ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳಿವು; ತೂಕ ಇಳಿಕೆಯಿಂದ ಜೀರ್ಣಕ್ರಿಯೆವರೆಗೆ
- Jeera Water Benefits: ಜೀರಿಗೆ ಭಾರತೀಯ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೀರಿಗೆಯಲ್ಲಿ ಔಷಧೀಯ ಗುಣಗಳಿವೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂತ ಆಗುವ ಪ್ರಯೋಜಗಳ ಮಾಹಿತಿ ಇಲ್ಲಿದೆ.
- Jeera Water Benefits: ಜೀರಿಗೆ ಭಾರತೀಯ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೀರಿಗೆಯಲ್ಲಿ ಔಷಧೀಯ ಗುಣಗಳಿವೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂತ ಆಗುವ ಪ್ರಯೋಜಗಳ ಮಾಹಿತಿ ಇಲ್ಲಿದೆ.
(1 / 8)
ಊಟದ ರುಚಿ ಹೆಚ್ಚಿಸುವಲ್ಲಿ ಮಸಾಲೆ ಪದಾರ್ಥಗಳಲ್ಲೊಂದಾಗಿರುವ ಜೀರಿಗೆ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೇವಲ ಆಹಾರಕ್ಕೆ ಅಷ್ಟೇ ಅಲ್ಲದೆ, ಹಲವಾರು ಸಾಂಪ್ರದಾಯಿಕ ಔಷದಿಗಳನ್ನು ತಯಾರಿಸಲು ಜೀರಿಗೆಯನ್ನು ಬಳಸಲಾಗುತ್ತದೆ.
(2 / 8)
ಜೀರಿಗೆ ನೀರನ್ನು ಖಾಲಿ ಹೊಟ್ಟೆಯನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನೆಗಳಿವೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದರ ಮಾಹಿತಿ ಇಲ್ಲಿದೆ.
(3 / 8)
ಜೀರಿಗೆಯಲ್ಲಿ ನೈಸರ್ಗಿಕವಾಗಿ ವಿಟಿಮಿನ್ ಎ, ವಿಟಮಿನ್ ಇ ಹಾಗೂ ವಿಟಮಿನ್ ಕೆ ಯಂತಹ ಅಗತ್ಯ ಪೋಷಕಾಂಶಗಳಿವೆ. ಇದು ರೋಗನಿರೋಧಕ ಶಕ್ತಿ ಮತ್ತು ಚಯಾಪಚ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
(4 / 8)
ಜೀರಿಗೆ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ. ಹೆಚ್ಚಿನ ಫೈಬಲ್ ಅಂಶ ಮತ್ತು ಪೋಷಕಾಂಶಗಳಿಂದಾಗಿ ನೈಸರ್ಗಿಕವಾಗಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತೆ
(5 / 8)
ಜೀರಿಗೆ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತಗಳನ್ನು ಹೊಂದಿದೆ. ಹಲವಾರು ಕಾಯಿಲೆಗಳಿಂದ ಉಂಟಾಗುವ ಉರಿಯೂತವನ್ನು ಮಾಡಲು ಸಹಾಯ ಮಾಡುತ್ತದೆ. ಜೀರಿಗೆ ನೀರು ಕುಡಿಯುವುದರಿಂದ ದೇಹದ ತೂಕ ಕೂಡ ಕಡಿಮೆಯಾಗುತ್ತೆ
(6 / 8)
ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವಂತ ಸಂಯುಕ್ತಗಳು ಜೀರಿಗೆಯಲ್ಲಿವೆ. ಹೀಗಾಗಿ ಇದು ಉತ್ತಮ ಜೀರ್ಣಕ್ರಿಯೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
(7 / 8)
ಜೀರಿಗೆ ನೀರನ್ನು ಕುಡಿಯುವುದರಿಂದ ಉಸಿರಾಟದ ಸಮಸ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಚಯಾಪಚಯ ಮತ್ತು ಕೊಬ್ಬಿನ ಆಕ್ಸಿಡೀಕರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು