ತೂಕ ಇಳಿಸೋ ಪ್ಲಾನ್ ಇದ್ಯಾ, ಹಾಗಿದ್ರೆ ನಿಮ್ಮ ಫುಡ್‌ಲಿಸ್ಟ್‌ನಲ್ಲಿ ಸೋಯಾ ಚಂಕ್‌ಗೂ ಇರಲಿ ಜಾಗ; ಇದನ್ನ ಹೇಗೆಲ್ಲಾ ತಿನ್ನಬಹುದು ನೋಡಿ
- Soya Chunk Benefits: ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಸೋಯಾ ಚಂಕ್‌ಗಳನ್ನು ಬಡವರ ಚಿಕನ್ ಎಂದೇ ಕರೆಯಲಾಗುತ್ತದೆ. ಇದರಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅಗಾಧ ಪ್ರೋಟೀನ್ ಅಂಶ ಹೊಂದಿರುವ ಇದು ತೂಕ ನಷ್ಟಕ್ಕೂ ಬೆಸ್ಟ್. ಹೇಗೆ ಅಂತೀರಾ ಇಲ್ಲಿದೆ ನೋಡಿ.
- Soya Chunk Benefits: ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಸೋಯಾ ಚಂಕ್‌ಗಳನ್ನು ಬಡವರ ಚಿಕನ್ ಎಂದೇ ಕರೆಯಲಾಗುತ್ತದೆ. ಇದರಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅಗಾಧ ಪ್ರೋಟೀನ್ ಅಂಶ ಹೊಂದಿರುವ ಇದು ತೂಕ ನಷ್ಟಕ್ಕೂ ಬೆಸ್ಟ್. ಹೇಗೆ ಅಂತೀರಾ ಇಲ್ಲಿದೆ ನೋಡಿ.
(1 / 7)
ಸೋಯಾ ಬೀಜದಿಂದ ಎಣ್ಣೆಯನ್ನು ಹೊರತೆಗೆದಾಗ ಉಳಿಯುವ ಉಪ ಉತ್ಪನ್ನವಾದ ಸೋಯಾ ಹಿಟ್ಟಿನಿಂದ ಸೊಯಾ ಚಂಕ್ಸ್ ತಯಾರಿಸಲಾಗುತ್ತದೆ. ಕೊಲೆಸ್ಟ್ರಾಲ್ ಮುಕ್ತ, ಅಧಿಕ ಪ್ರೋಟೀನ್ ಹೊಂದಿರುವ ಇದು ಈಗ ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಆಹಾರವಾಗಿದೆ. ಇದನ್ನು ಟೆಕ್ಸ್ಚರ್ಡ್ ವೆಜಿಟೇಬಲ್ ಪ್ರೋಟೀನ್ ಎಂದೂ ಕರೆಯುತ್ತಾರೆ. ಇದು ತೂಕ ಇಳಿಕೆಯ ಪ್ರಯಾಣದಲ್ಲಿರುವವರಿಗೆ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಉತ್ತಮ ಪದಾರ್ಥವಾಗಿದೆ. ಇದನ್ನು ಅವರ ಡಯಟ್ ಪ್ಲಾನ್‌ನಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ಪೋಷ್ಟಿಕಾಂಶ ಭರಿತ ಅಡುಗೆಗಳನ್ನು ತಯಾರಿಸಬಹುದು. ಆರೋಗ್ಯಕರ ಭೋಜನದ ಜೊತೆಗೆ ತೃಪ್ತಿಯನ್ನು ನೀಡುತ್ತದೆ. ಬಗೆಬಗೆಯ ತರಕಾರಿಗಳನ್ನು, ಪರಿಮಳ ಬೀರುವ ಮಸಾಲೆಗಳನ್ನು ಸೇರಿಸಿ ಸೋಯಾ ಚಂಕ್ಸ್ ಬಿರಿಯಾನಿ, ಕುರ್ಮಾ, ಕಟ್ಲೆಟ್ ಮುಂತಾದ ಪಾಕವಿಧಾನಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿರುವ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡಲು ಹುರಿದು ಅಥವಾ ಹಬೆಯಲ್ಲಿ ಬೇಯಿಸಿ ಬಳಸಲಾಗುತ್ತದೆ. ತೂಕ ನಿರ್ವಹಣೆಯಲ್ಲಿ ಇದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.(PC: HT File Photo)
(2 / 7)
ಬಿರಿಯಾನಿ, ಕಬಾಬ್‌ಗಳಂತಹ ಮಾಂಸಾಹಾರದ ಅಡುಗೆಗಳಲ್ಲಿ ಅವುಗಳ ಬದಲಿಗೆ ಈ ಸಸ್ಯಜನ್ಯ ಸೋಯಾ ಚಂಕ್‌ಗಳನ್ನು ಬಳಸಿ. ಇದು ಸಸ್ಯಾಧಾರಿತವಾಗಿರುವುದರಿಂದ ಉತ್ತಮ ಪ್ರೋಟೀನ್‌ನ ಮೂಲವಾಗಿದೆ. ಇದು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ತಗ್ಗಿಸುತ್ತದೆ.(HT File Photo)
(3 / 7)
ಸೋಯಾ ಚಂಕ್ ಕರಿ: ಭಾರತೀಯರ ಸಾಂಪ್ರದಾಯಿಕ ಖಾದ್ಯಗಳಲ್ಲೂ ಸಹ ಸೋಯಾ ಚಂಕ್‌ಗಳನ್ನು ಬಳಸಿ ರುಚಿಯಾದ ಕರಿ ತಯಾರಿಸಬಹುದು. ಟೊಮೆಟೊ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಪರಿಮಳ ಬೀರುವ ಮಸಾಲೆಗಳೊಂದಿಗೆ ಸೋಯಾ ಚಂಕ್ ಸೇರಿಸಿ ಕರಿ ತಯಾರಿಸಿ. ಇದೊಂದು ಸಮತೋಲಿತ ಹೊಟ್ಟೆ ತುಂಬುವ ಅಡುಗೆಯಾಗುವುದರಲ್ಲಿ ಸಂಶಯವಿಲ್ಲ. ಇದನ್ನು ರೊಟ್ಟಿ, ಅನ್ನದ ಜೊತೆಗೆ ತಿನ್ನಬಹುದಾಗಿದೆ. (PC: Freepik)
(4 / 7)
ಸೋಯಾ ಚಂಕ್ ಸ್ನಾಕ್ಸ್: ಸೋಯಾ ಚಂಕ್‌ಗಳಿಂದ ಕಟ್ಲೆಟ್, ಸ್ನಾಕ್ಸ್‌ಗಳನ್ನು ತಯಾರಿಸುತ್ತಾರೆ. ಕುದಿಸಿ, ಸ್ಮ್ಯಾಷ್ ಮಾಡಿದ ಸೋಯಾ ಚಂಕ್‌ಗಳಿಗೆ ತರಕಾರಿ, ಮಸಾಲೆಗೆ ಕಡಲೆಹಿಟ್ಟು (ಬೈಂಡಿಂಗ್ ಸಲುವಾಗಿ) ಸೇರಿಸಿ ಕಟ್ಲೆಟ್ ಆಕಾರ ಮಾಡಿ ಶ್ಯಾಲೊ ಪ್ರೈ ಮಾಡಿ. (PC: Pniterest)
(5 / 7)
ಸೋಯಾ ಚಂಕ್ ಸ್ಟರ್–ಫ್ರೈ: ಬೆಲ್ ಪೆಪ್ಪರ್, ಬ್ರೋಕಲಿ ಮತ್ತು ಕ್ಯಾರೆಟ್ ಮುಂತಾದ ತರಕಾರಿಗಳ ಜೊತೆ ಸೋಯಾ ಚಂಕ್ ಸೇರಿಸಿ ಹುರಿದು ಸ್ಟರ್–ಫ್ರೈ ತಯಾರಿಸಿ. ದಿಢೀರ್ ಆಗಿ ತಯಾರಿಸಬಹುದಾದ ಈ ತಿಂಡಿ ಕಡಿಮೆ ಕ್ಯಾಲೋರಿ, ಹೆಚ್ಚಿನ ನಾರಿನಾಂಶ ಮತ್ತು ಪೋಷಕಾಂಶಗಳಿಂದ ಕೂಡಿದೆ. ಇದಕ್ಕೆ ಮಸಾಲೆಗಳನ್ನು ಮೇಲಿನಿಂದ ಸೇರಿಸಿ ಸವಿಯಿರಿ.(PC: Freepik)
(6 / 7)
ಸೋಯಾ ಚಂಕ್ ಸಲಾಡ್: ಸೋಯಾ ಚಂಕ್‌ಗಳನ್ನು ಕುದಿಸಿ, ಅದರಿಂದ ಪ್ರೋಟೀನ್ ಭರಿತ ಸಲಾಡ್ ತಯಾರಿಸಬಹುದು. ಅದಕ್ಕೆ ತಾಜಾ ತರಕಾರಿ ಮತ್ತು ಹಸಿರು ಸೊಪ್ಪುಗಳನ್ನು ಸೇರಿಸಿ. ಆಲೀವ್ ಎಣ್ಣೆ, ನಿಂಬೆ ರಸ ಮತ್ತು ಹರ್ಬ್‌ಗಳಿಂದ ಮಾಡಿದ ಲಘು ರಿಫ್ರೆಶ್ ತಿಂಡಿ ತೂಕ ಇಳಿಕೆಯ ಪ್ರಯತ್ನದಲ್ಲಿದ್ದವರಿಗೆ ಉತ್ತಮವಾಗಿದೆ.(PC: HT File Photo, Unsplash)
ಇತರ ಗ್ಯಾಲರಿಗಳು