Onion Benefits: ಬೇಸಿಗೆ ಉರಿಗೆ ಈರುಳ್ಳಿ ಮದ್ದು, ಪ್ರತಿದಿನ ಈರುಳ್ಳಿ ಬಳಸಿದರೆ ಆರೋಗ್ಯಕ್ಕೆ ಹಲವು ಲಾಭ
- ಸಾಮಾನ್ಯವಾಗಿ ನಾವು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಈರುಳ್ಳಿಯನ್ನು ಸೇರಿಸುವುದು ಸಹಜ. ಈರುಳ್ಳಿ ಅಡುಗೆಗೆ ವಿಶೇಷ ರುಚಿ ನೀಡುವ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಅದರಲ್ಲೂ ಬೇಸಿಗೆಯಲ್ಲಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
- ಸಾಮಾನ್ಯವಾಗಿ ನಾವು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಈರುಳ್ಳಿಯನ್ನು ಸೇರಿಸುವುದು ಸಹಜ. ಈರುಳ್ಳಿ ಅಡುಗೆಗೆ ವಿಶೇಷ ರುಚಿ ನೀಡುವ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಅದರಲ್ಲೂ ಬೇಸಿಗೆಯಲ್ಲಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
(1 / 8)
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ದೇಹದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜ. ಈ ಅವಧಿಯಲ್ಲಿ ನಿಮ್ಮ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಬಳಸಬಹುದಾದ ಪ್ರಮುಖ ಆಹಾರ ವಸ್ತುಗಳಲ್ಲಿ ಈರುಳ್ಳಿ ಕೂಡ ಒಂದು. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಯ ಆರೈಕೆಗೂ ಪ್ರಯೋಜನಕಾರಿ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ. (Freepik)
(2 / 8)
ಬೇಸಿಗೆಯಲ್ಲಿ ಬಿಸಿಲಿನ ತಾಪದ ಕಾರಣದಿಂದ, ಅತಿಯಾಗಿ ಬೆವರುವುದು, ಚರ್ಮದ ತುರಿಕೆ ಮುಂತಾದ ಸಮಸ್ಯೆಗಳು ಕಾಣಿಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಈರುಳ್ಳಿ ಸಹಾಯ ಮಾಡುತ್ತದೆ. ಬಿಸಿಲಿನಿಂದ ಮನೆಗೆ ಬಂದ ನಂತರ ತುರಿಕೆ ಇರುವ ಜಾಗಕ್ಕೆ ಈರುಳ್ಳಿ ರಸವನ್ನು ಹಚ್ಚಿ. ಹೀಗೆ ಮಾಡುವುದರಿಂದ ತುರಿಕೆ ನಿವಾರಣೆಯಾಗುತ್ತದೆ.
(3 / 8)
ಈರುಳ್ಳಿ ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಸಲ್ಫರ್, ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಬಿ9, ವಿಟಮಿನ್ ಸಿ ಇತ್ಯಾದಿ ಅಂಶಗಳಿವೆ. ಇದು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. (Freepik)
(4 / 8)
ಈರುಳ್ಳಿಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ವೈರಸ್‌ಗಳಿಗೆ ಸಂಬಂಧಿಸಿದ ವಿವಿಧ ರೋಗಗಳ ಸಂಭವವನ್ನು ತಡೆಯುತ್ತದೆ. ಶಾಖದ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. (Freepik)
(5 / 8)
ಉತ್ಕರ್ಷಣ ನಿರೋಧಕಗಳ ಉಗ್ರಾಣವಾಗಿರುವ ಈರುಳ್ಳಿಯಲ್ಲಿ 17 ಬಗೆಯ ಫ್ಲೇವನಾಯ್ಡ್‌ಗಳಿವೆ. ವಿವಿಧ ರೀತಿಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಮಧುಮೇಹಿಗಳಿಗೆ ಇದು ಉತ್ತಮ ಆಹಾರ. (Freepik)
(6 / 8)
ಇದು ದೇಹದಲ್ಲಿನ ವಿವಿಧ ರೀತಿಯ ಉರಿಯೂತಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಫ್ರಿ ರಾಡಿಕಲ್‌ಗಳ ವಿರುದ್ಧ ಹೋರಾಡುವ ಮೂಲಕ ದೇಹದ ಅಂಗಾಂಶಗಳನ್ನು ರಕ್ಷಿಸುತ್ತದೆ. (Freepik)
(7 / 8)
ಈರುಳ್ಳಿ ದೇಹಕ್ಕೆ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಉತ್ಪಾದಿಸುವ ಪ್ರಬಯೊಟಿಕ್ ಗುಣಲಕ್ಷಣಗಳನ್ನು ಹೊಂದಿದೆ. ಪರಿಣಾಮವಾಗಿ, ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. (Freepik)
ಇತರ ಗ್ಯಾಲರಿಗಳು