Sleeping Problem: ಪ್ರತಿದಿನ ನಿದ್ದೆ ಬಾರದೇ ಒದ್ದಾಡ್ತಾ ಇದೀರಾ, ಹಾಗಿದ್ರೆ ಈ ಕ್ರಮ ಪಾಲಿಸಿ ನೋಡಿ
- ಇತ್ತೀಚಿನ ಒತ್ತಡದ ಬದುಕಿನಲ್ಲಿ ನಿದ್ದೆ ಎಂಬುದು ಹಲವರ ಪಾಲಿಗೆ ಮರೀಚಿಕೆಯಾಗಿರುವುದು ಸುಳ್ಳಲ್ಲ. ಮಲಗಿದ ತಕ್ಷಣ ನಿದ್ದೆ ಆವರಿಸುವುದಿಲ್ಲ ಎಂಬ ದೂರು ಸಾಮಾನ್ಯ. ಅಂತಹವರಿಗಾಗಿ ಇಲ್ಲಿದೆ ಒಂದಿಷ್ಟು ಬೆಸ್ಟ್ ಸಲಹೆ.
- ಇತ್ತೀಚಿನ ಒತ್ತಡದ ಬದುಕಿನಲ್ಲಿ ನಿದ್ದೆ ಎಂಬುದು ಹಲವರ ಪಾಲಿಗೆ ಮರೀಚಿಕೆಯಾಗಿರುವುದು ಸುಳ್ಳಲ್ಲ. ಮಲಗಿದ ತಕ್ಷಣ ನಿದ್ದೆ ಆವರಿಸುವುದಿಲ್ಲ ಎಂಬ ದೂರು ಸಾಮಾನ್ಯ. ಅಂತಹವರಿಗಾಗಿ ಇಲ್ಲಿದೆ ಒಂದಿಷ್ಟು ಬೆಸ್ಟ್ ಸಲಹೆ.
(1 / 7)
ಮನಸ್ಸಿಗೆ ತೀರಾ ಒತ್ತಡ ಅನ್ನಿಸಿದಾಗ ಒಂದರ್ಧ ಗಂಟೆ ಮಲಗಿದ್ರೆ ಹಾಯ್ ಅನ್ನಿಸುತ್ತೆ, ಮನಸ್ಸು ಕೂಲ್ ಆಗುತ್ತೆ ಅಂತ ಹಲವರು ಹೇಳೋದನ್ನು ಕೇಳಿರ್ತೀರಿ. ಅದು ನಿಜ ಕೂಡ. ಅರ್ಧ ಗಂಟೆಯ ಕಿರುನಿದ್ದೆ ನಿಮ್ಮ ಯೌವನವನ್ನು ಮರಳಿಸುತ್ತದೆ. ದೇಹ ಮನಸ್ಸಿನ ಚೈತನ್ಯ ಹೆಚ್ಚಿಸುತ್ತದೆ. ಕೆಲವರಿಗೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ. ಇಲ್ಲದ ಯೋಚನೆಗಳು ತಲೆ ತುಂಬಾ ತುಂಬಿಕೊಂಡು ನಿದ್ದೆ ಕೊರತೆ ಕಾಡುತ್ತದೆ. ಅಂತಹವರು ಹಗಲಿನ ವೇಳೆ ನ್ಯಾಪ್ ಅಥವಾ ಕಿರುನಿದ್ದೆಗೆ ಪ್ರಯತ್ನ ಮಾಡಬೇಕು. ಕಿರುನಿದ್ದೆಗೆ ಯಾವ ಸಮಯ ಸೂಕ್ತ. ವಾತಾವರಣ ಹೇಗಿರಬೇಕು ಎಂಬ ವಿವರ ಇಲ್ಲಿದೆ. (Unsplash)
(2 / 7)
ಮಧ್ಯಾಹ್ನ 1 ರಿಂದ 3 ಗಂಟೆಯ ಒಳಗೆ ಕಿರುನಿದ್ದೆ ಮಾಡಲು ಬೆಸ್ಟ್ ಸಮಯ. ಯಾಕೆಂದರೆ ಈ ಸಮಯವು ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯದೊಂದಿಗೆ ಹೊಂದಿಕೊಳ್ಳುತ್ತದೆ.(Unsplash)
(4 / 7)
ಕಿರುನಿದ್ದೆಗೆ ತಂಪಾದ, ಕತ್ತಲೆ ಮತ್ತು ಶಾಂತ ವಾತಾವರಣವನ್ನು ಆರಿಸಿಕೊಳ್ಳಬೇಕು. ಏಕೆಂದರೆ ಇದು ದೇಹ ಮತ್ತು ಮನಸ್ಸನ್ನು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.(Unsplash)
(6 / 7)
ನ್ಯಾಪ್ ಅಥವಾ ಕಿರುನಿದ್ದೆ ಅತಿಯಾಗಿ ನಿದ್ದೆಯ ಅವಧಿ ಹೆಚ್ಚದಂತೆ ಅಲಾರಂ ಇರಿಸಿಕೊಳ್ಳುವುದು ಅವಶ್ಯ. ಇದರಿಂದ ಬೇಗನೆ ಎಚ್ಚರಗೊಳ್ಳಬಹುದು. ಈ ರೀತಿ ನ್ಯಾಪ್ ಮಾಡುವುದರಿಂದ ರಾತ್ರಿ ವೇಳೆ ನಿದ್ದೆ ಮಾಡದೇ ತಲೆನೋವು, ತಲೆಭಾರದ ಸಮಸ್ಯೆ ಇದ್ದರೆ ಪರಿಹಾರ ದೊರೆಯುತ್ತದೆ. (Unsplash)
ಇತರ ಗ್ಯಾಲರಿಗಳು