Monsoon Health: ಶೀತ-ಕೆಮ್ಮು-ಕಫ ನಿರಂತರವಾಗಿ ಕಾಡುತ್ತಿದ್ದರೆ, ತ್ವರಿತ ನಿವಾರಣೆಗೆ ಈ ಮನೆಮದ್ದುಗಳನ್ನ ಟ್ರೈ ಮಾಡಿ
Home Remedies For Cough And Cold: ಮಳೆಗಾಲದಲ್ಲಿ ಬದಲಾಗುವ ವಾತಾವರಣವು ಇಲ್ಲದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಸಮಯದಲ್ಲಿ ನಿಮ್ಮ ಎದೆಯಲ್ಲಿ ಸಂಗ್ರಹವಾಗುವ ಕಫದಿಂದ ನೀವು ಸಹ ತೊಂದರೆಗೆ ಒಳಗಾಗಬಹುದು. ಅಲ್ಲದೇ ನಿರಂತರವಾಗಿ ಶೀತ, ನೆಗಡಿ, ಕೆಮ್ಮು ನಿಮ್ಮನ್ನು ಬಾಧಿಸಬಹುದು. ಇದರ ನಿವಾರಣೆಗೆ ಇಲ್ಲಿದೆ ಕೆಲವು ಸರಳ ಮನೆಮದ್ದು.
(1 / 8)
ಮಾನ್ಸೂನ್ ಋತುವಿನಲ್ಲಿ, ಜನರು ಹೆಚ್ಚಾಗಿ ಶೀತ ಮತ್ತು ಕೆಮ್ಮಿನ ಜೊತೆಗೆ ಎದೆಯಲ್ಲಿ ಕಫದ ಶೇಖರಣೆಯ ಬಗ್ಗೆ ದೂರು ನೀಡುತ್ತಾರೆ. ಎದೆಯಲ್ಲಿ ಸಂಗ್ರಹವಾದ ಕಫದಿಂದ ಪರಿಹಾರ ಪಡೆಯಲು ಹೆಚ್ಚಿನ ಜನರು ಆಂಟಿಬಯೋಟಿಕ್ಸ್‌ಗಳನ್ನು ಸೇವಿಸುತ್ತಾರೆ. ಆದರೆ ಕೆಲವೊಮ್ಮೆ ಆಂಟಿಬಯೋಟಿಕ್ಸ್ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಇದಕ್ಕಾಗಿ ಮನೆಮದ್ದುಗಳೇ ಪರಿಣಾಮಕಾರಿ ಔಷಧಿ.
(shutterstock)(2 / 8)
ತುಳಸಿ ಮತ್ತು ಶುಂಠಿ ಚಹಾ: ತುಳಸಿ ಮತ್ತು ಶುಂಠಿಯಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಎದೆಯಲ್ಲಿ ಸಂಗ್ರಹವಾದ ಲೋಳೆಯನ್ನು ಹೊರಹಾಕಲು, ನೀವು ತುಳಸಿ ಶುಂಠಿ ಚಹಾವನ್ನು ಕುಡಿಯುವ ಅಭ್ಯಾಸ ಮಾಡಿ. ಇದರಿಂದ ಆದಷ್ಟು ಬೇಗ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
(shutterstock)(3 / 8)
ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆಯ ಕೆಲವು ಹನಿಗಳನ್ನು ಮೂಗು ಮತ್ತು ಎದೆಗೆ ಹಚ್ಚುವುದರಿಂದ ಎದೆಯಲ್ಲಿ ಸಂಗ್ರಹವಾದ ಕಫದಿಂದ ಪರಿಹಾರವನ್ನು ಪಡೆಯಬಹುದು.
(shutterstock)(4 / 8)
ಬಿಸಿನೀರಿನ ಹಬೆ: ಎದೆಯಲ್ಲಿ ಸಂಗ್ರಹವಾದ ಕಫದಿಂದ ಪರಿಹಾರ ಪಡೆಯಲು, ಬಿಸಿ ನೀರಿನಲ್ಲಿ ಕೆಲವು ಹನಿ ಪುದೀನಾ ಎಣ್ಣೆ ಸೇರಿಸಿ ಮತ್ತು ಹಬೆ ತೆಗೆದುಕೊಳ್ಳಿ. ಈ ಕ್ರಮವನ್ನು ದಿನಕ್ಕೆ ಎರಡು ಮೂರು ಬಾರಿ ಮಾಡಿ. ಇದರಿಂದ ಶೀತ, ನೆಗಡಿ, ಕೆಮ್ಮು, ಕಫದ ಸಮಸ್ಯೆ ಶೀಘ್ರ ಗುಣಮುಖವಾಗುತ್ತದೆ.
(shutterstock)(5 / 8)
ಹಬೆ ತೆಗೆದುಕೊಂಡ ನಂತರ, ಒಂದು ದೊಡ್ಡ ಬೌಲ್ ನೀರಿನಲ್ಲಿ ಒಂದು ಚಮಚ ಚಹಾ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ಅದಕ್ಕೆ ಕಲ್ಲು ಉಪ್ಪು ಸೇರಿಸಿ ಮತ್ತು ಗಾರ್ಗ್ಲ್ ಮಾಡಿ. ಈ ರೀತಿ ಮಾಡುವುದರಿಂದ ಟಾನ್ಸಿಲ್ ಸಮಸ್ಯೆಗೂ ಪರಿಹಾರ ದೊರೆಯುವುದಲ್ಲದೆ ಎದೆಯಲ್ಲಿ ಸಂಗ್ರಹವಾಗಿರುವ ಕಫ ಹಾಗೂ ಗಂಟಲು ನೋವಿಗೆ ಪರಿಹಾರ ದೊರೆಯುತ್ತದೆ.
(SHUTTERSTOCK)(6 / 8)
ಕೆಮ್ಮಿನಿಂದ ಪರಿಹಾರ ಪಡೆಯಲು ಹಸುವಿನ ತುಪ್ಪದಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಎದೆಗೆ ಹಚ್ಚಿಕೊಳ್ಳಿ. ಈ ಪರಿಹಾರವನ್ನು ಮಾಡುವುದರಿಂದ ಎದೆಯಲ್ಲಿ ಸಂಗ್ರಹವಾದ ಕಫವು ಕರಗಿ ಹೋಗುತ್ತದೆ.
(shutterstock)(7 / 8)
ಎದೆಯಲ್ಲಿ ಸಂಗ್ರಹವಾದ ಕಫದಿಂದ ಪರಿಹಾರ ಪಡೆಯಲು ತುಳಸಿ, ಅಮೃತಬಳ್ಳಿ, ಬೆಲ್ಲ, ಕರಿಮೆಣಸು, ಶುಂಠಿ ರಸ ಮತ್ತು ಲವಂಗ ಸೇರಿಸಿ ಕಷಾಯ ತಯಾರಿಸಿ. ಈ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಮ್ಮು, ಕಫದಿಂದ ಶೀಘ್ರ ಪರಿಹಾರ ದೊರೆಯುತ್ತದೆ.
(shutterstock)ಇತರ ಗ್ಯಾಲರಿಗಳು