ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಮೂಲಂಗಿಯನ್ನು ಅತಿಯಾಗಿ ತಿಂದಿರಿ ಜೋಕೆ: ಈ ರೋಗಲಕ್ಷಣಗಳಿದ್ದರೆ ತಿನ್ನಲೇಬೇಡಿ
ಮೂಲಂಗಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಇದನ್ನು ಎಲ್ಲರೂ ತಿನ್ನುವಂತಿಲ್ಲ. ಕೆಲವರಿಗೆ ಮೂಲಂಗಿ ಹಾನಿ ಮಾಡಬಹುದು. ಈ ಕೆಲವು ರೋಗಲಕ್ಷಣಗಳು ಇರುವವರು ಮೂಲಂಗಿ ತಿಂದರೆ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡಬಹುದು ಎಚ್ಚರ.
(1 / 9)
ಮೂಲಂಗಿ ಚಳಿಗಾಲದ ಜನಪ್ರಿಯ ತರಕಾರಿಯಾಗಿದೆ. ಮೂಲಂಗಿ ಮತ್ತು ಅದರ ಸೊಪ್ಪನ್ನು ಚಳಿಗಾಲದಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
(Canva)(2 / 9)
ಜನರು ವಿಶೇಷವಾಗಿ ಚಳಿಗಾಲದಲ್ಲಿ ಮೂಲಂಗಿ ಸೊಪ್ಪು, ಮೂಲಂಗಿ ಪರೋಟ ಮತ್ತು ಮೂಲಂಗಿ ಸಲಾಡ್ ತಿನ್ನಲು ಇಷ್ಟಪಡುತ್ತಾರೆ. ಬೇರುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ಫೈಟೊನ್ಯೂಟ್ರಿಯೆಂಟ್ಗಳನ್ನು ಹೊಂದಿರುತ್ತವೆ.
(Freepik)(3 / 9)
ಈ ಎಲ್ಲಾ ಅಂಶಗಳು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಆದರೆ ಮೂಲಂಗಿ ಎಲ್ಲರಿಗೂ ಒಳ್ಳೆಯದಲ್ಲ. ಏಕೆಂದರೆ ಕೆಲವರಿಗೆ ಇದು ಹಾನಿಕಾರಕವಾಗಿದೆ. ಅಲ್ಲದೆ, ಕೆಲವು ರೋಗಲಕ್ಷಣಗಳು ಸಹ ತೀವ್ರವಾಗಿರಬಹುದು. ಮೂಲಂಗಿ ತಿನ್ನುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
(4 / 9)
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು: ಮೂಲಂಗಿ ತಿನ್ನುವುದು ಮಧುಮೇಹಿಗಳಿಗೆ ಉತ್ತಮವಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಳಿತಗಳಿಗೆ ಕಾರಣವಾಗಬಹುದು. ಮೂಲಂಗಿ ತಿನ್ನುವುದು ಹೈಪೊಗ್ಲೈಸೀಮಿಯಾಕ್ಕೆ ಕಾರಣವಾಗಬಹುದು. ಆದ್ದರಿಂದ, ಮಧುಮೇಹಿಗಳು ಮೂಲಂಗಿ ತಿನ್ನತದಿರುವುದು ಒಳಿತು.
(5 / 9)
ಕಬ್ಬಿಣದ ಅಂಶ ಹೆಚ್ಚಾಗಬಹುದು: ಮೂಲಂಗಿಯಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ. ಮೂಲಂಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಇದು ಅತಿಸಾರ, ಹೊಟ್ಟೆ ನೋವು, ತಲೆತಿರುಗುವಿಕೆ ಅಥವಾ ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
(6 / 9)
ಥೈರಾಯ್ಡ್ ಗಂಭೀರವಾಗಬಹುದು: ಥೈರಾಯ್ಡ್ ರೋಗಿಗಳು ಮೂಲಂಗಿಯನ್ನು ಅತಿಯಾಗಿ ತಿನ್ನಬಾರದು. ಇದು ಥಿಯೋಗ್ಲುಕೋಸೈಡ್‍ಗಳನ್ನು ಹೊಂದಿರುತ್ತದೆ. ಇದು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಥೈರಾಯ್ಡ್ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
(7 / 9)
ದೇಹದಲ್ಲಿ ನೀರಿನ ಕೊರತೆ: ಮೂಲಂಗಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಆದರೆ, ಇವು ಮೂತ್ರವರ್ಧಕ ಗುಣಲಕ್ಷಣಗಳನ್ನು ಸಹ ಹೊಂದಿವೆ. ಅಂದರೆ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದು ಆಗಾಗ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಸಾಕಷ್ಟು ನೀರು ಕುಡಿಯದಿದ್ದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.
(8 / 9)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಇತರ ಗ್ಯಾಲರಿಗಳು