Vegetables: ಈ ತರಕಾರಿಗಳ ಸಿಪ್ಪೆ ತೆಗೆದು ನಿಮ್ಮ ಆರೋಗ್ಯ ಸಪ್ಪೆಯಾಗುವಂತೆ ಮಾಡಿಕೊಳ್ಳಬೇಡಿ, ನೆನಪಿಡಿ
Vegetables: ನಮ್ಮೆಲ್ಲರಿಗೂ ತಿಳಿದಿರುವಂತೆ ತರಕಾರಿಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಾಕಾರಿ. ತರಕಾರಿಗಳನ್ನು ನಾವು ವಿವಿಧ ರೀತಿ ತಿನ್ನುತ್ತೇವೆ. ಜ್ಯೂಸ್, ಸಲಾಡ್, ಪಲ್ಯ ಹೀಗೆ ನಮಗೆ ರುಚಿ ಎನಿಸುವಂತ ರೂಪದಲ್ಲಿ ಬಳಸುತ್ತೇವೆ. ಒಟ್ಟಿನಲ್ಲಿ ನಾವು ಯಾವ ರೀತಿ ಸೇವಿಸಿದರೂ ದೇಹಕ್ಕೆ ಪೋಷಕಾಂಶ ಒದಗಿಸುವುದು ಬಹಳ ಮುಖ್ಯ.
(1 / 6)
ತರಕಾರಿಗಳನ್ನು ನಾವು ಚೆನ್ನಾಗಿ ತೊಳೆದು ಅದರ ಸಿಪ್ಪೆಗಳನ್ನು ಬಿಡಿಸಿ ಅಡುಗೆಗೆ ಬಳಸುತ್ತೇವೆ. ಆದರೆ ಕೆಲವೊಂದು ತರಕಾರಿಗಳನ್ನು ನಾವು ಸಿಪ್ಪೆ ತೆಗೆದರೆ ಅದನ್ನು ತಿಂದೂ ಕೂಡಾ ಏನೂ ಪ್ರಯೋಜನ ಇಲ್ಲ. ಅಂತಹ ತರಕಾರಿಗಳ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿ ಇದೆ. (PC: Freepik)
(2 / 6)
ಸಿಪ್ಪೆ ತೆಗೆಯದಿದ್ದರೆ ಕ್ರಿಮಿ ಕೀಟಗಳಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು, ನಮ್ಮ ದೇಹಕ್ಕೆ ಪೋಷಕಾಂಶ ದೊರೆಯುವುದಿಲ್ಲ ಎಂಬ ತಪ್ಪು ತಿಳವಳಿಕೆಯನ್ನು ಮೊದಲು ತಲೆಯಿಂದ ತೆಗೆದುಹಾಕಿ.
(3 / 6)
ಬೀಟ್‌ರೂಟ್‌ನಲ್ಲಿ ಫೈಬರ್, ವಿಟಮಿನ್ B9, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಅಂಶ ಹೆಚ್ಚಾಗಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್‌ರೂಟನ್ನು ಹೆಚ್ಚಾಗಿ ಸಲಾಡ್ ರೂಪದಲ್ಲಿ ಹಸಿಯಾಗಿ ತಿನ್ನಲಾಗುತ್ತದೆ. ಕೆಲವೊಮ್ಮೆ ಅವುಗಳನ್ನು ಇತರ ತರಕಾರಿಗಳೊಂದಿಗೆ ಬೇಯಿಸಲಾಗುತ್ತದೆ ಮತ್ತು ಸ್ಟಫಿಂಗ್ ಆಗಿಯೂ ಬಳಸಲಾಗುತ್ತದೆ. ಆದರೆ ಅದರ ಮೇಲಿನ ಸಿಪ್ಪೆಯನ್ನು ತೆಗೆದುಹಾಕಲು ಸಂಪೂರ್ಣವಾಗಿ ಅಗತ್ಯವಿಲ್ಲ. ಚೆನ್ನಾಗಿ ಸ್ವಚ್ಛಗೊಳಿಸಿ, ಸ್ಕ್ರಬ್ ಮಾಡಿ ಬಳಸಬಹುದು.
(4 / 6)
ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೋಟಿನ್, ಫೈಬರ್, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಆಂಟಿ ಆಕ್ಸಿಡೆಂಟ್‌ಗಳಂತಹ ಅಗತ್ಯ ಪೋಷಕಾಂಶಗಳಿವೆ. ಕ್ಯಾರೆಟ್ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ತಗ್ಗುತ್ತದೆ. ಹಾಗೇ ತೂಕ ಇಳಿಸಲು ಕೂಡಾ ಸಹಕಾರಿಯಾಗಿದೆ. ಆದರೆ ನೀವು ಸಿಪ್ಪೆ ತೆಗೆದರೆ, ಇದರಿಂದ ದೊರೆಯುವ ಅಗತ್ಯ ಪೋಷಕಾಂಶಗಳನ್ನು ನೀವು ಕಳೆದುಕೊಳ್ಳಬಹುದು. ಆದ್ದರಿಂದ ಕ್ಯಾರೆಟನ್ನು ಚೆನ್ನಾಗಿ ತೊಳೆದು ಹಾಗೇ ಬಳಸಬಹುದು.
(5 / 6)
ಪ್ರಪಂಚದಲ್ಲಿ ಹೆಚ್ಚು ಸೇವಿಸುವ ಆಹಾರಗಳಲ್ಲಿ ಆಲೂಗಡ್ಡೆ ಕೂಡಾ ಒಂದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಆಲೂಗಡ್ಡೆ ತಿನ್ನಲು ಇಷ್ಟಪಡುತ್ತಾರೆ. ಆಲೂಗಡ್ಡೆ ಸಿಪ್ಪೆಯಲ್ಲಿ ಕೂಡಾ ಅನೇಕ ಪೌಷ್ಠಿಕಾಂಶವನ್ನು ಹೊಂದಿದೆ. ವಿಟಮಿನ್, ಖನಿಜ, ಫೈಬರ್‌ಗಳಿಂದ ತುಂಬಿರುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಆಲೂಗಡ್ಡೆ ಸೇವಿಸಿದರೆ ಸಮಸ್ಯೆ ಕಡಿಮೆ ಆಗುತ್ತದೆ. ಆದ್ದರಿಂದ ಆಲೂಗಡ್ಡೆ ಸಿಪ್ಪೆ ತೆಗೆಯದೆ ಚೆನ್ನಾಗಿ ತೊಳೆದು ಬಳಸಿ.
(6 / 6)
ಬಹಳ ಜನರು ಸೌತೆಕಾಯಿ ಸಿಪ್ಪೆ ಒರೆದು ಬಿಸಾಡುತ್ತಾರೆ. ಆದರೆ ಹೆಚ್ಚಿನ ಪೌಷ್ಠಿಕಾಂಶ ಇರುವುದು ಈ ಸಿಪ್ಪೆಯಲ್ಲಿ ಅನ್ನೋದನ್ನು ಮರೆಯಬೇಡಿ. ಸೌತೆಕಾಯಿ ಸೇವನೆಯಿಂದ ತೂಕ ಇಳಿಸಬಹುದು, ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ದೇಹವನ್ನು ಸದಾ ಹೈಡ್ರೇಟ್ ಆಗಿಡುತ್ತದೆ. ಸೌತೆಕಾಯಿಯಲ್ಲಿ ರೋಗಗಳ ವಿರುದ್ಧ ಹೋರಾಡುವ ಪ್ರಮುಖ ಆಂಟಿ ಆಕ್ಸಿಡೆಂಟ್‌ಗಳಿವೆ. ಸೌತೆಕಾಯಿಂದ ಹೆಚ್ಚಿನ ಪೋಷಕಾಂಶ ಪಡೆಯಲು ಬಯಸಿದರೆ ಅದನ್ನು ಸಿಪ್ಪೆ ತೆಗೆಯದೆ ಬಳಸುವುದು ಉತ್ತಮ.
ಇತರ ಗ್ಯಾಲರಿಗಳು