ಕನ್ನಡ ಸುದ್ದಿ  /  Photo Gallery  /  Health Tips Sleeping Problem Food Here Are 7 Superfoods That Can Help You Sleep Better Tips To Good Sleep Rst

Sleeping Problem: ಪ್ರತಿದಿನ ನಿದ್ದೆ ಬಾರದೇ ಒದ್ದಾಡ್ತೀರಾ; ಸುಖ ನಿದ್ದೆಗೆ ಸಹಾಯ ಮಾಡುವ 7 ಸೂಪರ್‌ಫುಡ್‌ಗಳಿವು

  • ʼಅಯ್ಯೋ, ಏನೇ ಮಾಡಿದ್ರು ನಿದ್ದೆ ಬರ್ತಾ ಇಲ್ಲ, ನಿದ್ದೆ ಇಲ್ದೆ ತಲೆನೋವು ಶುರುವಾಗಿದೆʼ ಅಂತ ಗೋಳು ತೋಡಿಕೊಳ್ಳುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ. ಏನೇ ಮಾಡಿದ್ರೂ ನಿದ್ದೆ ಬರೋಲ್ಲ ಅನ್ನೋರಿಗೆ ಸುಖ ನಿದ್ದೆ ಬರಿಸುವ 7 ಸೂಪರ್‌ಫುಡ್‌ಗಳು ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ನಿದ್ದೆಯ ಕೊರತೆ ಕಾಡುವುದು ಸಹಜ. ನಿದ್ದೆ ಕಡಿಮೆಯಾದರೆ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಂತ ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ನಿದ್ದೆ ಬರುವುದಿಲ್ಲ. ಮಧ್ಯೆ ಮಧ್ಯೆ ಎಚ್ಚರವಾಗುವುದು, ತಡವಾಗಿ ನಿದ್ದೆ ಬರುವುದು, ಬೇಗನೆ ಎಚ್ಚರವಾಗುವುದು ಹೀಗೆ ಹತ್ತಾರು. ಆದರೆ ಯಾವುದೇ ಅಡೆತಡೆಯಿಲ್ಲದೇ ವಿಶ್ರಾಂತ ನಿದ್ದೆ ಬರಬೇಕು ಅಂದ್ರೆ ಈ ಸೂಪರ್‌ಫುಡ್‌ಗಳನ್ನು ಸೇವಿಸಬೇಕು. 
icon

(1 / 9)

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ಅಂಶ ಸಮೃದ್ಧವಾಗಿದೆ. ಇವು ನೈಸರ್ಗಿಕವಾಗಿ ಸ್ನಾಯುಗಳನ್ನು ಶಾಂತಗೊಳಿಸುತ್ತವೆ. ಬಾಳೆಹಣ್ಣು ತಿನ್ನುವುದರಿಂದ ನರಗಳು ಹಾಗೂ ಸ್ನಾಯುಗಳು ಶಾಂತವಾಗುವ ಕಾರಣ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತದೆ. 
icon

(2 / 9)

ಬಾದಾಮಿ: ಬಾದಾಮಿಯಲ್ಲಿ ಟ್ರಿಪ್ಟೊಫಾನ್‌ ಅಂಶ ಸಮೃದ್ಧವಾಗಿದೆ. ಬಾದಾಮಿಯಲ್ಲಿ ಮೆಗ್ನೀಶಿಯಂ ಅಂಶ ಸಮೃದ್ಧವಾಗಿದೆ. ಮಲಗುವ ಮೊದಲು ಬಾದಾಮಿ ತಿನ್ನುವುದು ಅಥವಾ ಬಾದಾಮಿ ಹಾಲು ಕುಡಿಯವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರೆಯುತ್ತದೆ. ಇದು ನಿದ್ದೆಯನ್ನು ಪ್ರಚೋದಿಸುವ ಹಾರ್ಮೋನ್‌ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
icon

(3 / 9)

ಓಟ್ಸ್‌: ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುವ ಓಟ್ಸ್ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಂಜೆ ಓಟ್ ಮೀಲ್ ಸೇವನೆಯು ವಿಶ್ರಾಂತಿ ಹಾಗೂ ನಿದ್ರೆಯ ಗುಣಮಟ್ಟವನ್ನು ಉತ್ತೇಜಿಸುತ್ತದೆ.
icon

(4 / 9)

ಸಾಲ್ಮನ್‌: ಈ ಮೀನು ಒಮೆಗಾ-3 ಕೊಬ್ಬಿನಾಮ್ಲವನ್ನು ಹೇರಳವಾಗಿ ಹೊಂದಿರುತ್ತದೆ. ಇದು ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತದ ಮತ್ತು ಸಿರೊಟೋನಿನ್-ನಿಯಂತ್ರಿಸುವ ಗುಣಲಕ್ಷಣಗಳನ್ನು ಹೊಂದಿದ್ದು ಅವು ಉತ್ತಮ ನಿದ್ದೆಗೆ ಸಹಕರಿಸುತ್ತವೆ. 
icon

(5 / 9)

ಸೊಪ್ಪು: ಪಾಲಕ್‌, ಕೇಲ್‌ನಂತಹ ಸೊಪ್ಪಿನಲ್ಲಿ ಮೆಗ್ನೀಶಿಯಂ ಅಂಶ ಹೇರಳವಾಗಿದೆ. ಇದು ಸಾಕಷ್ಟು ನಿದ್ದೆ ಬರುವಂತೆ ಮಾಡುವುದು ಮಾತ್ರವಲ್ಲ, ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. 
icon

(6 / 9)

ಗಿಡಮೂಲಿಕೆ ಚಹಾಗಳು: ನಿದ್ರಾಹೀನತೆ, ನಿದ್ರೆಯ ಸಮಸ್ಯೆ ಎದುರಿಸುತ್ತಿರುವವರು ಕ್ಯಾಮೊಮಯಿಲ್‌ನಂತಹ ಗಿಡಮೂಲಿಕೆಯ ಚಹಾಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕ್ಯಾಮೊಮೈಲ್‌ನಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕವಾದ ಎಪಿಜೆನಿನ್ ಎಂಬ ಅಂಶವು ದೇಹವನ್ನು ಶಾಂತಗೊಳಿಸುತ್ತದೆ. ಒಟ್ಟಾರೆ ಈ ಗಿಡಮೂಲಿಕೆ ಚಹಾಗಳು ಕೂಡ ಉತ್ತಮ ನಿದ್ದೆಗೆ ಸಹಕಾರಿ. 
icon

(7 / 9)

ಚೆರ್ರಿ: ದೇಹದಲ್ಲಿನ ಮೆಲಟೋನಿನ್‌ ಅಂಶವು ನಿದ್ದೆಯ ಚಕ್ರವನ್ನು ನಿಯಂತ್ರಿಸುತ್ತದೆ. ಚೆರ್ರಿ ಹಣ್ಣು ತಿನ್ನುವುದು ಹಾಗೂ ಚೆರ್ರಿ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಮೆಲಟೋನಿನ್‌ ಹಾರ್ಮೋನ್‌ ಪ್ರಮಾಣ ಹೆಚ್ಚುತ್ತದೆ. ಇದು ನಿದ್ದೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(9 / 9)

IPL_Entry_Point

ಇತರ ಗ್ಯಾಲರಿಗಳು