Fruits: ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿನ್ನುವುದು ಎಷ್ಟು ರುಚಿ ಅಲ್ವಾ; ಆದರೆ ಆರೋಗ್ಯಕ್ಕೆ ಅದು ಎಷ್ಟು ಅಪಾಯಕಾರಿ ನಿಮಗೆ ಅರಿವಿದ್ಯಾ?
ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರು ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟ ಪಡದೆ ಮಿಲ್ಕ್ ಶೇಕ್ , ಜ್ಯೂಸ್ ಮಾಡಿ ಕುಡಿಯುತ್ತಾರೆ. ಇನ್ನೂ ಕೆಲವರು ಹಣ್ಣನ್ನು ಕತ್ತರಿಸಿ ಉಪ್ಪು ಖಾರ ಮಿಕ್ಸ್ ಮಾಡಿ ತಿನ್ನುತ್ತಾರೆ.
(1 / 7)
ಕೆಲವೊಂದು ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿನ್ನುವುದರಿಂದ ರುಚಿ ಏನೋ ಚೆನ್ನಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅದು ಒಳ್ಳೆಯದಾ? ಈ ರೀತಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ಆಹಾರ ತಜ್ಞರು. (Freepik)
(2 / 7)
ಹೊರಗಿನಿಂದ ತಂದ ಅಥವಾ ನಮ್ಮ ಮನೆಯ ತೋಟದಲ್ಲೇ ಬಿಟ್ಟ ಸೀಬೆ ಕಾಯಿ ಹಾಗೂ ಮಾವಿನ ಕಾಯಿಗೆ ಬಹಳ ಜನರು ಉಪ್ಪು ಹಾಗೂ ಖಾರ ಎರಡನ್ನೂ ಮಿಕ್ಸ್ ಮಾಡಿ ತಿನ್ನುತ್ತಾರೆ. ಜೊತೆಗೆ ಹುಣಿಸೆಹಣ್ಣನ್ನು ಕೂಡಾ ಇದೇ ರೀತಿ ತಿನ್ನುತ್ತಾರೆ. ಆದರೆ ಇನ್ನೆಂದೂ ಈ ರೀತಿ ಮಾಡಬೇಡಿ. (Unsplash)
(3 / 7)
ಹಣ್ಣುಗಳಿಗೆ ಉಪ್ಪು ಅಥವಾ ಖಾರ ಸೇರಿಸಿ ತಿಂದರೆ ಅದರ ಪೋಷಕಾಂಶಗಳು ಕಡಿಮೆ ಆಗುತ್ತವೆ. ಹಣ್ಣುಗಳಿಗೆ ಉಪ್ಪು ಸೇರಿಸಿದಾಗ ಅದರಲ್ಲಿ ನೀರು ಉತ್ಪತ್ತಿ ಆಗಿ ಹೊರ ಚೆಲ್ಲುತ್ತದೆ. ಇದರ ಮೂಲಕ ಹಣ್ಣುಗಳಲ್ಲಿ ಇರುವ ಪೋಷಕಾಂಶ ಕೂಡಾ ಹೊರ ಹೋಗುತ್ತದೆ. (Freepik)
(4 / 7)
ಇನ್ನೂ ಕೆಲವರು ಹಣ್ಣುಗಳು ಹುಳಿ ಅಥವಾ ಸಿಹಿ ಇಲ್ಲದಿದ್ದರೆ ಜೊತೆಗೆ ಸಕ್ಕರೆ ಕೂಡಾ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. (Unsplash)
(5 / 7)
ಊಟಕ್ಕೆ ಉಪ್ಪು ಸೇರಿಸಿ ತಿನ್ನುವುದು ಸಹಜ. ಆದರೆ ಪದೆ ಪದೇ ಪ್ರತಿ ಪದಾರ್ಥಗಳಿಗೂ ಉಪ್ಪು ಸೇರಿಸಿ ತಿಂದರೆ ಅದು ಮೂತ್ರಪಿಂಡಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಕಿಡ್ನಿ ಸಮಸ್ಯೆ ಕಟ್ಟಿಟ್ಟ ಬುತ್ತಿ. (Freepik)
(6 / 7)
ಹಣ್ಣುಗಳಿಗೆ ಉಪ್ಪು ಸೇರಿಸಿ ತಿಂದರೆ ಉರಿಯೂತದ ಅಪಾಯವಿದೆ. ಉಪ್ಪಿನಲ್ಲಿರುವ ಸೋಡಿಯಂ ಮತ್ತು ಅದರ ಪಿಹೆಚ್ ಮಟ್ಟವು ನೀರನ್ನು ದೇಹದಲ್ಲೇ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಉರಿಯೂತ ಹೆಚ್ಚಾಗುತ್ತದೆ. (Freepik)
ಇತರ ಗ್ಯಾಲರಿಗಳು