Summer Fruits: ಬೇಸಿಗೆಯಲ್ಲಿ ಸಿಗುವ ವಿಟಮಿನ್‌ ಸಿ ಸಮೃದ್ಧ ಹಣ್ಣುಗಳಿವು, ಈ ಹಣ್ಣುಗಳು ದೇಹಕ್ಕೆ ವರದಾನ ಸುಳ್ಳಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Fruits: ಬೇಸಿಗೆಯಲ್ಲಿ ಸಿಗುವ ವಿಟಮಿನ್‌ ಸಿ ಸಮೃದ್ಧ ಹಣ್ಣುಗಳಿವು, ಈ ಹಣ್ಣುಗಳು ದೇಹಕ್ಕೆ ವರದಾನ ಸುಳ್ಳಲ್ಲ

Summer Fruits: ಬೇಸಿಗೆಯಲ್ಲಿ ಸಿಗುವ ವಿಟಮಿನ್‌ ಸಿ ಸಮೃದ್ಧ ಹಣ್ಣುಗಳಿವು, ಈ ಹಣ್ಣುಗಳು ದೇಹಕ್ಕೆ ವರದಾನ ಸುಳ್ಳಲ್ಲ

Summer Fruits : ಬೇಸಿಗೆ ಅಂದ್ರೆ ಬಿರು ಬಿಸಿಲು ಮಾತ್ರವಲ್ಲ, ಈ ಸೀಸನ್‌ನಲ್ಲಿ ಕೆಲವೊಂದು ವಿಶೇಷ ಹಣ್ಣುಗಳು ಹೇರಳವಾಗಿ ಬೆಳೆಯುತ್ತವೆ. ಬೇಸಿಗೆಕಾಲದಲ್ಲಿ ಮಾತ್ರ ಸಿಗುವ ಈ ಕೆಲವು ಹಣ್ಣುಗಳಲ್ಲಿ ವಿಟಮಿನ್‌ ಸಿ ಅಂಶ ಸಮೃದ್ಧವಾಗಿರುತ್ತದೆ. ಇದು ದೇಹವನ್ನು ಹೈಡ್ರೀಕರಿಸಿ, ಚೈತನ್ಯ ಸಿಗುವಂತೆ ಮಾಡುತ್ತದೆ. ಅಂತಹ ಹಣ್ಣುಗಳು ಯಾವುವು ನೋಡಿ.

ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಕೆಲವು ಹಣ್ಣುಗಳು ಕೂಡ ಸಿಗುತ್ತವೆ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹಣ್ಣುಗಳು ನಮ್ಮನ್ನು ಹೈಡ್ರೇಟ್ ಮಾಡುವುದಲ್ಲದೆ ದೇಹಕ್ಕೆ ಚೈತನ್ಯ ಮರಳುವಂತೆ ಮಾಡುತ್ತದೆ. ಹಾಗಾಗಿ ಈ ಹಣ್ಣುಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಯಾವೆಲ್ಲಾ ಹಣ್ಣುಗಳನ್ನು ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಸೇವಿಸಬೇಕು ನೋಡಿ. 
icon

(1 / 7)

ಮಾವು: ಮಾವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಈ ಹಣ್ಣು ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಕೂಡ ಹೆಚ್ಚಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆ ಇರುವವರು ಮಾವಿನಹಣ್ಣು ಸೇವಿಸುವುದು ಉತ್ತಮ, 
icon

(2 / 7)

ಪೇರಲ: ಪೇರಳೆಯಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ ಮತ್ತು ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಬೇಸಿಗೆಯಲ್ಲಿ ಪೇರಳೆ ಹಣ್ಣು ಸೇವನೆಯನ್ನು ರೂಢಿಸಿಕೊಳ್ಳಿ. 
icon

(3 / 7)

ಕಿವಿ: ಕಿವಿಯಲ್ಲಿರುವ ವಿಟಮಿನ್ ಸಿ, ಕೆ ಮತ್ತು ಇ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಲು ಕೂಡ ಈ ಹಣ್ಣು ಬಹಳ ಉತ್ತಮ. 
icon

(4 / 7)

ಪಪ್ಪಾಯಿ: ಪಪ್ಪಾಯಿಯಲ್ಲಿ ವಿಟಮಿನ್ ಸಿ, ಎ ಮತ್ತು ಇ ಹೇರಳವಾಗಿದ್ದು ಬೇಸಿಗೆಯಲ್ಲಿ ಇದು ಅತ್ಯಗತ್ಯ. ಚರ್ಮದ ಹೊಳಪು ಹೆಚ್ಚುವುದು ಸೇರಿದಂತೆ ಇದರಿಂದ ಹಲವು ಪ್ರಯೋಜನಗಳಿವೆ.  
icon

(5 / 7)

ಸ್ಟ್ರಾಬೆರಿಗಳು: ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ ಮತ್ತು ದೇಹದಲ್ಲಿನ ವಿಟಮಿನ್ ಮತ್ತು ನಾರಿನಾಂಶ ಕೊರತೆಯನ್ನು ಸರಿದೂಗಿಸುತ್ತದೆ. 
icon

(6 / 7)

ಸ್ಟ್ರಾಬೆರಿಗಳು: ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ ಮತ್ತು ದೇಹದಲ್ಲಿನ ವಿಟಮಿನ್ ಮತ್ತು ನಾರಿನಾಂಶ ಕೊರತೆಯನ್ನು ಸರಿದೂಗಿಸುತ್ತದೆ. (all photos: Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಇತರ ಗ್ಯಾಲರಿಗಳು