ಗಾಳಿಯನ್ನು ಶುದ್ಧೀಕರಿಸುವುದರಿಂದ ಚರ್ಮದ ಆರೋಗ್ಯದವರೆಗೆ: ಸ್ನೇಕ್ ಪ್ಲ್ಯಾಂಟ್‍ನ ಅದ್ಭುತ ಆರೋಗ್ಯ ಪ್ರಯೋಜನಗಳಿವು
ಸ್ನೇಕ್ ಪ್ಲ್ಯಾಂಟ್ ಅನ್ನು ಸ್ಯಾನ್ಸೆವಿರಿಯಾ ಟ್ರೈಫಾಸಿಯಾಟಾ ಎಂದೂ ಕರೆಯಲಾಗುತ್ತದೆ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುತ್ತದೆ, ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸ್ನೇಕ್ ಪ್ಲ್ಯಾಂಟ್ ನೆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
(1 / 9)
ಮನೆಯ ಬಾಲ್ಕನಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಸ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಹಲವು ಸಸ್ಯಗಳು ಮನೆಯನ್ನು ಅಲಂಕರಿಸುವ ಮೂಲಕ ಸೌಂದರ್ಯವನ್ನು ಹರಡುವುದಲ್ಲದೆ, ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುತ್ತವೆ. ಅಂತಹ ಒಂದು ಸಸ್ಯವೆಂದರೆ ಸ್ನೇಕ್ ಪ್ಲಾಂಟ್. ಈ ಗಿಡವನ್ನು ಸಾನ್ಸೆವೇರಿಯಾ ಟ್ರೈಫಾಸಿಯಾಟಾ ಎಂದೂ ಕರೆಯುತ್ತಾರೆ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸ್ನೇಕ್ ಪ್ಲ್ಯಾಂಟ್ ನೆಡುವುದರಿಂದ ಆಗುವ ಪ್ರಯೋಜನಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
(Pic Credit: Freepik)(2 / 9)
ಹೆಚ್ಚಿನ ಸಸ್ಯಗಳು ಹಗಲಿನಲ್ಲಿ ಆಮ್ಲಜನಕವನ್ನು ಮತ್ತು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಆದರೆ, ಸ್ನೇಕ್ ಪ್ಲಾಂಟ್ ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ಆಮ್ಲಜನಕವನ್ನು ನೀಡುತ್ತದೆ. ರಾತ್ರಿಯಲ್ಲಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿದಾಗ, ಈ ಸಸ್ಯವು ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಮಲಗುವ ಕೋಣೆಯಲ್ಲಿ ಇಡುವ ಮೂಲಕ ನೀವು ತಾಜಾತನವನ್ನು ಅನುಭವಿಸಬಹುದು.
(Pic Credit: Freepik)(3 / 9)
ಸ್ನೇಕ್ ಪ್ಲ್ಯಾಂಟ್ (ಸಸಿ) ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ, ಇದು ವ್ಯಕ್ತಿಗೆ ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(Pic Credit: shutterstock)(4 / 9)
ಗಾಳಿಯಲ್ಲಿನ ವಿಷಕಾರಿ ಅಂಶಗಳು ಕಡಿಮೆಯಾದಂತೆ ಆಮ್ಲಜನಕದ ಮಟ್ಟವು ಹೆಚ್ಚಾಗುತ್ತದೆ. ಇದು ತಲೆನೋವು, ಆಯಾಸ ಮತ್ತು ಏಕಾಗ್ರತೆಯ ಕೊರತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(5 / 9)
ಶುದ್ಧ ಗಾಳಿ ಮತ್ತು ಕಡಿಮೆ ಧೂಳು ಕಣ್ಣಿನ ಕಿರಿಕಿರಿ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಇದು ಸಹಕಾರಿ.
(6 / 9)
ಶುದ್ಧ ಗಾಳಿಯಲ್ಲಿ ವಾಸಿಸುವುದರಿಂದ ಚರ್ಮದ ಮೇಲೆ ಧೂಳು ಮತ್ತು ಮಾಲಿನ್ಯದ ಪರಿಣಾಮ ಕಡಿಮೆಯಾಗುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
(Pic Credit: shutterstock)(7 / 9)
ಗಾಳಿಯನ್ನು ಶುದ್ಧೀಕರಿಸುವ ಮೂಲಕ, ಸ್ನೇಕ್ ಪ್ಲಾಂಟ್ ಧೂಳು ಮತ್ತು ಸೂಕ್ಷ್ಮ ಕಣಗಳನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಅಸ್ತಮಾ ಮತ್ತು ಅಲರ್ಜಿ ಲಕ್ಷಣಗಳು ಕಡಿಮೆಯಾಗುತ್ತದೆ.
(Pic Credit: shutterstock)(8 / 9)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಇತರ ಗ್ಯಾಲರಿಗಳು