Onion: ಪ್ರತಿದಿನ ಹಸಿ ಈರುಳ್ಳಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ: ಇಲ್ಲಿದೆ ಮಾಹಿತಿ
ಈರುಳ್ಳಿ ಇರದ ಭಾರತೀಯ ಅಡುಗೆಮನೆಗಳಿರುವುದು ತೀರಾ ಕಡಿಮೆ ಎಂದು ಹೇಳಬಹುದು. ಸಸ್ಯಾಹಾರಿ ಖಾದ್ಯಗಳಿಂದ ಮಾಂಸಾಹಾರಿ ಖಾದ್ಯಗಳವರೆಗೆ ಈರುಳ್ಳಿ ಬೇಕೇ ಬೇಕು. ಇದನ್ನು ಬೇಯಿಸಿ ತಿನ್ನುವುದು ಮಾತ್ರವಲ್ಲ ಹಸಿಯಾಗಿಯೂ ತಿನ್ನುತ್ತಾರೆ. ಅದರಲ್ಲೂ ಮಾಂಸಾಹಾರ ಖಾದ್ಯ ತಿನ್ನುವಾಗ ಈರುಳ್ಳಿ ತಿನ್ನುತ್ತಾರೆ. ಹೀಗೆ ಹಸಿ ಈರುಳ್ಳಿ ತಿನ್ನುವುದು ಒಳ್ಳೆಯದಾ, ಇಲ್ಲಿದೆ ಮಾಹಿತಿ.
(1 / 9)
ಈರುಳ್ಳಿ ಮತ್ತು ಟೊಮೆಟೊ ಇಲ್ಲದ ಅಡುಗೆ ಮನೆಗಳಿರುವುದು ತೀರಾ ಕಡಿಮೆ. ಇವೆರಡೂ ಇಲ್ಲದೆ ಪಲ್ಯವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಪಲ್ಯವನ್ನು ರುಚಿಕರವಾಗಿಸಲು ಬಯಸಿದರೆ, ಈರುಳ್ಳಿ ಮತ್ತು ಟೊಮೆಟೊ ಬಳಸಬೇಕು. ಅವು ಯಾವುದೇ ಖಾದ್ಯಕ್ಕೆ ವಿಶಿಷ್ಟ ಪರಿಮಳವನ್ನು ನೀಡುತ್ತವೆ. ಕೇವಲ ಈರುಳ್ಳಿಯನ್ನು ಬೇಯಿಸಿ ತಿನ್ನುವುದು ಮಾತ್ರವಲ್ಲ, ಸಲಾಡ್ ಅಂತಹ ಭಕ್ಷ್ಯಗಳಿಗೆ, ಈರುಳ್ಳಿಯನ್ನು ಹಸಿಯಾಗಿ ತಿನ್ನುತ್ತಾರೆ.
ಅನೇಕ ಜನರು ಈರುಳ್ಳಿಯನ್ನು ಊಟದೊಂದಿಗೆ ಹಸಿಯಾಗಿ ತಿನ್ನುತ್ತಾರೆ. ಅದರಲ್ಲೂ ಮಾಂಸಾಹಾರ ಖಾದ್ಯ ತಿನ್ನುವಾಗ ಹಸಿ ಈರುಳ್ಳಿ ಬೇಕೇ ಬೇಕು. ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ಒಳ್ಳೆಯದೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
(PC: Canva)(2 / 9)
ಈರುಳ್ಳಿಯಲ್ಲಿರುವ ಪೋಷಕಾಂಶಗಳು: ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳು ಮತ್ತು ಕ್ವೆರ್ಸೆಟಿನ್ ಹೇರಳವಾಗಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹದಲ್ಲಿನ ಜೀವಕೋಶಗಳನ್ನು ರಕ್ಷಿಸುತ್ತದೆ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಎಂದು ಆಹಾರ ತಜ್ಞೆ ವೃತಿ ಶ್ರೀವಾಸ್ತವ ಹೇಳಿದ್ದಾರೆ.
(PC: Canva)(3 / 9)
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಈರುಳ್ಳಿಯಲ್ಲಿರುವ ಖನಿಜಗಳು ಮತ್ತು ಸಲ್ಫರ್ ಸಂಯುಕ್ತಗಳಾದ ಕ್ವೆರ್ಸೆಟಿನ್, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಅವು ಇನ್ಸುಲಿನ್ ಪ್ರತಿರೋಧವನ್ನು ತಡೆಯುತ್ತವೆ. ಈರುಳ್ಳಿಯೊಂದಿಗೆ ನಿಂಬೆ ರಸ ಮತ್ತು ಕಾಳುಮೆಣಸು ತಿನ್ನುವುದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕಾರಿ ಸಮಸ್ಯೆ ಇಲ್ಲದವರಿಗೆ ಈರುಳ್ಳಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದಾಗಿ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
(PC: Canva)(4 / 9)
ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿ: ಈರುಳ್ಳಿಯಲ್ಲಿ ನಾರಿನಂಶ ಇರುವುದರಿಂದ, ಇದು ಕರುಳಿನ ಬ್ಯಾಕ್ಟೀರಿಯಾಕ್ಕೆ ಉತ್ತಮ ಆಹಾರವಾಗಿದೆ. ಇದು ಒಟ್ಟಾರೆ ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಆರೋಗ್ಯಕರ ದೇಹಕ್ಕಾಗಿ ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಹೀಗಾಗಿ ಈರುಳ್ಳಿ ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.
(PC: Canva)(5 / 9)
ಹಸಿ ಈರುಳ್ಳಿ ತಿನ್ನುವುದು ಒಳ್ಳೆಯದೇ?: ಹಸಿ ಈರುಳ್ಳಿ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಅವು ಉಂಟುಮಾಡುವ ಅಡ್ಡಪರಿಣಾಮಗಳ ಬಗ್ಗೆಯೂ ಪ್ರತಿಯೊಬ್ಬರೂ ತಿಳಿದಿರಬೇಕು. ಈರುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆಯಾದರೂ, ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದವರಿಗೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಕಡಿಮೆ ಆಸಿಡ್ ಮಟ್ಟ, ಆಸಿಡ್ ರಿಫ್ಲಕ್ಸ್ ಅಥವಾ ಐಬಿಎಸ್‍ನಂತಹ ಸಮಸ್ಯೆಗಳನ್ನು ಹೊಂದಿರುವವರು ಪ್ರತಿದಿನ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಎದೆಯುರಿ ಮುಂತಾದ ಸಮಸ್ಯೆಗಳನ್ನು ಎದುರಿಸಬಹುದು.
(PC: Canva)(6 / 9)
ಈರುಳ್ಳಿ ರಕ್ತ ತೆಳುವಾಗುವ ಲಕ್ಷಣಗಳನ್ನು ಹೊಂದಿದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಉಪಯುಕ್ತವಾಗಿದೆ. ಆದರೆ, ಇದಕ್ಕಾಗಿ ಈಗಾಗಲೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಹಸಿ ಈರುಳ್ಳಿಯನ್ನು ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕಾದುದು ಮುಖ್ಯ.
(PC: Canva)(7 / 9)
ಪ್ರತಿದಿನ, ಒಬ್ಬ ವ್ಯಕ್ತಿಯು ತನ್ನ ಊಟದೊಂದಿಗೆ ಅರ್ಧ ಹಸಿ ಈರುಳ್ಳಿಯನ್ನು ತಿನ್ನಬಹುದು ಅಥವಾ ಪೂರ್ಣ ಈರುಳ್ಳಿಯನ್ನೂ ತಿನ್ನಬಹುದು. ಇದು ಬಹಳ ಉಪಯುಕ್ತವಾಗಿದೆ. ದಿನಕ್ಕೆ ಒಂದಕ್ಕಿಂತ ಹೆಚ್ಚು ಈರುಳ್ಳಿ ತಿನ್ನದಿರುವುದು ಉತ್ತಮ.
(PC: Canva)(8 / 9)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
(PC: Canva)ಇತರ ಗ್ಯಾಲರಿಗಳು