ಬಿರು ಬಿಸಿಲಿನ ತಾಪವು ಹೃದಯಾಘಾತವನ್ನು ಹೆಚ್ಚಿಸಬಹುದು; ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಈ ವರ್ಷ ಬಿಸಿಲಿನ ತಾಪ ಜೋರಾಗಿದೆ. ಕೆಲವೆಡೆ ವಾತಾವರಣ 40 ಡಿಗ್ರಿ ಸೆಲ್ಸಿಯಸ್ ಮೀರಿದೆ. ಇದರೊಂದಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಅತಿಯಾದ ಶಾಖವು ಹೃದಯಾಘಾತಕ್ಕೂ ಕಾರಣವಾಗಬಹುದು.
(1 / 7)
ಹದಗೆಡುತ್ತಿರುವ ಜೀವನಶೈಲಿಯಿಂದಾಗಿ, ಯುವಜನರು ಸಹ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಬೇಸಿಗೆಯಲ್ಲಿ ಹೃದಯಾಘಾತವಾದ ಪ್ರಮಾಣ ಏರಿಕೆಯಾಗುತ್ತಾ, ಇದಕ್ಕೆ ಕಾರಣವೇನು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ನೋಡಿ.
(2 / 7)
ಬೇಸಿಗೆಯ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರುವ ಜನರು ಯಾವಾಗಲೂ ಹೆಚ್ಚು ಜಾಗೃತೆ ವಹಿಸಬೇಕು. ಅತಿಯಾದ ಶಾಖವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಗಳು ಹೇಳುತ್ತವೆ.
(3 / 7)
ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಟ್ಟುಕೊಂಡಿಲ್ಲ ಎಂದರೆ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದ ಹರಿವನ್ನು ಹೆಚ್ಚಿಸಬಹುದು, ಇದು ಹಾರ್ಟ್‌ಆಟ್ಯಾಕ್‌ಗೆ ಮೂಲವಾಗಬಹುದು.
(4 / 7)
ಬೇಸಿಗೆಯಲ್ಲಿ ಹೆಚ್ಚು ಬೆವರುತ್ತದೆ, ಇದು ರಕ್ತವನ್ನು ದಪ್ಪವಾಗಿಸುತ್ತದೆ ಮತ್ತು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಕಷ್ಟವಾಗುತ್ತದೆ. ಇದರಿಂದ ಕೂಡ ಹೃದಯಾಘಾತ ಹೆಚ್ಚಬಹುದು.
(5 / 7)
ಹೃದಯಾಘಾತವನ್ನು ತಡೆಗಟ್ಟಲು ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗುತ್ತದೆ. ನಿರ್ಜಲೀಕರಣವು ಹೃದಯದ ಮೇಲೆ ಒತ್ತಡ ಹೇರಬಹುದು, ಆದ್ದರಿಂದ ಬಾಯಾರಿಕೆಯಾಗುವ ಮೊದಲು ನೀರು ಕುಡಿಯುವುದು ಮುಖ್ಯ. ಇದಲ್ಲದೆ, ದಿನದ ಅತ್ಯಂತ ಬಿಸಿಲಿನ ಸಮಯದಲ್ಲಿ, ಅಂದರೆ ಮಧ್ಯಾಹ್ನ 12-3 ಗಂಟೆಯ ಸಮಯದಲ್ಲಿ ಸಾಧ್ಯವಾದಷ್ಟು ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಿ. ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೂ ಸಹ ಸಾಧ್ಯವಾದಷ್ಟೂ ನೆರಳಿನಲ್ಲೇ ಇರಿ.
(6 / 7)
ಬೇಸಿಗೆಯಲ್ಲಿ ರಕ್ತದೊತ್ತಡದಂತಹ ಸಮಸ್ಯೆ ನಿವಾರಿಸಲು ತಣ್ಣೀರಿನಿಂದ ಸ್ನಾನ ಮಾಡುವುದು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಲ್ಲದೆ, ಶೀತದಿಂದ ಪರಿಹಾರ ಪಡೆಯಲು ನಿಮ್ಮ ಮಣಿಕಟ್ಟುಗಳು, ಕುತ್ತಿಗೆ ಮತ್ತು ಕಂಕುಳಿ ನಾಡಿ ಬಿಂದುಗಳಿಗೆ ತಣ್ಣಿರಿನ ಬಟ್ಟೆಯ ಪಟ್ಟಿ ಹಾಕಬಹುದು.
ಇತರ ಗ್ಯಾಲರಿಗಳು