ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು: ಇಲ್ಲಿದೆ ಕಾರಣ
ಅಗಸೆ ಬೀಜ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಇದು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಆದರೆ, ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ತಿನ್ನದೇ ಇರುವುದು ಒಳಿತು. ಯಾಕೆ ತಿನ್ನಬಾರದು, ಯಾರೆಲ್ಲಾ ತಿನ್ನಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
(1 / 8)
ಅಗಸೆ ಬೀಜಗಳ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು. ಇದನ್ನು ನಿಯತವಾಗಿ ಸೇವಿಸುವುದರಿಂದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದಲ್ಲದೆ, ಅಗಸೆ ಬೀಜಗಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
(Canva)(2 / 8)
ಅಗಸೆ ಬೀಜ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಎಲ್ಲರೂ ಅಗಸೆ ಬೀಜಗಳನ್ನು ತಿನ್ನುವುದು ಉತ್ತಮವಲ್ಲ. ಈ 5 ಸಮಸ್ಯೆ ಇರುವವರು ಇದನ್ನು ತಿನ್ನಲೇಬಾರದು. ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
(Freepik)(3 / 8)
ಮಧುಮೇಹಿಗಳು ಸೇವಿಸುವುದು ಉತ್ತಮವಲ್ಲ: ಅಗಸೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ನಿಮಗೆ ಮಧುಮೇಹವಿದ್ದು, ಸಕ್ಕರೆ ಮಟ್ಟ ಕಡಿಮೆ ಮಾಡುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅಗಸೆ ಬೀಜಗಳನ್ನು ತಿನ್ನುವುದು ಅಷ್ಟು ಉತ್ತಮವಲ್ಲ. ಏಕೆಂದರೆ ಅದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
(Freepik)(4 / 8)
ಕರುಳಿನ ಅಡಚಣೆಗೆ ಕಾರಣವಾಗಬಹುದು: ಅಗಸೆ ಬೀಜದ ಅತಿಯಾದ ಸೇವನೆಯು ಕರುಳಿನ ಅಡಚಣೆಗೆ ಕಾರಣವಾಗಬಹುದು. ಮುಖ್ಯವಾಗಿ ನೀವು ಸಾಕಷ್ಟು ನೀರು ಕುಡಿಯದಿದ್ದರೆ ಅಗಸೆ ಬೀಜ ಸೇವನೆಯನ್ನು ಆದಷ್ಟು ಮಿತಿಗೊಳಿಸಿ.
(Freepik)(5 / 8)
ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು: ಅಲರ್ಜಿ ಸಮಸ್ಯೆ ಇರುವವರು ಅಗಸೆ ಬೀಜ ತಿನ್ನುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಮುಖ್ಯವಾಗಿ ಇದು ಊತ, ತುರಿಕೆ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಅಗಸೆ ಬೀಜ ಸೇವನೆಯನ್ನು ಆದಷ್ಟು ಮಿತಿಗೊಳಿಸಿ.
(Freepik)
(6 / 8)
ಅಧಿಕ ರಕ್ತದೊತ್ತಡ ರೋಗಿಗಳು: ಅಧಿಕ ರಕ್ತದೊತ್ತಡ ಸಮಸ್ಯೆಗೆ ಔಷಧಿ ತೆಗೆದೊಳ್ಳುತ್ತಿದ್ದರೆ ಅಗಸೆ ಬೀಜಗಳನ್ನು ಸೇವಿಸದಿರುವುದು ಒಳಿತು. ಯಾಕೆಂದರೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಆದಷ್ಟು ಸೀಮಿತಗೊಳಿಸುವುದು ಉತ್ತಮ.
(Canva)(7 / 8)
ಅಗಸೆ ಬೀಜ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರೆ ಎರಡು ವಾರಗಳ ಮೊದಲು ಅದನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ. ಈಗಾಗಲೇ ಯಾವುದೇ ರಕ್ತ ಹೆಪ್ಪುಗಟ್ಟುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ.
(Canva)ಇತರ ಗ್ಯಾಲರಿಗಳು