Boost Your Energy Levels: ಪ್ರತಿ ದಿನ ಫ್ರೆಶ್ ಆಗಿರಲು ಹೀಗೆ ಮಾಡಿ
- ನಿಮಗೆ ಆಗಾಗ ಸುಸ್ತಾದಂತೆ ಭಾಸವಾಗಬಹುದು. ಕೆಲಸದ ನಡುವೆ ಆಲಸ್ಯ ಅಥವಾ ನಿದ್ದೆಯೇ ಬರಬಹುದು. ದಿನವಿಡೀ ಮೂಡ್ ಇಲ್ಲದೆ ಆಗಬಹುದು. ಕೆಲವೊಮ್ಮೆ ಪ್ರಮುಖ ಶೆಡ್ಯೂಲ್ ಇಟ್ಟುಕೊಂಡು, ಫ್ರೆಶ್‌ನೆಸ್ ಇಲ್ಲದೆ ನೀವು ಕಷ್ಟಪಡಬಹುದು. ಇದಕ್ಕೆಲ್ಲಾ ಪರಿಹಾರವಿದೆ. ನೀವು ನಿಮ್ಮ ಜೀವನಶೈಲಿಯಲ್ಲಿ ಮಾಡುತ್ತಿರುವ ಕೆಲ ತಪ್ಪುಗಳು ಇದಕ್ಕೆ ಕಾರಣ. ಹಾಗಿದ್ದರೆ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ನೀಡುವ ಸರಳ ಸಲಹೆಗಳನ್ನು ಪಾಲಿಸಿ.
- ನಿಮಗೆ ಆಗಾಗ ಸುಸ್ತಾದಂತೆ ಭಾಸವಾಗಬಹುದು. ಕೆಲಸದ ನಡುವೆ ಆಲಸ್ಯ ಅಥವಾ ನಿದ್ದೆಯೇ ಬರಬಹುದು. ದಿನವಿಡೀ ಮೂಡ್ ಇಲ್ಲದೆ ಆಗಬಹುದು. ಕೆಲವೊಮ್ಮೆ ಪ್ರಮುಖ ಶೆಡ್ಯೂಲ್ ಇಟ್ಟುಕೊಂಡು, ಫ್ರೆಶ್‌ನೆಸ್ ಇಲ್ಲದೆ ನೀವು ಕಷ್ಟಪಡಬಹುದು. ಇದಕ್ಕೆಲ್ಲಾ ಪರಿಹಾರವಿದೆ. ನೀವು ನಿಮ್ಮ ಜೀವನಶೈಲಿಯಲ್ಲಿ ಮಾಡುತ್ತಿರುವ ಕೆಲ ತಪ್ಪುಗಳು ಇದಕ್ಕೆ ಕಾರಣ. ಹಾಗಿದ್ದರೆ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ನೀಡುವ ಸರಳ ಸಲಹೆಗಳನ್ನು ಪಾಲಿಸಿ.
(1 / 5)
ನೀವು ಪ್ರತಿನಿತ್ಯವೂ ಆಲಸ್ಯ, ದಣಿವು ಮತ್ತು ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೀವು ಸರಿಯಾದ ಜೀವನಶೈಲಿಯ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ಈ ಬಗ್ಗೆ ಕೆಲವು ಸುಲಭ ಸಲಹೆಗಳನ್ನು ನೀಡುತ್ತಾರೆ. ಇದನ್ನು ನೀವೂ ಪಾಲಿಸಲು ಪ್ರಯತ್ನಿಸಿ(Shutterstock)
(2 / 5)
ನಿಮ್ಮ ನಿದ್ರೆಯ ಗುಣಮಟ್ಟವನ್ನು ನಿಗದಿಪಡಿಸಿ : ನೀವು ದಣಿದಿರಲು ಪ್ರಮುಖ ಮತ್ತು ಸ್ಪಷ್ಟ ಕಾರಣವೆಂದರೆ ಸಾಕಷ್ಟು ನಿದ್ದೆ ಮಾಡದಿರುವುದು. ನಿದ್ರಾಹೀನತೆಯು ನೀವು ಹೇಗೆ ಎಚ್ಚರವಾಗಿರುತ್ತೀರಿ ಎನ್ನುವುದಕ್ಕಿಂತ ನಿಮ್ಮ ಮನಸ್ಥಿತಿ, ಸ್ಮರಣೆ ಮತ್ತು ಅರಿವಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ದಿನಕ್ಕೆ ಕನಿಷ್ಠ ಏಳು ಗಂಟೆಯಾದರೂ ಸರಿಯಾದ ನಿದ್ದೆ ಮಾಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.(Unsplash)
(3 / 5)
ಶಕ್ತಿಗಾಗಿ ಸರಿಯಾಗಿ ತಿನ್ನಿರಿ: ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ದೇಹಕ್ಕೆ ಗುಣಮಟ್ಟದ ಪೋಷಕಾಂಶಗಳನ್ನು ನೀಡುವುದು. ಮೆಗ್ನೀಸಿಯಮ್ ಇರುವ ಬಾಳೆಹಣ್ಣು ಹಾಗೂ ಕುಂಬಳಕಾಯಿ ಬೀಜಗಳನ್ನು ತಿನ್ನಿ. ಈದರಲ್ಲಿ ಹೇರಳವಾಗಿರುವ ಖನಿಜಗಳಿವೆ. ಇವು ಸ್ನಾಯು ಮತ್ತು ನರಗಳ ಕಾರ್ಯ, ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣ ಮತ್ತು ಶಕ್ತಿ ಉತ್ಪಾದನೆಗೆ ಸಹಾಯಮಾಡುತ್ತದೆ. ಬಿ-ವಿಟಮಿನ್‌ಗಳು ಇರುವ ಧಾನ್ಯಗಳು, ಹಸಿರು ಎಲೆಗಳನ್ನು ತಿನ್ನಿ. ಇವು ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಇವುಗಳು ಇಲ್ಲವಾದರೆ ದೇಹವು ಶಕ್ತಿಯ ಕೊರತೆ ಎದುರಿಸುತ್ತದೆ. ನಮ್ಮ ಸ್ನಾಯುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ವಿಟಮಿನ್ ಡಿ ಇರುವ ಅಣಬೆಗಳು ಅಥವಾ ಮೊಟ್ಟೆಯ ಹಳದಿ ಲೋಳೆ ಮತ್ತು ಸೂರ್ಯನ ಬೆಳಕು ಅತ್ಯಗತ್ಯ. ಕಬ್ಬಿಣಾಂಶದ ಅಸಮರ್ಪಕ ಸೇವನೆಯು ಆಯಾಸಕ್ಕೆ ಕಾರಣವಾಗಬಹುದು. ಏಕೆಂದರೆ ಕಬ್ಬಿಣದ ಅಂಶವು ಕೆಂಪು ರಕ್ತ ಕಣಗಳು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ.(Pixabay)
(4 / 5)
ದೇಹಕ್ಕೆ ಸರಿಯಾದ ವ್ಯಾಯಾಮ ಬೇಕು: ನಿಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆಗಳನ್ನು ಸೇರಿಸುವುದರಿಂದ ಆಯಾಸ ಕಡಿಮೆಯಾಗುತ್ತದೆ. ಯಾಕೆಂದರೆ ದೇಹ ಮತ್ತಷ್ಟು ಲವಲವಿಕೆಯಿಂದ ಕೂಡಿರುತ್ತದೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ, ವ್ಯಾಯಾಮವು ಹೆಚ್ಚಿನ ಮೆದುಳಿನ ಡೋಪಮೈನ್ ಮಟ್ಟಗಳಿಗೆ ಕಾರಣವಾಗಬಹುದು. ಇದು ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಯಾವಾಗಲೂ ನಿಮಗೆ ಮತ್ತು ನಿಮ್ಮ ದೇಹಕ್ಕೆ ಸೂಕ್ತವಾದ ವ್ಯಾಯಾಮ ಆಯ್ಕೆಮಾಡಿ.(Pixabay)
ಇತರ ಗ್ಯಾಲರಿಗಳು