Nutrition Food: ಬಿಸಿಲಿನ ತಾಪ ದೇಹ ಸುಡುತ್ತಿದೆಯೇ? ಶಾಖಾಘಾತ ತಪ್ಪಿಸಲು ಈ ಆಹಾರಗಳ ಸೇವನೆಗೆ ಒತ್ತು ನೋಡಿ
- Heat Stroke: ಜೂನ್ ತಿಂಗಳು ಆರಂಭವಾದರೂ ಇನ್ನೂ ಬಿಸಿಲಿನ ತಾಪ ಜೋರಾಗಿದೆ. ಶಾಖಾಘಾತದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಶಾಖಾಘಾತವನ್ನು ಎದುರಿಸಲು ದೇಹಕ್ಕೆ ಸೂಕ್ತ ಪೋಷಕಾಂಶ ಒದಗಿಸುವುದು ಅಗತ್ಯ ಎನ್ನುತ್ತಾರೆ ಪೌಷ್ಟಿಕ ತಜ್ಞರು. ಹಾಗಾದರೆ ಶಾಖಾಘಾತ ತಡೆಯಲು ಯಾವ ರೀತಿಯ ಆಹಾರ ಸೇವಿಸಬೇಕು, ಇಲ್ಲಿದೆ ತಜ್ಞರ ಉತ್ತರ.
- Heat Stroke: ಜೂನ್ ತಿಂಗಳು ಆರಂಭವಾದರೂ ಇನ್ನೂ ಬಿಸಿಲಿನ ತಾಪ ಜೋರಾಗಿದೆ. ಶಾಖಾಘಾತದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಶಾಖಾಘಾತವನ್ನು ಎದುರಿಸಲು ದೇಹಕ್ಕೆ ಸೂಕ್ತ ಪೋಷಕಾಂಶ ಒದಗಿಸುವುದು ಅಗತ್ಯ ಎನ್ನುತ್ತಾರೆ ಪೌಷ್ಟಿಕ ತಜ್ಞರು. ಹಾಗಾದರೆ ಶಾಖಾಘಾತ ತಡೆಯಲು ಯಾವ ರೀತಿಯ ಆಹಾರ ಸೇವಿಸಬೇಕು, ಇಲ್ಲಿದೆ ತಜ್ಞರ ಉತ್ತರ.
(1 / 7)
ಬಿಸಿಲಿನ ಅತಿಯಾದ ತಾಪದಿಂದಾಗಿ ಶಾಖಾಘಾತ ಉಂಟಾಗುವುದು ಸಾಮಾನ್ಯ. ಜೂನ್ ತಿಂಗಳು ಆರಂಭವಾದರೂ ಬಿಸಿಲಿನ ತಾಪ ಕಡಿಮೆಯಾಗಿಲ್ಲ. ಇದರಿಂದ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ದೇಹ ಉಷ್ಣತೆಯು ಮಿತಿ ಮೀರಿದಾಗ ಶಾಖಾಘಾತ ಉಂಟಾಗುತ್ತದೆ. ಕೆಲವೊಮ್ಮೆ ದೇಹ ತಣಿಯುವ ಆಹಾರ ಸೇವಿಸದೇ ಇರುವುದು ಶಾಖಾಘಾತಕ್ಕೆ ಕಾರಣವಾಗಬಹುದು. ಆ ಕಾರಣಕ್ಕೆ ಕೆಲವು ಪೌಷ್ಟಿಕ ಆಹಾರ ಸೇವಿಸುವುದು ಅವಶ್ಯ ಎನ್ನುತ್ತಾರೆ ಪೌಷ್ಟಿಕತಜ್ಞೆ ಅಂಜಲಿ ಶರ್ಮಾ. ಶಾಖಾಘಾತದಿಂದ ತಪ್ಪಿಸಿಕೊಳ್ಳಲು ಅವರು ನೀಡುವ ಸಲಹೆಗಳು ಹೀಗಿವೆ.(Unsplash)
(2 / 7)
ಅತಿಯಾದ ದೇಹ ತಾಪ, ತಲೆನೋವು ಹಾಗೂ ವಾಕರಿಕೆ ಹೀಟ್ ಸ್ಟ್ರೋಕ್‌ನ ಲಕ್ಷಣಗಳಾಗಿವೆ. ಆ ಕಾರಣಕ್ಕೆ ದೇಹಕ್ಕೆ ಸಾಕಷ್ಟು ನೀರು ಸೇರುವಂತೆ ಮಾಡುವುದು ಅವಶ್ಯ. ಹೆಚ್ಚು ಹೆಚ್ಚು ನೀರು ಕುಡಿಯುತ್ತಲೇ ಇರಬೇಕು. ಇದರೊಂದಿಗೆ ನೀರಿನಾಂಶ ಹೆಚ್ಚಿರುವ ಹಣ್ಣು, ತರಕಾರಿಗಳು ಸೇವನೆಯೂ ಉತ್ತಮ. (Unsplash)
(3 / 7)
ಲೆಟಿಸ್, ಸೌತೆಕಾಯಿ ಮತ್ತು ಪುದಿನಾನಂತಹ ಆಹಾರ ಪದಾರ್ಥಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಅವಶ್ಯ. (Unsplash)
(4 / 7)
ವಿಟಮಿನ್ ಸಿ ಮತ್ತು ಎ ಅಧಿಕವಾಗಿರುವ ಹಣ್ಣುಗಳನ್ನು ಸೇವಿಸಬೇಕು. ಏಕೆಂದರೆ ಅವು ಬಾಯಾರಿಕೆಯನ್ನು ನೀಗಿಸಲು ಸಹಾಯ ಮಾಡುತ್ತದೆ ಮತ್ತು ದೇಹತಾಪ ತಣಿಸಲು ಅವು ನೆರವಾಗುತ್ತವೆ. (Unsplash)
(5 / 7)
ರೆಡ್ ಮೀಟ್, ಕರಿದ ಆಹಾರ, ಮದ್ಯಪಾನ ಮತ್ತು ಕಾಫಿಯನ್ನು ಸೇವನೆಯನ್ನು ಸಾಧ್ಯವಾದಷ್ಟು ತ್ಯಜಿಸುವುದು ಉತ್ತಮ.(Unsplash)
(6 / 7)
ದಾಲ್ಚಿನ್ನಿ ಮತ್ತು ತುಪ್ಪದಂತಹ ಪದಾರ್ಥಗಳನ್ನು ವಿರಳವಾಗಿ ಬಳಸಬೇಕು. ಕೋಕಂ, ಮಾವಿನಕಾಯಿ ಮತ್ತು ಮೊಸರು ಮುಂತಾದ ದೇಹಕ್ಕೆ ತಂಪು ನೀಡುವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. (Unsplash)
ಇತರ ಗ್ಯಾಲರಿಗಳು