ಜ್ಯೂಸ್, ಸ್ಮೂಥಿ, ಪುಡಿಂಗ್; ಚಿಯಾ ಬೀಜಗಳನ್ನು ಹೊಟ್ಟೆಗಿಳಿಸುವ 5 ಸರಿಯಾದ ವಿಧಾನಗಳು
- ಇತ್ತೀಚೆಗೆ ಚಿಯಾ ಬೀಜಗಳ ಬಳಕೆ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ತ್ವಚೆಯ ಕಾಂತಿ ಹೆಚ್ಚಿಸಲು ಚಿಯಾ ಬೀಜ ಸಹಕಾರಿ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಹೀಗಾಗಿ ಜನರು ಕೂಡಾ ಇದರ ಬಳಕೆ ಹೆಚ್ಚಿಸಿದ್ದಾರೆ. ಚಿಯಾ ಬೀಜಗಳನ್ನು ಮುಖದ ಆರೈಕೆ ಮಾತ್ರವಲ್ಲದೆ ಹೊಟ್ಟೆಗೂ ಸೇರಿಸಬಹುದು. ಚಿಯಾ ಸೇವನೆಯ ಸೂಕ್ತ ವಿಧಾನಗಳು ಹೀಗಿವೆ.
- ಇತ್ತೀಚೆಗೆ ಚಿಯಾ ಬೀಜಗಳ ಬಳಕೆ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ತ್ವಚೆಯ ಕಾಂತಿ ಹೆಚ್ಚಿಸಲು ಚಿಯಾ ಬೀಜ ಸಹಕಾರಿ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಹೀಗಾಗಿ ಜನರು ಕೂಡಾ ಇದರ ಬಳಕೆ ಹೆಚ್ಚಿಸಿದ್ದಾರೆ. ಚಿಯಾ ಬೀಜಗಳನ್ನು ಮುಖದ ಆರೈಕೆ ಮಾತ್ರವಲ್ಲದೆ ಹೊಟ್ಟೆಗೂ ಸೇರಿಸಬಹುದು. ಚಿಯಾ ಸೇವನೆಯ ಸೂಕ್ತ ವಿಧಾನಗಳು ಹೀಗಿವೆ.
(1 / 6)
ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿವಿಧ ರೀತಿಯ ಖನಿಜಗಳು ಹೇರಳವಾಗಿವೆ. ಪೌಷ್ಟಿಕಾಂಶ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ಸಣ್ಣ ಬೀಜಗಳನ್ನು ನಿಮ್ಮ ಆಹಾರದಲ್ಲಿ ವಿವಿಧ ರೀತಿಯಲ್ಲಿ ಸೇರಿಸಿಕೊಳ್ಳಬಹುದು.
(Freepik)(2 / 6)
ಚಿಯಾ ಬೀಜದ ನೀರು: ನೀರಿನಲ್ಲಿ ಚಿಯಾ ಬೀಜಗಳನ್ನು ನೆನೆಸಿ ಕುಡಿಯುವುದು ಸರಳ ವಿಧಾನ. ಇದು ಜೆಲ್ ರೂಪಕ್ಕೆ ಬರುತ್ತದೆ. ಬೆಳಗ್ಗೆ ಬರೀ ಹೊಟ್ಟೆಗೆ ಇದನ್ನು ಕುಡಿಯಬಹುದು. ಅಥವಾ ಈ ಜೆಲ್ ಅನ್ನು ನೀರು ಮತ್ತು ನಿಂಬೆಹಣ್ಣಿನ ಸ್ಪ್ಲಾಶ್ ಅಥವಾ ಯಾವುದೇ ಹೈಡ್ರೇಟಿಂಗ್ ಪಾನೀಯವಾಗಿ ಕುಡಿಯಬಹುದು.
(Freepik)(3 / 6)
ಚಿಯಾ ಬೀಜದ ಪುಡಿಂಗ್: ಚಿಯಾ ಬೀಜದ ಪುಡಿಂಗ್ ಮಾಡಿ ಸವಿಯಬಹುದು. ಆ ಮೂಲಕ ಬೀಜಗಳನ್ನು ಭಿನ್ನ ರೀತಿಯಲ್ಲಿ ಹೊಟ್ಟೆಗಿಳಿಸಬಹುದು. ಚಿಯಾ ಬೀಜಗಳನ್ನು ಹಾಲಿನೊಂದಿಗೆ ಬೆರೆಸಿ, ಜೇನುತುಪ್ಪ ಅಥವಾ ಮೇಪಲ್ ಸಿರಪ್‌ನಂತಹ ಸಿಹಿ ಪದಾರ್ಥವನ್ನು ಬೆರೆಸಿ. ಈ ಮಿಶ್ರಣವನ್ನು ರೆಫ್ರಿಜರೇಟರ್‌ನಲ್ಲಿ ರಾತ್ರಿಯಿಡೀ ಇರಿಸಿ. ಇದಕ್ಕೆ ಹಣ್ಣುಗಳು, ಡ್ರೈಫ್ರುಟ್ಸ್ ಸೇರಿಸಬಹುದು. ಇದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ.
(4 / 6)
ಸ್ಮೂಥಿ ಅಥವಾ ಜ್ಯೂಸ್: ಬೆಳಗ್ಗಿನ ಸ್ಮೂಥಿ ಅಥವಾ ತಾಜಾ ಜ್ಯೂಸ್‌ಗೆ ಚಿಯಾ ಬೀಜಗಳನ್ನು ಸೇರಿಸುವ ಮೂಲಕ ಪೌಷ್ಟಿಕಾಂಶದ ಅಂಶವನ್ನು ಹೆಚ್ಚಿಸಬಹುದು. ಈ ಬೀಜಗಳು ಪಾನೀಯದಲ್ಲಿ ಮಿಶ್ರಣಗೊಳ್ಳುತ್ತವೆ. ಇದರಲ್ಲಿರುವ ಫೈಬರ್ ಮತ್ತು ಒಮೆಗಾ-3 ಅಂಶವನ್ನು ಹೆಚ್ಚಿಸುತ್ತವೆ. ಚಿಯಾ ಬೀಜಗಳನ್ನು ಬೆರೆಸುವುದರಿಂದ ಪಾನೀಯ ತುಸು ದಪ್ಪವಾಗುತ್ತದೆ.
(5 / 6)
ಬೇಕಿಂಗ್: ಬ್ರೆಡ್, ಮಫಿನ್‌ಗಳು ಮತ್ತು ಕುಕೀಗಳಂತಹ ಬೇಕಿಂಗ್ ಅಡುಗೆಗಳಿಗೆ ಚಿಯಾ ಬೀಜಗಳು ಉತ್ತಮ. ಜೆಲ್ ತರಹದ ಸ್ಥಿರತೆ ರೂಪಿಸಲು ನೀರಿನೊಂದಿಗೆ ಚಿಯಾ ಸೀಡ್ ಬೆರೆಸುವ ಮೂಲಕ ಅವುಗಳನ್ನು ಮೊಟ್ಟೆಗೆ ಬದಲಿಯಾಗಿ ಬಳಸಬಹುದು.
(freepik)ಇತರ ಗ್ಯಾಲರಿಗಳು