗೋಧಿಯಲ್ಲಿರುವ ಫೈಬರ್, ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ ಮಧುಮೇಹ ಇರುವವರು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು ಎಂಬ ಪ್ರಶ್ನೆ ಅನೇಕರಲ್ಲಿದೆ.

ಉತ್ತರ ಭಾರತದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಊಟಕ್ಕೆ ಚಪಾತಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಗೋಧಿಯಿಂದ ಮಾಡಿದ ಚಪಾತಿ ಹಲವು ಪೋಷಕಾಂಶಗಳ ಆಗರವಾಗಿದೆ.ಗೋಧಿಯು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ.
icon

(1 / 9)

(freepik)

 ಗೋಧಿಯಲ್ಲಿರುವ ಫೈಬರ್, ನಿರ್ದಿಷ್ಟವಾಗಿ, ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಮಧುಮೇಹ ಇರುವವರು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು ಎಂಬ ಪ್ರಶ್ನೆ ಅನೇಕರಲ್ಲಿದೆ. ನಿಮ್ಮ ಮನಸ್ಸಿನಲ್ಲಿಯೂ ಇಂತಹ ಪ್ರಶ್ನೆಗಳಿದ್ದರೆ, ಇಲ್ಲಿ ಕೆಲವೊಂದು ಮಾಹಿತಿ ಇದೆ.  
icon

(2 / 9)

ಮಧುಮೇಹ ಇರುವವರು ಚಪಾತಿ ಸೇವಿಸಬಹುದೇ ಎಂಬ ಅನುಮಾನ ಬಹಳ ಜನರಿಗೆ ಇದೆ, ನೀವು ಮಧುಮೇಹ ಹೊಂದಿದ್ದರೆ, ನೀವು ಸೀಮಿತ ಪ್ರಮಾಣದಲ್ಲಿ ಗೋಧಿ ಚಪಾತಿ ತಿನ್ನಬಹುದು. ಸಂಪೂರ್ಣ ಗೋಧಿ ಚಪಾತಿಯು ಸಂಸ್ಕರಿಸಿದ ಹಿಟ್ಟಿನ ಚಪಾತಿಗಳಿಗಿಂತ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. 
icon

(3 / 9)

ಡಯಟಿಶಿಯನ್‌ ಹೇಳುವಂತೆ ನಿಮಗೆ ಮಧುಮೇಹ ಇದ್ದರೆ ಸೀಮಿತ ಪ್ರಮಾಣದಲ್ಲಿ ಚಪಾತಿ ಸೇವಿಸಿ. ಒಂದು ದಿನದಲ್ಲಿ ಎಷ್ಟು ಚಪಾತಿ ತಿನ್ನಬೇಕು ಎಂಬುದು ಚಪಾತಿಯ ಗಾತ್ರವನ್ನು ಅವಲಂಬಿಸಿರುತ್ತದೆ. ನೀವು ಮಧ್ಯಮ ಗಾತ್ರದ ಚಪಾತಿಗಳನ್ನು ತಿನ್ನುತ್ತಿದ್ದರೆ, ದಿನಕ್ಕೆ 2 ರಿಂದ 3 ಚಪಾತಿಗಳನ್ನು ತಿನ್ನಬಹುದು. ಮಧುಮೇಹ ರೋಗಿಗಳು ಉಪಹಾರ ಅಥವಾ ಮಧ್ಯಾಹ್ನದ ಊಟದಲ್ಲಿ ಮಾತ್ರ ಚಪಾತಿಯನ್ನು ಬಳಸಬೇಕು. 
icon

(4 / 9)

ದಿನಕ್ಕೆ ನೀವು ಎಷ್ಟು ಬಾರಿ ಚಪಾತಿಗಳನ್ನು ತಿನ್ನುತ್ತೀರಿ ಎಂಬುದು ನಿಮ್ಮ ವಯಸ್ಸು, ಲಿಂಗ, ದೈಹಿಕ ಚಟುವಟಿಕೆ ಮತ್ತು ಇತರ ಆರೋಗ್ಯ ಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. 
icon

(5 / 9)

 ಚಪಾತಿಯಲ್ಲಿನ ಕಾರ್ಬ್ ಅಂಶವನ್ನು ಕಡಿಮೆ ಮಾಡಲು, ನಿಮ್ಮ ಪ್ಲೇಟ್‌ನಲ್ಲಿ ಹೆಚ್ಚು ಫೈಬರ್ ಅಂಶ ಇರುವ ತರಕಾರಿಗಳು ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇರಿಸಿ.
icon

(6 / 9)

 ಗೋಧಿಯ ಜೊತೆಗೆ, ಫೈಬರ್ ಅಂಶವನ್ನು ಹೆಚ್ಚಿಸಲು ಬಾರ್ಲಿಯನ್ನು ಸೇರಿಸಲು ಪ್ರಯತ್ನಿಸಿ. ಜೊತೆಗೆ ಅಮರಂಥ್, ಬಕ್ವೀಟ್ ಮತ್ತು ರಾಗಿಯಂತಹ ಹಿಟ್ಟುಗಳು ಕಡಿಮೆ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅದನ್ನೂ ನೀವು ಗೋಧಿಯೊಂದಿಗೆ ಸೇರಿಸಿ ಫ್ಲೋರ್‌ ಮಿಲ್‌ನಲ್ಲಿ ಪುಡಿ ಮಾಡಿಸಬಹುದು.
icon

(7 / 9)

ಸಂಸ್ಕರಿಸಿದ ಹಿಟ್ಟಿನ ಬದಲಿಗೆ ಸಂಪೂರ್ಣ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಗಳನ್ನು ತಯಾರಿಸಿ ತಿನ್ನಿರಿ, ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ ಮತ್ತು ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದರಿಂದ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಅಂಗಡಿಯಿಂದ ಗೋಧಿ ಹಿಟ್ಟನ್ನು ತರುವ ಬದಲಿಗೆ ಗೋಧಿ ಖರೀದಿಸಿ ಫ್ಲೋರ್‌ ಮಿಲ್‌ನಲ್ಲಿ ಹಿಟ್ಟು ಗಿರಣಿ ಮಾಡಿಸಿ. 
icon

(8 / 9)

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
icon

(9 / 9)

ಇತರ ಗ್ಯಾಲರಿಗಳು