ಕನ್ನಡ ಸುದ್ದಿ  /  Photo Gallery  /  Health Tips These Ingredients Are The Best Painkillers Found In The Kitchen Home Remedies For Pain Photo Gallery Arc

Home Remedies: ನೋವಿಗೆ ಪೇನ್‌ಕಿಲ್ಲರ್‌ ಮಾತ್ರೆಯೊಂದೇ ಪರಿಹಾರವಲ್ಲ, ಅಡುಗೆಮನೆಯ ಈ ವಸ್ತುಗಳನ್ನು ಒಮ್ಮೆ ಬಳಸಿ ನೋಡಿ

  • Natural Painkillers: ನೋವಿನಿಂದ ಪರಿಹಾರ ಪಡೆದುಕೊಳ್ಳಲು ಪದೇ ಪದೇ ಮಾತ್ರೆ, ಔಷಧಗಳನ್ನು ಸೇವಿಸುವ ಬದಲಿಗೆ ಅಡುಗೆಮನೆಯ ಈ ಸೂಪರ್‌ ಪೇನ್‌ಕಿಲ್ಲರ್‌ಗಳನ್ನೊಮ್ಮೆ ಬಳಸಿ ನೋಡಿ. ನಿಮ್ಮನ್ನು ಆಗಾಗ ಕಾಡುವ ನೋವು ನಿವಾರಿಸಿಕೊಳ್ಳಿ.

ನಮ್ಮ ದೈನಂದಿನ ಕೆಲಸಗಳಿಗೆ ಹೆಚ್ಚು ಅಡ್ಡಿಪಡಿಸುವುದೇ ನೋವು. ಇದು ಒಂದು ತೀವ್ರ ಪ್ರಚೋದನೆಯಾಗಿದ್ದು, ದೇಹದ ಯಾವುದೇ ಭಾಗದಲ್ಲಾದರೂ ಕಾಣಿಸಬಹುದಾಗಿದೆ. ನೋವು ಕಂಡ ತಕ್ಷಣ ಮೊದಲು ಮಾಡುವ ಕೆಲಸವೇ ಪೇನ್‌ಕಿಲ್ಲರ್‌ ಅಥವಾ ನೋವು ನಿವಾರಕ ಮಾತ್ರೆಗಳ ಮೊರೆ ಹೋಗುವುದು. ನೋವು ನಿವಾರಿಸಿಕೊಳ್ಳಲು ನಾವು ಯಾವಾಗಲೂ ವೈದ್ಯರು ಬರೆದುಕೊಟ್ಟ ಔಷಧಗಳನ್ನೇ ಹುಡುಕುತ್ತೇವೆ. ಆದರೆ ನಮ್ಮ ಪ್ರಕೃತ್ತಿ ನಮಗಾಗಿ ಅನೇಕ ಗಿಡಮೂಲಿಕೆಗಳನ್ನು ನೀಡಿದೆ. ನೈಸರ್ಗಿಕ ನೋವು ನಿವಾರಕಗಳು ಸಾಕಷ್ಟು ಪ್ರಮಾಣದಲ್ಲಿ ನಮ್ಮ ಅಡುಗೆ ಮನೆಯಲ್ಲಿಯೇ ದೊರೆಯುತ್ತವೆ. ನೋವಿನಿಂದ ಪರಿಹಾರ ಪಡೆದುಕೊಳ್ಳಲು ಪದೇ ಪದೇ ಮಾತ್ರೆ, ಔಷಧಗಳನ್ನು ಸೇವಿಸುವ ಬದಲಿಗೆ ಅಡುಗೆಮನೆಯ ಈ ಸೂಪರ್‌ ಪೇನ್‌ಕಿಲ್ಲರ್‌ಗಳನ್ನೊಮ್ಮೆ ಬಳಸಿ ನೋಡಿ. ನಿಮ್ಮನ್ನು ಆಗಾಗ ಕಾಡುವ ನೋವು ನಿವಾರಿಸಿಕೊಳ್ಳಿ. (HT PHOTO)
icon

(1 / 8)

ಅರಿಶಿಣ: ಪ್ರತಿ ಭಾರತೀಯರ ಅಡುಗೆಮನೆಯಲ್ಲಿ ಇರುವ ಹಳದಿ ಬಣ್ಣದ ಮಸಾಲೆ ಪದಾರ್ಥವಾದ ಅರಿಶಿಣ, ಉರಿಯೂತ ಶಮನ ಮಾಡುವ ಗುಣಲಕ್ಷಣ ಹೊಂದಿರುವ ಇದು, ನಿಮ್ಮ ದೇಹದ ಮೇಲೆ ಮ್ಯಾಜಿಕ್‌ ಮಾಡಬಹುದು. ಅರಿಶಿಣವನ್ನು ಹಾಲಿನೊಂದಿಗೆ ಬೆರೆಸಿ ಕುಡಿದಾಗ ಅದು ನೋವು ನಿವಾರಿಸಬಲ್ಲದು. ಬಾಯಿಯಲ್ಲಿ ಹುಣ್ಣಾಗಿದ್ದರೆ ನೀರು ಮತ್ತು ತೆಂಗಿನ ಎಣ್ಣೆಯೊಂದಿಗೆ ಅರಿಶಿಣ ಸೇರಿಸಿ ಪೇಸ್ಟ್‌ ತಯಾರಿಸಿ ಹುಣ್ಣಾದ ಜಾಗದಲ್ಲಿ ಹಚ್ಚಿ. ಇದು ಆಂಟಿಸೆಪ್ಟಿಕ್‌ ಮತ್ತು ಆಂಟಿಬಯೋಟಿಕ್‌ ಲಕ್ಷಣ ಹೊಂದಿರವುದರಿಂದ ಗಾಯವನ್ನು ಬೇಗನೆ ಗುಣಪಡಿಸುತ್ತದೆ. ಜ್ವರದಿಂದ ಬಳಲುತ್ತಿದ್ದಾಗಲೂ ಸಹ ಅರಿಶಿಣ ಉತ್ತಮ ಪರಿಹಾರ ನೀಡುತ್ತದೆ. (HT PHOTO)
icon

(2 / 8)

ಶುಂಠಿ: ಕೀಲು ಮತ್ತು ಸ್ನಾಯು ನೋವಿಗೆ ಇದು ಉತ್ತಮ ಪರಿಹಾರವಾಗಿದೆ. ಶುಂಠಿಯಲ್ಲಿರುವ ಫೈಟೋಕೆಮಿಕಲ್ಸ್‌ ನೋವು ಉಂಟುಮಾಡುವ ಹಾರ್ಮೋನ್‌ಗಳ ಉತ್ಪಾದನೆ ನಿಯಂತ್ರಿಸುತ್ತದೆ. ಇದು ಬೆಳಗಿನ ವಾಕರಿಕೆ ಮೊದಲಾದ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡಬಲ್ಲದು. ಆಹಾರದ ರುಚಿ ಹೆಚ್ಚಿಸುವ ಶುಂಠಿ ಉತ್ತಮ ನೋವುನಿವಾರಕ. ಶುಂಠಿ ಚಹಾ ದೇಹಕ್ಕೆ ಶಕ್ತಿ ಮತ್ತು ಉಲ್ಲಾಸ ನೀಡುವ ಅತ್ಯುತ್ತಮ ಮೂಲವಾಗಿದೆ. (HT PHOTO)
icon

(3 / 8)

ಲವಂಗ: ಬಾಯಿಯಲ್ಲಿ ಶಿಲೀಂದ್ರಗಳ ಸೋಂಕಿನಿಂದ ಉಂಟಾಗುವ ನೋವು ನಿವಾರಿಸಿಕೊಳ್ಳಲು ಲವಂಗ ಉತ್ತಮವಾಗಿದೆ. ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ವಾಕರಿಕೆ ಸಮಸ್ಯೆಯೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲವಂಗದ ಎಣ್ಣೆಯನ್ನು ನೋವಿರುವ ಜಾಗದಲ್ಲಿ ಹಚ್ಚುವುದು ಬಹಳ ಪರಿಣಾಮಕಾರಿಯಾಗಿದೆ. ಲವಂಗದ ಎಣ್ಣೆಯಲ್ಲಿರುವ ಯುಜೆನಾಲ್‌ ಪದಾರ್ಥವು ರಕ್ತವನ್ನು ನೈಸರ್ಗಿಕವಾಗಿ ತೆಳುಗೊಳಿಸಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಈ ಮೂಲಕ ಹೃದಯದ ರಕ್ತನಾಳಗಳ ಕಾಯಿಲೆಯಿಂದ ರಕ್ಷಿಸುತ್ತದೆ. (HT PHOTO)
icon

(4 / 8)

ತುಳಸಿ: ಔಷಧೀಯ ಗಿಡಮೂಲಿಕೆಯಾಗಿರುವ ತುಳಸಿಯನ್ನು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಉರಿಯೂತ ಶಮನ ಗುಣಲಕ್ಷಣ ಹೊಂದಿದ್ದು, ಆಂಟಿಒಕ್ಸಿಡೆಂಟ್‌ ಅಂಶ ಹೊಂದಿದೆ. ಇದು ಉತ್ತಮ ನೋವು ನಿವಾರಕವಾಗಿದೆ. ಕರೋನಾವೈರಸ್‌ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಒತ್ತಡ ಹೆಚ್ಚಿಸುವ ಕಾರ್ಟಿಸೋಲ್‌ ಮತ್ತು ಆಡ್ರುನಾಲಿನ್‌ನಂತಹ ಹಾರ್ಮೋನ್‌ಗಳ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ. 
icon

(5 / 8)

ಚೆರ್‍ರಿ: ಚೆರ್‍ರಿ ಹಣ್ಣು ಸಹ ಉರಿಯೂತ ನಿವಾರಕ ಗುಣ ಹೊಂದಿದ್ದು, ಸಂಧೀವಾತ ಹಾಗೂ ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶ್ರಮದಾಯಕ ವ್ಯಾಯಾಮದಿಂದ ಉಂಟಾಗುವ ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಬಹುದಾಗಿದೆ. ನರಕೋಶಗಳಿಗೆ ಹಾನಿಯಾಗದಂತೆ ರಕ್ಷಣೆ ನೀಡುತ್ತದೆ. (HT PHOTO)
icon

(6 / 8)

ಬೆಳ್ಳುಳ್ಳಿ: ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಬೆಳ್ಳುಳ್ಳಿ ಬಹಳ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿಯ ಸೇವನೆಯಿಂದ 10 ರಿಂದ 15% ರಷ್ಟು ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ತೋರಿಸಲಾಗಿದೆ. ತಾಜಾ ಬೆಳ್ಳುಳ್ಳಿ ಸೇವನೆಯು ಕರುಳಿನ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಆಂಟಿಬಯೋಟಿಕ್‌ ಗುಣಲಕ್ಷಣ ಹೊಂದಿದ್ದು, ಬುದ್ಧಿಮಾಂದ್ಯತೆ ಮತ್ತು ಅಲ್ಝೈಮರ್ನಂತಹ ಕಾಯಿಲೆ ತಡೆಯುತ್ತದೆ.  (HT PHOTO)
icon

(7 / 8)

ಮೊಸರು: ತಾಜಾ ಮೊಸರು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಅದ್ಭುತ ಡೈರಿ ಉತ್ಪನ್ನವಾದ ಮೊಸರು, ಜೀರ್ಣಕ್ರಿಯೆಗೆ ಸಹಾಯ ಮಾಡುವ ಆರೋಗ್ಯಕರ ಪ್ರೋಬಾಯಾಟಿಕ್‌ಗಳನ್ನು ಒಳಗೊಂಡಿದೆ. ಪ್ರತಿದಿನ ಎರಡು ಬಾರಿ ಒಂದು ಕಪ್‌ ಮೊಸರು ಸೇವಿಸುವುದರಿಂದ ಹೊಟ್ಟೆ ನೋವು ಮತ್ತು ಋತುಚಕ್ರದ ಸಮಯದಲ್ಲಾಗುವ ಸೆಳೆತದಿಂದ ಪರಿಹಾರ ಕಂಡುಕೊಳ್ಳಬಹುದು.(HT PHOTO)
icon

(8 / 8)

ಇತರ ಗ್ಯಾಲರಿಗಳು