ಮಾವಿನ ಹಣ್ಣು ತಿಂದ ನಂತರ ತಪ್ಪಿಯೂ ಈ 5 ಆಹಾರಗಳನ್ನು ತಿನ್ನಬಾರದು, ಆರೋಗ್ಯ ಕೆಡೋದು ಖಂಡಿತ
ಮಾವಿನ ಹಣ್ಣು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಏಪ್ರಿಲ್, ಮೇ ತಿಂಗಳಲ್ಲಿ ಹೇರಳವಾಗಿ ಸಿಗುವ ಮಾವು ನಿಮಗೂ ಇಷ್ಟವಿರಬಹುದು. ಆದರೆ ಮಾವು ತಿಂದ ನಂತರ ತಪ್ಪಿಯೂ ಈ ಆಹಾರಗಳನ್ನು ತಿನ್ನಬಾರದು, ಇದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ.
(1 / 6)
ಸದ್ಯ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನಹಣ್ಣಿನದ್ದೇ ದರ್ಬಾರು. ಈ ಹಣ್ಣಿನ ರುಚಿ, ಘಮಕ್ಕೆ ಮನ ಸೋಲದವರಿಲ್ಲ. ಈ ತಿಂಗಳಲ್ಲಿ ಬಗೆ ಬಗೆಯ ಮಾವು ಮಾರುಕಟ್ಟೆಗೆ ಕಾಲಿಡುತ್ತದೆ. ನೀವು ಕೂಡ ಮಾವು ಖುಷಿ ಎನ್ನುವ ಕಾರಣಕ್ಕೆ ವಿವಿಧ ಬಗೆಯ ಮಾವಿನ ಹಣ್ಣು ತಂದು ಇರಿಸಿಕೊಂಡಿರಬಹುದು. ಆದರೆ ಮಾವಿನ ಹಣ್ಣು ತಿಂದ ಮೇಲೆ ತಪ್ಪಿಯೂ ಈ ಕೆಲವು ಆಹಾರಗಳನ್ನು ತಿನ್ನಬಾರದು, ಇದರಿಂದ ಆರೋಗ್ಯಕ್ಕೆ ಹಾನಿ ಖಚಿತ.
(2 / 6)
ಮೊಸರು: ಜನರು ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ, ಆದರೆ ಈ ಆಹಾರ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಎರಡೂ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
(3 / 6)
ಹಾಗಲಕಾಯಿ: ಬೇಸಿಗೆಯಲ್ಲಿ ಹೆಚ್ಚು ಇಷ್ಟಪಡುವ ತರಕಾರಿಗಳಲ್ಲಿ ಹಾಗಲಕಾಯಿ ಕೂಡ ಒಂದು. ಆದರೆ, ಮಾವಿನ ಹಣ್ಣು ತಿಂದ ನಂತರ ಅದನ್ನು ತಿನ್ನಬಾರದು ಎಂಬ ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಈ ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆ ಎದುರಾಗಬಹುದು.
(4 / 6)
ಮಸಾಲೆಯುಕ್ತ ಆಹಾರ: ಬೇಸಿಗೆಯಲ್ಲಿ ಊಟದ ನಂತರ ಈ ರುಚಿಕರವಾದ ಹಣ್ಣನ್ನು ಸವಿಯುವುದು ಸಾಮಾನ್ಯ ಅಭ್ಯಾಸ. ಆದರೆ, ನೀವು ಮಸಾಲೆಯುಕ್ತ ಆಹಾರದೊಂದಿಗೆ ಮಾವಿನಹಣ್ಣನ್ನು ಸೇವಿಸಿದಾಗ, ಅದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಅದಕ್ಕಾಗಿಯೇ ಮಾವಿನಹಣ್ಣಿನೊಂದಿಗೆ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು.
(5 / 6)
ತಂಪು ಪಾನೀಯ: ಮಾವಿನ ಹಣ್ಣು ತಿಂದ ತಕ್ಷಣ ನೀವು ಸೋಡಾ ಅಥವಾ ತಂಪು ಪಾನೀಯಗಳನ್ನು ಕುಡಿದರೆ, ಎರಡರಲ್ಲೂ ಸಕ್ಕರೆ ಅಧಿಕವಾಗಿರುತ್ತದೆ ಮತ್ತು ಸಕ್ಕರೆ ಮಟ್ಟ ಹೆಚ್ಚಾಗಬಹುದು.
ಇತರ ಗ್ಯಾಲರಿಗಳು