Health Tips: ಕಫ ಸಮಸ್ಯೆಯಿಂದ ಉಸಿರಾಡೋಕೆ ಕಷ್ಟವಾಗ್ತಿದೆಯೇ; ಈ ಮನೆಮದ್ದಿನಲ್ಲಿದೆ ಪರಿಹಾರ
Phlegm problem solution: ಕಫ ಸಮಸ್ಯೆಯಾದರೆ ತುಂಬಾ ಕಿರಿಕಿರಿ ಎನಿಸುತ್ತದೆ. ಉಸಿರಾಟಕ್ಕೂ ಅಡ್ಡಿಯಾಗುತ್ತದೆ. ಕಫ ಸಮಸ್ಯೆಯನ್ನ ತ್ವರಿತವಾಗಿ ನಿವಾಹಿಸುವಂತಹ ಮನೆಮದ್ದುಗಳಿವೆ. ಅವು ಯಾವುವು ಅನ್ನೋದನ್ನ ತಿಳಿಯಿರಿ.
(1 / 9)
ಕಫ ಕಡಿಮೆಯಾದರೆ ಮಾತ್ರ ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ದೇಹದಲ್ಲಿ ಸಂಗ್ರಹವಾದ ಅಧಿಕ ಲೋಳೆಯನ್ನು ಹೊರಹಾಕಲು ನಿಮ್ಮ ದೇಹಕ್ಕೆ ಸ್ವಲ್ಪ ಶಕ್ತಿಯ ಅಗತ್ಯವಿರುತ್ತದೆ. ಆ ಶಕ್ತಿಯನ್ನು ನೀಡಲು ಪ್ರತಿದಿನ ಕೆಲವು ಆಹಾರಗಳನ್ನು ಸೇವಿಸಬೇಕಾಗುತ್ತದೆ.(Freepik)
(2 / 9)
ನಿಂಬೆ ಹಣ್ಣು: ವಿಟಮಿನ್ ಸಿ ಅಧಿಕವಾಗಿರುವ ನಿಂಬೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ನಿಂಬೆಯಂತಹ ಸಿಟ್ರಸ್ ಹಣ್ಣುಗಳು ಉಸಿರಾದ ಜಾಗದಲ್ಲಿನ ಲೋಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ(Freepik)
(3 / 9)
ಆ್ಯಪಲ್: ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಅಂಶ ಸಮೃದ್ಧವಾಗಿದೆ. ಸೇಬು ಸೇವನೆ ಶುದ್ಧ ಉಸಿರಾಟದ ವ್ಯವಸ್ಥೆಗೆ ಸಪೋರ್ಟ್ ಮಾಡುತ್ತದೆ
(4 / 9)
ಶುಂಠಿ: ನೀವು ಪದೇ ಪದೆ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಶುಂಠಿಯನ್ನು ಸೇವಿಸಿ. ಇದು ಕಫವನ್ನು ತೆಗೆದುಹಾಕಲು ಸಹಕಾರಿಯಾಗಿದೆ(Freepik)
(5 / 9)
ಸೌತಿಕಾಯಿ: ದೇಹದಲ್ಲಿನ ಹೆಚ್ಚುವರಿ ಕಫವನ್ನು ತೆಗೆದುಹಾಕಲು ಸೌತಿಕಾಯಿ ಕೂಡ ಉಪಯುಕ್ತವಾದ ಆಹಾರ ಪದಾರ್ಥ. ದೇಹ ನಿರ್ಜಲೀಕರಣಗೊಂಡರೆ ಕಫ ನಿವಾರಣೆ ಕಷ್ಟವಾಗುತ್ತದೆ. ಹೀಗಾಗಿ ಪ್ರತಿನಿತ್ಯ ಸೌತೆಕಾಯಿ ತಿಂದರೆ ಬೇಗ ಕಫ ವಾಸಿಯಾಗುತ್ತದೆ. ಹೆಚ್ಚು ನೀರು ಕುಡಿಯಬೇಕು. (Freepik)
(6 / 9)
ಬ್ರೊಕೊಲಿ: ಇದರಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತದೆ. ಬ್ರೊಕೊಲಿ ಬಲವಾದ ರೋಗನಿರೋಧಕ ವ್ಯವಸ್ಥೆಯನ್ನು ಒದಗಿಸುತ್ತದೆ(Shutterstock)
(7 / 9)
ಅನಾನಾಸ್: ಈ ರಸಭರಿತ ಹಣ್ಣಿನಲ್ಲಿ ಕಫವನ್ನು ನಿವಾರಿಸುವ ಶಕ್ತಿಯಿದೆ. ಇದು ಬ್ರೋಮೆಲಿನ್ ಎಂಬ ಕಿಣ್ವನ್ನು ಹೊಂದಿರುತ್ತದೆ
(8 / 9)
ಕುಂಬಳಕಾಯಿ ಹೋಲುವ ಚೀನೀಕಾಯಿ:ವಿಟಮಿನ್ ಎ ಸಮೃದ್ಧವಾಗಿರುವ ಈ ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಮ್ಯೂಕೋಸಲ್ ಆರೋಗ್ಯಕ್ಕೆ ಸಹಕಾರಿಯಾಗಿದೆ
ಇತರ ಗ್ಯಾಲರಿಗಳು