Gardening Tips: ನಿಮ್ಮ ಮನೆಯಂಗಳವನ್ನು ಸುಂದರ ಹೂದೋಟ ಮಾಡಲು ಇಲ್ಲಿದೆ ನೋಡಿ ಟಿಪ್ಸ್, ನೀವೂ ಇದೇ ಮೆಥಡ್ ಯೂಸ್ ಮಾಡಿ
Gardening Tips: ಹಲವಾರು ಜನರಿಗೆ ತಮ್ಮ ಮನೆಯಂಗಳವನ್ನೇ ಒಂದು ಸುಂದರ ಗಾರ್ಡನ್ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಅದನ್ನು ಮಾಡಲು ಏನೇನು ತಯಾರಿಗಳನ್ನು ಮಾಡಬೇಕು ಎಂದು ತಿಳಿದಿರುವುದಿಲ್ಲ. ನಾವು ನಿಮಗೆ ಏನೇನು ಸಾಮಗ್ರಿಗಳು ಬೇಕು? ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ಗಮನಿಸಿ.
(1 / 7)
ನೀವೂ ನಿಮ್ಮ ಮನೆಯಲ್ಲಿ ಈ ರೀತಿಯಾಗಿ ನೆಲದ ಮೇಲೆ ಒಂದು ಹುಲ್ಲಿನ ಹಾಸನ್ನು ಮಾಡಬೇಕು ಎಂದು ಬಯಸಿದ್ದರೆ ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಮೊದಲು ಮಣ್ಣನ್ನು ಹುರಿಗೊಳಿಸಿ.
(2 / 7)
ನಿಮ್ಮ ಮನೆಯ ಅಂಗಳದಲ್ಲಿ ಜಾಗ ಇಲ್ಲ ಎಂದಾದರೆ ನೀವು ಬೇಕಿದ್ದರೆ ನಿಮ್ಮ ಮನೆಯ ಬಾಲ್ಕನಿಯಲ್ಲೂ ಈ ರೀತಿ ಗಿಡಗಳನ್ನು ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಆ ನಂತರದಲ್ಲಿ ಅದನ್ನು ರೀ ಪಾಟಿಂಗ್ ಮಾಡಬೇಕಾಗುತ್ತದೆ.
(3 / 7)
ಇನ್ನು ಕೆಲವರಿಗೆ ಕಾಡುವ ಸಮಸ್ಯೆ ಎಂದರೆ ಹಸಿರು ಕಳೆಗಳು ಗಿಡಗಳ ನಡುವೆ ಬೆಳೆಯುವುದು ಈ ರೀತಿ ಕಳೆ ಬೆಳೆದಾಗ ಅಲ್ಲಿ ಕಳೆ ನಾಶಕ ಸಿಂಪಡಿಸಿದರೂ ಪ್ರಯೋಜನವಿಲ್ಲ.ಹಾಗಾಗಿ ನೀವೇ ಸ್ವತಃ ಅವುಗಳನ್ನು ಬುಡ ಸಮೇತ ಕಿತ್ತುಹಾಕಬೇಕಾಗುತ್ತದೆ.
(4 / 7)
ಇನ್ನು ನಿಮ್ಮ ಮನೆಯ ಹತ್ತಿರ ಇರುವ ಮಣ್ಣಿನ ಗುಣಮಟ್ಟವನ್ನು ನೀವು ಚೆಕ್ ಮಾಡಬೇಕು. ಎಷ್ಟು ಹೊತ್ತಿನವರೆಗೆ ನೀರು ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು. ಅಥವಾ ಮರಳಿನಂತ ಮಣ್ಣಾಗಿದ್ದರೆ ಅಲ್ಲಿ ಬೇರೆ ಜಾತಿಯ ಅಂದರೆ ಕಡಿಮೆ ನೀರು ಸಾಲುವ ಗಿಡಗಳನ್ನು ಬೆಳೆಯಬೇಕು.
(5 / 7)
ಬೇಸಿಕ್ ಗಾರ್ಡೆನಿಂಗ್ ಟೂಲ್ ನಿಮ್ಮ ಬಳಿ ಇರಬೇಕು. ಅಂದರೆ ಚಿಕ್ಕ ಚಿಕ್ಕ ಕಬ್ಬಿಣದ ಕೋಲುಗಳು. ನೀರು ಹಾಕುವ ಮಗ್, ಸ್ಪ್ರಿಂಕ್ಲರ್‌ಗಳು ಈ ರೀತಿಯ ಸಾಧನಗಳು ಮತ್ತು ಮಣ್ಣನ್ನು ಹಿಡಿದಿಡಲು ಪಾಟ್ ಇರಬೇಕು.
(6 / 7)
ನೀವು ಹೂ ಗಿಡಗಳಿಗೆ ನಿತ್ಯ ಕಾಳಜಿ ತೋರಿಸಬೇಕಾಗುತ್ತದೆ. ನಿತ್ಯವೂ ನೀರುಣಿಸಬೇಕಾಗುತ್ತದೆ. ಹಾಗಾಗಿ ನೀರಿನ ಸೌಕರ್ಯ ಚೆನ್ನಾಗಿದೆಯೇ ಎಂಬುದನ್ನು ಗಮನಿಸಿಕೊಳ್ಳಿ. ಗಿಡದಲ್ಲೇ ಹೂವುಗಳು ಒಣಗಿದ್ದರೆ ಅವುಗಳನ್ನು ಕಟ್ ಮಾಡಿ ಗಿಡದ ಬುಡಕ್ಕೆ ಹಾಕಿ. ಅದೇ ಮತ್ತೆ ಗೊಬ್ಬರವಾಗುತ್ತದೆ.
ಇತರ ಗ್ಯಾಲರಿಗಳು