Sunflower Seeds Benefits: ಪ್ರತಿದಿನ ಮೂರ್ನಾಲ್ಕು ಸೂರ್ಯಕಾಂತಿ ಬೀಜ ತಿಂದ್ರೆ ಆರೋಗ್ಯಕ್ಕೆ ಸಿಗುತ್ತೆ ಇಷ್ಟೊಂದು ಪ್ರಯೋಜನ
- Sunflower seeds: ಸೂರ್ಯಕಾಂತಿ ಎಣ್ಣೆ ಮಾತ್ರವಲ್ಲ, ಸೂರ್ಯಕಾಂತಿ ಬೀಜ ಕೂಡ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದು ಹಲವು ಬಗೆಯ ಪೋಷಕಾಂಶಗಳು, ಕೊಬ್ಬುಗಳು ಮತ್ತು ನಾರಿನಾಂಶವನ್ನು ಹೊಂದಿರುತ್ತದೆ. ಮಹಿಳೆಯರು ಸೂರ್ಯಕಾಂತಿ ಬೀಜ ತಿನ್ನುವುದರಿಂದ ಈ ಸಮಸ್ಯೆಗಳು ಅವರ ಹತ್ತಿರಕ್ಕೆ ಸುಳಿಯುವುದಿಲ್ಲ. ಇದನ್ನು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
- Sunflower seeds: ಸೂರ್ಯಕಾಂತಿ ಎಣ್ಣೆ ಮಾತ್ರವಲ್ಲ, ಸೂರ್ಯಕಾಂತಿ ಬೀಜ ಕೂಡ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದು ಹಲವು ಬಗೆಯ ಪೋಷಕಾಂಶಗಳು, ಕೊಬ್ಬುಗಳು ಮತ್ತು ನಾರಿನಾಂಶವನ್ನು ಹೊಂದಿರುತ್ತದೆ. ಮಹಿಳೆಯರು ಸೂರ್ಯಕಾಂತಿ ಬೀಜ ತಿನ್ನುವುದರಿಂದ ಈ ಸಮಸ್ಯೆಗಳು ಅವರ ಹತ್ತಿರಕ್ಕೆ ಸುಳಿಯುವುದಿಲ್ಲ. ಇದನ್ನು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
(1 / 9)
ಸೂರ್ಯಕಾಂತಿ ಬೀಜಗಳು ಜೀವಸತ್ವ, ಖನಿಜಗಳು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ನಮ್ಮ ದೇಹವು ವೈರಸ್‌ಗಳ ವಿರುದ್ಧ ಹೋರಾಡಲು ಅಗತ್ಯವಿರುವ ಸತುವನ್ನು ಒದಗಿಸುತ್ತದೆ.
(2 / 9)
ಸೂರ್ಯಕಾಂತಿ ಬೀಜಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಅಧಿಕ ರಕ್ತದೊತ್ತಡದಂತಹ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
(3 / 9)
ಈ ಬೀಜಗಳು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿವೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾದೆ, ಇದು ದೀರ್ಘಕಾಲದ ಆರೋಗ್ಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
(4 / 9)
ಈ ಬೀಜಗಳಲ್ಲಿ ಪ್ರೊಟೀನ್ ಮತ್ತು ನಾರಿನಾಂಶ ಸಮೃದ್ಧವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಇವುಗಳನ್ನು ತಿನ್ನಬೇಕು. ಅವು ಬೇಗ ಹೊಟ್ಟೆ ತುಂಬಿಸುತ್ತವೆ. ಇದರಲ್ಲಿರುವ ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತೀರಿ.
(5 / 9)
ಸೂರ್ಯಕಾಂತಿ ಬೀಜಗಳು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಇದು ಚರ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಬೀಜಗಳು ವಿಟಮಿನ್ ಇ ಅನ್ನು ಸಹ ಹೊಂದಿರುತ್ತವೆ, ಇದು ಅಕಾಲಿಕ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
(6 / 9)
ಸೂರ್ಯಕಾಂತಿ ಬೀಜಗಳು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ಇದು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ನಾರಿನಾಂಶವಿರುತ್ತದೆ. ಇದು ಕರುಳಿನ ಚಲನೆಗೆ ಅವಶ್ಯಕ.
(7 / 9)
ಸೂರ್ಯಕಾಂತಿ ಬೀಜಗಳು ಮಹಿಳೆಯರು ಮತ್ತು ಮಕ್ಕಳು ತಿನ್ನಲೇಬೇಕಾದ ಆಹಾರಗಳಲ್ಲಿ ಒಂದಾಗಿದೆ. ಇವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯಕ್ಕೆ ರಂಜಕ ಅತ್ಯಗತ್ಯ. ಇದು ಮೂಳೆ ಸಾಂದ್ರತೆಯನ್ನು ಸುಧಾರಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
(8 / 9)
ಬೆಳಗಿನ ಉಪಾಹಾರದ ಸಮಯದಲ್ಲಿ ದಿನಕ್ಕೆ ಬೆರಳೆಣಿಕೆಯಷ್ಟು ಸೂರ್ಯಕಾಂತಿ ಬೀಜಗಳನ್ನು ತಿನ್ನಲು ಪ್ರಯತ್ನಿಸಿ ಅಥವಾ ಸಂಜೆಯ ಹೊತ್ತು ಸ್ಯ್ನಾಕ್ಸ್ ರೂಪದಲ್ಲಿ ಸೇವಿಸಿ. ಇದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.
ಇತರ ಗ್ಯಾಲರಿಗಳು