ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Garlic Peel: ವೇಸ್ಟ್ ಎಂದು ಬೆಳ್ಳುಳ್ಳಿ ಸಿಪ್ಪೆಯನ್ನ ಬಿಸಾಕ್ತೀರಿ ಅಲ್ವಾ? ಇದರ ಪ್ರಯೋಜನಗಳೂ ತಿಳಿದಿರಲಿ

Garlic Peel: ವೇಸ್ಟ್ ಎಂದು ಬೆಳ್ಳುಳ್ಳಿ ಸಿಪ್ಪೆಯನ್ನ ಬಿಸಾಕ್ತೀರಿ ಅಲ್ವಾ? ಇದರ ಪ್ರಯೋಜನಗಳೂ ತಿಳಿದಿರಲಿ

  • Benefits of Garlic Peel: ಬೆಳ್ಳುಳ್ಳಿ ಖಾದ್ಯಗಳ ರುಚಿ ಮಾತ್ರ ಹೆಚ್ಚಿಸುವುದಿಲ್ಲ, ಇದು ಆರೋಗ್ಯಕ್ಕೆ ಸಹ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅನೇಕರು ಸಂಪೂರ್ಣವಾಗಿ ಸಿಪ್ಪೆ ಬಿಡಿಸಿ ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುತ್ತಾರೆ. ಆದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿಯೂ ಅನೇಕ ಪ್ರಯೋಜನಗಳು ಅಡಗಿದೆ ಎಂದು ನಮಗೆ ತಿಳಿದಿಲ್ಲ.

ಒಂದು ಇಡೀ ಬೆಳ್ಳುಳ್ಳಿ ಗಡ್ಡೆ ಮೇಲೆ ಅಂಗಿಯಂತೆ ಇರುವ ಸಿಪ್ಪೆಯನ್ನು ತೆಗೆಯಲೇಬೇಕು. ಆದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಬೆಳ್ಳುಳ್ಳಿ ಎಸಳುಗಳ ಮೇಲೆ ಇರುವ ಸಿಪ್ಪೆಯನ್ನು ಅದರ ಸಹಿತ ಅಡುಗೆಗೆ ಹಾಕಿದರೆ ತಪ್ಪೇನಿಲ್ಲ.  
icon

(1 / 8)

ಬೆಳ್ಳುಳ್ಳಿಯ ಸಿಪ್ಪೆಗಳು ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿವೆ. ಹೀಗಾಗಿ ಇದನ್ನು ಆಹಾರದಲ್ಲಿ ಸೇರಿಸಿ ಬೇಯಿಸುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.  
icon

(2 / 8)

ಬೆಳ್ಳುಳ್ಳಿ ಎಸಳುಗಳ ಮೇಲಿನ ಸಿಪ್ಪೆಯನ್ನು ಉಪ್ಪಿನೊಂದಿಗೆ ಇಡಿ. ಈ ಉಪ್ಪನ್ನ ಅಡುಗೆಗೆ ಬಳಸಿದರೆ ಖಾದ್ಯಗಳಿಗೆ ಪರಿಮಳ ಸಿಗುತ್ತದೆ.  
icon

(3 / 8)

ಬೆಳ್ಳುಳ್ಳಿಯ ಸಿಪ್ಪೆ ಆ್ಯಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.  
icon

(4 / 8)

ನೀರಿನಲ್ಲಿ ಬೆಳ್ಳುಳ್ಳಿ ಸಿಪ್ಪೆ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಶೀತ, ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ. 
icon

(5 / 8)

ನಿಮ್ಮ ಮನೆಯಲ್ಲಿ ಮಿಶ್ರಗೊಬ್ಬರ ತಯಾರಿಸುತ್ತಿದ್ದರೆ ಅದಕ್ಕೆ ಬೆಳ್ಳುಳ್ಳಿಯ ಸಿಪ್ಪೆಯನ್ನು ಸೇರಿಸಿ. ಗೊಬ್ಬರ ಉತ್ತಮವಾಗುತ್ತದೆ.  
icon

(6 / 8)

ಬೆಳ್ಳುಳ್ಳಿ ಸಿಪ್ಪೆಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಅದನ್ನು ತಲೆಗೆ ಹಚ್ಚಿದರೆ ಹೊಟ್ಟು ಕಡಿಮೆಯಾಗುತ್ತದೆ. 
icon

(7 / 8)

ನೀರಿನಲ್ಲಿ ಬೆಳ್ಳುಳ್ಳಿ ಸಿಪ್ಪೆ ಹಾಕಿ ಕುದಿಸಿ ಆ ನೀರಿನಲ್ಲಿ ಪಾದಗಳನ್ನು ಅದ್ದಿದ್ದರೆ ಪದಗಳು ಊದಿಕೊಂಡಿರುವುದು ಕಡಿಮೆಯಾಗುತ್ತದೆ.  
icon

(8 / 8)

ನೀರಿನಲ್ಲಿ ಬೆಳ್ಳುಳ್ಳಿ ಸಿಪ್ಪೆ ಹಾಕಿ ಕುದಿಸಿ ಆ ನೀರಿನಲ್ಲಿ ಪಾದಗಳನ್ನು ಅದ್ದಿದ್ದರೆ ಪದಗಳು ಊದಿಕೊಂಡಿರುವುದು ಕಡಿಮೆಯಾಗುತ್ತದೆ.  

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು