ನೀವು ಖರೀದಿಸಿದ ಮಾವಿನ ಹಣ್ಣು ತಿನ್ನಲು ಯೋಗ್ಯವೇ; ರಾಸಾಯನಿಕ ಬಳಸಿ ಮಾಗಿಸಿದ ಹಣ್ಣನ್ನು ಕಂಡುಹಿಡಿಯಲು ಇಲ್ಲಿದೆ ಟಿಪ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀವು ಖರೀದಿಸಿದ ಮಾವಿನ ಹಣ್ಣು ತಿನ್ನಲು ಯೋಗ್ಯವೇ; ರಾಸಾಯನಿಕ ಬಳಸಿ ಮಾಗಿಸಿದ ಹಣ್ಣನ್ನು ಕಂಡುಹಿಡಿಯಲು ಇಲ್ಲಿದೆ ಟಿಪ್ಸ್‌

ನೀವು ಖರೀದಿಸಿದ ಮಾವಿನ ಹಣ್ಣು ತಿನ್ನಲು ಯೋಗ್ಯವೇ; ರಾಸಾಯನಿಕ ಬಳಸಿ ಮಾಗಿಸಿದ ಹಣ್ಣನ್ನು ಕಂಡುಹಿಡಿಯಲು ಇಲ್ಲಿದೆ ಟಿಪ್ಸ್‌

ಮಾರುಕಟ್ಟೆಯಲ್ಲೀಗ ಬಗೆ ಬಗೆ ಮಾವಿನ ಹಣ್ಣುಗಳೇ ಕಣ್ಣಿಗೆ ಬೀಳುತ್ತವೆ. ಎಲ್ಲಿ ನೋಡಿದರೂ ಮಾವಿನ ಹಣ್ಣಿನ ಘಮ ಹರಡಿರುತ್ತದೆ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಮಾವಿನ ಹಣ್ಣುಗಳು ತಿನ್ನಲು ಯೋಗ್ಯವಲ್ಲ. ರಾಸಾಯನಿಕ ಬಳಸಿ ಹಣ್ಣು ಮಾಡಿದ ಮಾವನ್ನು ಗುರುತಿಸುವುದು ಹೇಗೆ ನೋಡಿ.

ಇದು ಮಾವಿನ ಹಣ್ಣಿನ ಸೀಸನ್‌. ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬರುವುದನ್ನೇ ಹಲವರು ಕಾಯುತ್ತಿರುತ್ತಾರೆ. ಮಲ್ಲಿಕಾ, ಬೈಂಗಪಲ್ಲಿ, ಸಿಂಧೂರ, ತೋತಾಪುರಿ ಹೀಗೆ ಮಾವಿನಲ್ಲಿ ಹಲವು ವಿಧಗಳು. ಮಾವಿನ ರುಚಿಗೆ ಮನಸೋಲದವರಿಲ್ಲ. ಆದರೆ ನಾವು ಖರೀದಿಸುವ ಎಲ್ಲಾ ಮಾವಿನ ಹಣ್ಣುಗಳು ತಿನ್ನಲು ಯೋಗ್ಯವೇ ಎಂಬ ಪ್ರಶ್ನೆ ಇತ್ತೀಚೆಗೆ ಎದುರಾಗುತ್ತಿದೆ.
icon

(1 / 9)

ಇತ್ತೀಚಿನ ದಿನಗಳಲ್ಲಿ ಮಾವಿನ ಹಣ್ಣಿಗೆ ರಾಸಾಯನಿಕ ಸಂಯಕ್ತ ಕ್ಯಾಲ್ಸಿಯಂ ಕಾರ್ಬೈಡ್‌ ಎಂಬ ವಸ್ತುವನ್ನು ಬಳಸಿ ಹಣ್ಣು ಮಾಡಲಾಗುತ್ತಿದೆ. ಈ ರೀತಿ ಹಣ್ಣಾಗಿಸಿದ ಮಾವು ತಿನ್ನುವುದರಿಂದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ, ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
icon

(2 / 9)

ಮಾವಿನ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡಿದಾಗ ಅವು ನೈಸರ್ಗಿಕವಾಗಿ ಹಣ್ಣಾಗುತ್ತವೆ, ಇದು ನಿರುಪದ್ರವ ಸಸ್ಯ ಹಾರ್ಮೋನ್. ಆದರೆ ಈ ಪ್ರಕ್ರಿಯೆಗೆ ಹೆಚ್ಚು ಸಮಯ ಹಿಡಿಯುತ್ತದೆ. ಆ ಕಾರಣದಿಂದ ಬೇಗ ಹಣ್ಣಾಗಿಸಿ, ಮಾರಾಟ ಮಾಡುವ ದುರದ್ದೇಶದಿಂದ ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಮಾವನ್ನು ಹಣ್ಣಾಗಿಸುತ್ತಾರೆ. ಹಾಗಾದರೆ ಮಾವು ನೈಸರ್ಗಿಕವಾಗಿ ಹಣ್ಣಾಗಿದ್ದಾ ಅಥವಾ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಹಣ್ಣಾಗಿಸಿದ್ದ ಎಂಬುದನ್ನು ನೋಡೋದು ಹೇಗೆ? ಇದಕ್ಕಾಗಿ ಇಲ್ಲಿದೆ ಕೆಲವು ಟಿಪ್ಸ್‌.
icon

(3 / 9)

ನೀರಿನ ಪರೀಕ್ಷೆ: ಕೃತಕವಾಗಿ ಹಣ್ಣಾಗಿಸಿದ ಮಾವನ್ನು ಗುರುತಿಸಲು ಇದು ಸುಲಭ ವಿಧಾನ. ಒಂದು ಬಕೆಟ್‌ ನೀರಿಗೆ ಮಾವನ್ನು ಹಾಕಿ. ಅದು ತೇಲುತ್ತಿದ್ದರೆ ಅದಕ್ಕೆ ರಾಸಾಯನಿಕ ಬಳಸಲಾಗಿದೆ ಎಂದರ್ಥ. ಮುಳುಗಿದರೆ ಅಂತಹ ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದು ಎಂದು ತಿಳಿಯಬಹುದು.
icon

(4 / 9)

ಬಣ್ಣವನ್ನು ಪರಿಶೀಲಿಸಿ: ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಏಕರೂಪದ ಹಳದಿ-ಕಿತ್ತಳೆ ಬಣ್ಣವನ್ನು ಹೊಂದಿರುತ್ತವೆ. ಕೃತಕವಾಗಿ ಮಾಗಿದ ಮಾವಿನಹಣ್ಣುಗಳು ಅಸಮಾನ ಬಣ್ಣ ಅಂದರೆ ಒಂದೇ ಹಣ್ಣಿನಲ್ಲಿ ಎರಡು, ಮೂರು ರೀತಿಯ ಬಣ್ಣ ಇರುತ್ತದೆ. ಹಸಿರು ತೇಪೆ ಇರುವುದು, ಅತಿಯಾದ ಹಳದಿ ಬಣ್ಣ ಹೊಂದಿದ್ದಾರೆ ಅಂದು ರಾಸಾಯನಿಕ ಬಳಸಿ ಹಣ್ಣಾಗಿದ್ದು ಎಂದುಕೊಳ್ಳಬಹುದು.
icon

(5 / 9)

ರಾಸಾಯನಿಕ ಬಳಸಿ ಹಣ್ಣಾದ ಮಾವುಗಳು ಸಾಮಾನ್ಯವಾಗಿ ತುಂಬಾ ಮೃದು ಮತ್ತು ಮೆತ್ತಗಿರುತ್ತವೆ, ಆದರೆ ನೈಸರ್ಗಿಕ ಮಾವಿನಹಣ್ಣುಗಳು ದೃಢವಾದ ಆದರೆ ಕೋಮಲವಾಗಿ ಕಾಣುತ್ತವೆ.
icon

(6 / 9)

ಮಾವಿನ ಹಣ್ಣು ನಿಮ್ಮ ಬಾಯಿ ಅಥವಾ ಗಂಟಲಿನಲ್ಲಿ ಸ್ವಲ್ಪ ಸುಡುವ ಸಂವೇದನೆ ಮೂಡುವಂತೆ ಮಾಡಿದರೆ ಅದರಲ್ಲಿ ಹಾನಿಕಾರಕ ರಾಸಾಯನಿಕಗಳು ಇರಬಹುದು ಎಂದರ್ಥ.
icon

(7 / 9)

ತಿನ್ನಲು ಯೋಗ್ಯವಾದ ಮಾವಿನ ಹಣ್ಣು ಖರೀದಿಸಲು ಸ್ಥಳೀಯ ರೈತರು ಹಾಗೂ ಸಾವಯವ ಅಂಗಡಿಗಳಿಂದ ಮಾವನ್ನು ಖರೀದಿಸಿ.
icon

(8 / 9)

ಮಾವಿನ ಹಣ್ಣುನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ಕೆಲ ಹೊತ್ತು ನೆನೆಸಿಡಿ, ನಂತರ ಚೆನ್ನಾಗಿ ತೊಳೆದು ತಿನ್ನಿ. ರಾಸಾಯನಿಕಗಳ ಹಾನಿ ತಪ್ಪಿಸಲು ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ತಿನ್ನುವುದು ಕೂಡ ಉತ್ತಮ.
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು