ಮದುವೆಯ ನಂತರ ಪುರುಷರಲ್ಲಿ ಹೊಟ್ಟೆಯ ಬೊಜ್ಜು ಹೆಚ್ಚಲು ಕಾರಣವೇನು? ಇಲ್ಲಿದೆ ಇದರ ಹಿಂದಿನ 5 ರಹಸ್ಯ
ಮದುವೆಯ ನಂತರ ಹಲವು ಗಂಡಸರ ತೂಕ ಏರಿಕೆಯಾಗುತ್ತದೆ, ಹೊಟ್ಟೆಯ ಬೊಜ್ಜು ಹೆಚ್ಚುತ್ತದೆ. ಇದಕ್ಕೆ ಕಾರಣವೇನು ಎಂದು ನೀವು ಯೋಚಿಸಿದ್ದೀರಾ, ಇದರ ಹಿಂದಿನ 5 ರಹಸ್ಯಗಳು ಹೀಗಿವೆ ನೋಡಿ.
(1 / 8)
ಮದುವೆಯಾದ ಸ್ವಲ್ಪ ಸಮಯದ ನಂತರ ಪುರುಷರಲ್ಲಿ ಹೊಟ್ಟೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅವರ ವ್ಯಕ್ತಿತ್ವ ಹಾಳಾಗುವುದಲ್ಲದೆ, ಅವರ ಆತ್ಮವಿಶ್ವಾಸವೂ ಕುಗ್ಗಲು ಪ್ರಾರಂಭವಾಗುತ್ತದೆ. ಹಾಗಾದರೆ ಮದುವೆಯ ಬಳಿಕ ಪುರುಷರಲ್ಲಿ ತೂಕ ಹೆಚ್ಚಲು, ಬೆಲ್ಲಿ ಫ್ಯಾಟ್ ಉಂಟಾಗಲು ಕಾರಣ ಏನು? ತಜ್ಞರ ಪ್ರಕಾರ, ಮದುವೆಯ ನಂತರ ಪುರುಷರ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ತೂಕ ಹೆಚ್ಚಾಗಲು ಹಾಗೂ ಬೆಲ್ಲಿ ಫ್ಯಾಟ್ ಉಂಟಾಗಲು ಮೂಲವಾಗುತ್ತದೆ.
(Pic Credit: Shutterstock)(2 / 8)
ಮದುವೆಯ ನಂತರ ಪುರುಷರ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ದೈನಂದಿನ ದಿನಚರಿಯ ನಡುವೆ ಪುರುಷರು ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗೆ ಸಮಯ ಕೊಡುವುದನ್ನು ನಿಲ್ಲಿಸುತ್ತಾರೆ. ಮನೆಯ ಜವಾಬ್ದಾರಿಗಳು, ಸಮಯದ ಅಭಾವದಿಂದಾಗಿ ವ್ಯಾಯಾಮ ಮಾಡುವುದಕ್ಕೆ, ಜಿಮ್‌ಗೆ ಹೋಗಲು ಸಮಯ ಹೊಂದಿಸುವುದು ಕಷ್ಟವಾಗುತ್ತದೆ. ಇದು ಹೊಟ್ಟೆಯ ಕೊಬ್ಬು ಉಂಟಾಗಲು ಕಾರಣವಾಗುತ್ತದೆ.
(Pic Credit: Shutterstock)(3 / 8)
ಮದುವೆಯ ನಂತರ ಬಗೆ ಬಗೆ ಆಹಾರ ತಿನ್ನುತ್ತಾರೆ. ಅದರಲ್ಲೂ ವಿಶೇಷವಾಗಿ ಎಣ್ಣೆ, ಕೊಬ್ಬಿನಾಂಶ ಇರುವ ಆಹಾರಗಳ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೇ ಸಾಮಾಜಿಕ ಕೂಟ, ಕುಟುಂಬಸ್ಥರ ಮನೆಯ ಔತಣಕೂಟ ಅಂತೆಲ್ಲಾ ಹೆಚ್ಚು ಹೆಚ್ಚು ತಿನ್ನುತ್ತಾರೆ. ಇದರಿಂದ ತೂಕ ಏರಿಕೆಯ ಜೊತೆಗೆ ಹೊಟ್ಟೆಯ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.
(Pic Credit: Shutterstock)(4 / 8)
ವೈವಾಹಿಕ ಜೀವನದ ಜವಾಬ್ದಾರಿಗಳು ಒತ್ತಡವನ್ನು ಹೆಚ್ಚಿಸಬಹುದು. ಇದು ಕಾರ್ಟಿಸೋಲ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಹೊಟ್ಟೆಯ ಕೊಬ್ಬಿನ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ. ನಿದ್ರೆಯ ಕೊರತೆಯು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವ ಮೂಲಕ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ.
(Pic Credit: Shutterstock)(5 / 8)
ವಯಸ್ಸಾದಂತೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟಗಳು ಕಡಿಮೆಯಾಗಬಹುದು. ಇದರಿಂದಾಗಿ ಸ್ನಾಯುಗಳ ಬದಲಿಗೆ ಕೊಬ್ಬು ಸಂಗ್ರಹವಾಗುತ್ತದೆ, ವಿಶೇಷವಾಗಿ ಹೊಟ್ಟೆಯ ಸುತ್ತಲೂ ಬೊಜ್ಜು ಬೆಳೆಯುತ್ತದೆ.
(Pic Credit: Shutterstock)(6 / 8)
ಮದುವೆಯ ನಂತರ ಹಲವು ಬಾರಿ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಪಾರ್ಟಿ ಅಂತೆಲ್ಲಾ ಸೇರುವುದು ಸಹಜ. ಇದರಿಂದ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಬಹುದು. ಇದು ಹೊಟ್ಟೆಯಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಲು ಕಾರಣವಾಗಬಹುದು. ಮುಖ್ಯವಾಗಿ ಆಲ್ಕೋಹಾಲ್‌ನಲ್ಲಿರುವ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳು, ಇನ್ಸುಲಿನ್ ಪ್ರತಿರೋಧ ಮತ್ತು ಯಕೃತ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
(Pic Credit: Shutterstock)(7 / 8)
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ ನಿಯಮಿತ ವ್ಯಾಯಾಮ, ಕಾರ್ಡಿಯೋ ಮತ್ತು ಶಕ್ತಿ ತರಬೇತಿಯಂತಹ ವ್ಯಾಯಾಮಗಳನ್ನು ಮಾಡಿ. ಇದಲ್ಲದೆ, ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಸಮತೋಲಿತ ಫೈಬರ್ ಮತ್ತು ಪ್ರೊಟೀನ್ ಸಮೃದ್ಧ ಆಹಾರವನ್ನು ಸೇರಿಸಿ. ಒತ್ತಡ ನಿರ್ವಹಣೆಗೆ ಯೋಗ ಮತ್ತು ಧ್ಯಾನ ಮಾಡಿ. ಸಾಕಷ್ಟು ನಿದ್ರೆ ಮಾಡಿ ಮತ್ತು ಮದ್ಯ ಸೇವನೆಯನ್ನು ಮಿತಿಗೊಳಿಸಿ
(Pic Credit: Shutterstock)ಇತರ ಗ್ಯಾಲರಿಗಳು