ಈ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಫ್ರಿಜ್‌ನಲ್ಲಿ ಇಡಬೇಡಿ; ನೀವು ತಿಳಿದಿರಲೇಬೇಕಾದ ವಿಚಾರವಿದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಫ್ರಿಜ್‌ನಲ್ಲಿ ಇಡಬೇಡಿ; ನೀವು ತಿಳಿದಿರಲೇಬೇಕಾದ ವಿಚಾರವಿದು

ಈ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಫ್ರಿಜ್‌ನಲ್ಲಿ ಇಡಬೇಡಿ; ನೀವು ತಿಳಿದಿರಲೇಬೇಕಾದ ವಿಚಾರವಿದು

Health Tips: ಈ ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ಫ್ರಿಜ್‍ನಲ್ಲಿ ಸಂಗ್ರಹಿಸುವುದು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಆಹಾರವನ್ನು ತಾಜಾವಾಗಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ನಾವು ಆಹಾರವನ್ನು ಫ್ರಿಜ್‍ನಲ್ಲಿ ಸಂಗ್ರಹಿಸುತ್ತಿದ್ದೇವೆ. ಆದರೆ, ಈ ಆಹಾರಗಳನ್ನು ದೀರ್ಘಕಾಲದವರೆಗೆ ಫ್ರಿಜ್‍ನಲ್ಲಿ ಇಡಬಾರದು.

ಚಳಿಗಾಲವಾಗಲಿ ಅಥವಾ ಬೇಸಿಗೆಯಾಗಲಿ, ಮನೆಗಳಲ್ಲಿ ರೆಫ್ರಿಜರೇಟರ್‌ಗಳ ಬಳಕೆ ಯಾವಾಗಲೂ ಒಂದೇ ಆಗಿರುತ್ತದೆ. ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್ ಬಹಳ ಉಪಯುಕ್ತವಾಗಿದೆ. ಬಹುತೇಕ ಸಂದರ್ಭಗಳಲ್ಲಿ, ಹೆಚ್ಚು ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆಹಾರ ಉಳಿದಿದ್ದರೆ ವ್ಯರ್ಥವಾಗಬಾರದು ಎಂಬ ಕಾರಣಕ್ಕೂ ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ತಜ್ಞರ ಪ್ರಕಾರ, ರೆಫ್ರಿಜರೇಟರ್‌ನಲ್ಲಿ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
icon

(1 / 8)

(Shutterstock)

ಕೆಲವರು ಒಂದೇ ಸಮಯದಲ್ಲಿ ಹೆಚ್ಚು ಹಿಟ್ಟನ್ನು ತಯಾರಿಸಿ ಫ್ರಿಜ್‌ನಲ್ಲಿ ಸಂಗ್ರಹಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಈ ಅಭ್ಯಾಸವು ಒಳ್ಳೆಯದಲ್ಲ. ದೀರ್ಘಕಾಲದವರೆಗೆ ಫ್ರಿಜ್‍ನಲ್ಲಿ ಇಟ್ಟ ಹಿಟ್ಟು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಸಾಮಾನ್ಯವಾಗಿ ಹಿಟ್ಟನ್ನು ಬೆಳಿಗ್ಗೆ ತಯಾರಿಸಿ ಸಂಜೆಯವರೆಗೆ ಫ್ರಿಜ್‍ನಲ್ಲಿ ಇಡಬಹುದು. ಆದರೆ, ಹಿಟ್ಟನ್ನು 2-3 ದಿನಗಳವರೆಗೆ ಬಳಸಬಾರದು. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಮಲಬದ್ಧತೆ, ಆಮ್ಲೀಯತೆ ಇತ್ಯಾದಿಗಳು ಹೊಟ್ಟೆಯ ಸಮಸ್ಯೆ ಕಾಣಿಸಬಹುದು.
icon

(2 / 8)

(Pixabay)

ಅನ್ನವನ್ನು ದೀರ್ಘಕಾಲದವರೆಗೆ ಫ್ರಿಜ್‍ನಲ್ಲಿ ಇಡಬಾರದು. ದೀರ್ಘಕಾಲದವರೆಗೆ ಫ್ರಿಜ್‌ನಲ್ಲಿ ಅನ್ನ ಇಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು. ಅನ್ನವನ್ನು ಗರಿಷ್ಠ ಒಂದು ದಿನ ಫ್ರಿಜ್‍ನಲ್ಲಿ ಸಂಗ್ರಹಿಸಬಹುದು.
icon

(3 / 8)

ಯಾವುದೇ ಬೇಯಿಸಿದ ತರಕಾರಿಗಳನ್ನು ಫ್ರಿಜ್‍ನಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲ ಮಾತ್ರ ಸಂಗ್ರಹಿಸಬೇಕು. ಬೇಯಿಸಿದ ತರಕಾರಿಗಳನ್ನು ದೀರ್ಘಕಾಲದವರೆಗೆ ಫ್ರಿಜ್‍ನಲ್ಲಿ ಇಡಬಾರದು. ಪಲ್ಯ ಉಳಿದಿದೆ ಎಂದು ಎರಡ್ಮೂರು ದಿನ ಫ್ರಿಜ್‍ನಲ್ಲಿ ಅದರ ರುಚಿ ಹಾಳಾಗುತ್ತದೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
icon

(4 / 8)

ಬೇಯಿಸಿದ ಬೇಳೆಯನ್ನು ಎರಡು ದಿನಗಳಿಗಿಂತ ಹೆಚ್ಚು ಕಾಲ ಫ್ರಿಜ್‍ನಲ್ಲಿ ಸಂಗ್ರಹಿಸಬಾರದು. ದೀರ್ಘಕಾಲದವರೆಗೆ ಫ್ರಿಜ್‍ನಲ್ಲಿ ಇಟ್ಟು ತಿಂದರೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಬೇಯಿಸಿದ ಬೇಳೆಯನ್ನು ಫ್ರಿಜ್‍ನಲ್ಲಿ ದೀರ್ಘಕಾಲ ಸಂಗ್ರಹಿಸಿದರೆ, ಅದರಲ್ಲಿನ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ಇದಲ್ಲದೆ, ಈ ಬೇಳೆಕಾಳುಗಳನ್ನು ತಿನ್ನುವುದರಿಂದ ಅಜೀರ್ಣ, ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳು ಉಂಟಾಗಬಹುದು.
icon

(5 / 8)

(Pinterest )

ಬೇಯಿಸಿದ ಆಹಾರವನ್ನು ಫ್ರಿಜ್‍ನಲ್ಲಿ ಸಂಗ್ರಹಿಸುವ ಮೊದಲು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಮೊದಲನೆಯದಾಗಿ, ನಿಮ್ಮ ಫ್ರಿಜ್ ಸ್ವಚ್ಛವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಕೊಳಕು ಫ್ರಿಜ್‍ನಲ್ಲಿರುವ ಬ್ಯಾಕ್ಟೀರಿಯಾಗಳು ಆಹಾರವನ್ನು ತ್ವರಿತವಾಗಿ ಹಾಳುಮಾಡುತ್ತವೆ. ಬ್ಯಾಕ್ಟೀರಿಯಾಗಳು ಆಹಾರವನ್ನು ಪ್ರವೇಶಿಸಬಹುದು. ಅಲ್ಲದೆ, ಒಂದೇ ಸಮಯದಲ್ಲಿ ಫ್ರಿಜ್‍ನಲ್ಲಿ ಹೆಚ್ಚು ಆಹಾರವನ್ನು ಸಂಗ್ರಹಿಸಬೇಡಿ.
icon

(6 / 8)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
icon

(7 / 8)

ಈ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಫ್ರಿಜ್‌ನಲ್ಲಿ ಇಡಬೇಡಿ
icon

(8 / 8)

ಇತರ ಗ್ಯಾಲರಿಗಳು