Sleeping Problem: ಸರಿಯಾಗಿ ನಿದ್ದೆ ಬರ್ತಾ ಇಲ್ವಾ? ಹಣ ಕಾರಣವಿರಬಹುದು; ಈ ಬಗ್ಗೆ ಸಂಶೋಧನೆ ಹೇಳೋದೇನು ನೋಡಿ
- Saving Money and Sleep Quality: ಇತ್ತೀಚಿಗೆ ನಿದ್ದೆ ಸಮಸ್ಯೆ ಕಾಡದವರಿಲ್ಲ. ಇದಕ್ಕೆ ಈಗಾಗಲೇ ಹಲವು ಕಾರಣಗಳನ್ನು ಕಂಡುಕೊಳ್ಳಲಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ದೆ ಕೊರತೆಗೆ ಹಣವು ಕಾರಣವಂತೆ. ಇದೇನಪ್ಪ ಇದು, ನಿದ್ದೆಗೂ ಹಣಕ್ಕೂ ಸಂಬಂಧವೇನು ಅಂತೀರಾ? ಹಾಗಾದ್ರೆ ಮುಂದೆ ನೋಡಿ.

(1 / 7)
ಜೀವನಶೈಲಿ, ಮಾನಸಿಕ ಸಮಸ್ಯೆಗಳು, ವೃತ್ತಿ-ಉದ್ಯೋಗ, ಹೀಗೆ ಹಲವು ಕಾರಣಗಳಿಂದ ನಿದ್ದೆಯ ಕೊರತೆ ಕಾಡುವುದು ಸಹಜ. ಇತ್ತೀಚೆಗೆ ಹಲವರು ದೀರ್ಘಕಾಲದಿಂದ ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ನಿದ್ದೆ ಬಾರದೇ ಇರುವುದಕ್ಕೆ ಆರೋಗ್ಯ ಸಮಸ್ಯೆಗಳು ಕಾರಣ ಎಂದು ಹಲವರು ಭಾವಿಸುತ್ತಾರೆ. ಕೆಲವೊಮ್ಮೆ ಮಾನಸಿಕ ಒತ್ತಡವೂ ನಿದ್ದೆಗೆ ಬಾರದೇ ಇರುವಂತೆ ಮಾಡಬಹುದು. ಆದರೆ ಇದೀಗ ಸಂಶೋಧನೆಯಲ್ಲಿ ನಿದ್ದೆಗೆ ಸಂಬಂಧಿಸಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.
(2 / 7)
ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಅಧ್ಯಯನವು ಹಣವು ಉತ್ತಮ ನಿದ್ರೆಗೆ ಸಂಬಂಧಿಸಿರಬಹುದು ಎಂದು ಎಂಬ ಅಂಶವನ್ನು ಹೊರಹಾಕಿದೆ. ವಿಶ್ವವಿದ್ಯಾಲಯದ ಸಂಶೋಧಕರು ಸುಮಾರು ಒಂದು ಸಾವಿರ ಜನರ ಮೇಲೆ ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ನಿದ್ರೆ ಹಣಕ್ಕೆ ಹೇಗೆ ಸಂಬಂಧಿಸಿದೆ? ಅವರು ಏನು ಹೇಳುತ್ತಿದ್ದಾರೆ? ನೋಡೋಣ.
(3 / 7)

(4 / 7)
ಹಣ ಉಳಿತಾಯ ಮಾಡದೇ ಇರುವುದು ನಿದ್ದೆ ಕೊರತೆಗೆ ಇರುವ ಕಾರಣಗಳಲ್ಲಿ ಒಂದಂತೆ. ಅಲ್ಪ ಪ್ರಮಾಣದ ಹಣವನ್ನು ಉಳಿಸಿದರೂ ಉತ್ತಮ ನಿದ್ರೆಯನ್ನು ಪಡೆಯಬಹುದು ಎಂದು ಕಂಡುಬಂದಿದೆ. ನಿದ್ರಾಹೀನತೆ ಇರುವವರು ಸಾಕಷ್ಟು ಆದಾಯವನ್ನು ಹೊಂದಿದ್ದರೂ, ಖರ್ಚಿನ ಪ್ರಮಾಣವು ಹೆಚ್ಚಾಗಿರುತ್ತದೆ ಎಂದು ಅನೇಕ ಸಂದರ್ಭಗಳಲ್ಲಿ ಗಮನಿಸಲಾಗಿದೆ. ಪರಿಣಾಮವಾಗಿ ಉಳಿತಾಯ ವಿಶೇಷವೇನೂ ಆಗುವುದಿಲ್ಲ ಮತ್ತು ಇದು ಒಂದು ರೀತಿಯ ಆತಂಕವನ್ನು ಉಂಟುಮಾಡುತ್ತದೆ.
(5 / 7)
ಆದಾಯ ಕಡಿಮೆಯಾದರೂ, ಸ್ವಲ್ಪ ಮೊತ್ತವನ್ನು ಉಳಿಸಬಹುದು ಎಂದು ಸಂಶೋಧಕರು ಗಮನಿಸಿದ್ದಾರೆ, ಆಗ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಹಾಗಾಗಿ ಸ್ಪಲ್ಪವನ್ನಾದರೂ ಉಳಿತಾಯ ಮಾಡುವಂತೆ ಸಂಶೋಧಕರು ಸಲಹೆ ನೀಡುತ್ತಾರೆ. ಇದು ಸಾಮಾಜಿಕ ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿದ್ರೆ ಉತ್ತಮವಾಗಿರುತ್ತದೆ.
(6 / 7)
ಆದಾಗ್ಯೂ, ಇದರ ಜೊತೆಗೆ ಇತರ ಇನ್ನೂ ಕೆಲವು ಮಾಹಿತಿ ತಿಳಿದುಬಂದಿದೆ. ಅದರ ಪ್ರಕಾರ ವಿವಾಹಿತ ವಯಸ್ಕರು ಒಂಟಿಯಾಗಿರುವ ವಯಸ್ಕರಿಗಿಂತ ಉತ್ತಮವಾಗಿ ನಿದ್ರಿಸುತ್ತಾರೆ. ಮದುವೆಯು ಅನೇಕ ಜನರಲ್ಲಿ ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ ಮತ್ತು ಇದು ನಿದ್ರೆಗೆ ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು