2024ರ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಸಾಮರ್ಥ್ಯ ಹೊಂದಿರುವ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ
- IPL 2024 Purple Cap: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಗೆಲ್ಲಲು ಸಾಧ್ಯತೆ ಇರುವ ಟಾಪ್-5 ಬೌಲರ್ಗಳು ಯಾರು ಎಂಬುದನ್ನು ಈ ಮುಂದೆ ನೋಡೋಣ.
- IPL 2024 Purple Cap: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಗೆಲ್ಲಲು ಸಾಧ್ಯತೆ ಇರುವ ಟಾಪ್-5 ಬೌಲರ್ಗಳು ಯಾರು ಎಂಬುದನ್ನು ಈ ಮುಂದೆ ನೋಡೋಣ.
(1 / 7)
2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 22 ರಿಂದ ಪ್ರಾರಂಭವಾಗುವ ಈ ಲೀಗ್ನಲ್ಲಿ ಬ್ಯಾಟರ್ಗಳು ಮತ್ತು ಬೌಲರ್ಗಳು ಆಯಾ ತಂಡಗಳ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಲು ಸಜ್ಜಾಗುತ್ತಿದ್ದರೆ. ಆರೆಂಜ್ ಕ್ಯಾಪ್ ಗೆಲ್ಲಲು ಬ್ಯಾಟ್ಸ್ಮನ್ಗಳ ನಡುವೆ ಸ್ಪರ್ಧೆ ನಡೆದರೆ, ಮತ್ತೊಂದೆಡೆ ಪರ್ಪಲ್ ಗೆಲ್ಲಲು ಬೌಲರ್ಗಳ ನಡುವೆ ಪೈಪೋಟಿ ಏರ್ಪಡಲಿದೆ. ಐಪಿಎಲ್ 2024 ರಲ್ಲಿ ಪರ್ಪಲ್ ಕ್ಯಾಪ್ ಗೆಲ್ಲಬಲ್ಲ ಬೌಲರ್ಗಳನ್ನು ಈ ಮುಂದೆ ನೋಡೋಣ.
(2 / 7)
ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಐಪಿಎಲ್ನಲ್ಲಿ ಅಧಿಕ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ಹೊಂದಿದ್ದಾರೆ. ಚಹಲ್ 142 ಪಂದ್ಯಗಳಲ್ಲಿ 183 ವಿಕೆಟ್ ಪಡೆದಿದ್ದಾರೆ. ಈ ಹಿಂದೆ 2014-2021ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸ್ಪಿನ್ನರ್, 2021ರ ಐಪಿಎಲ್ನಲ್ಲಿ ಆರ್ಆರ್ ಪರ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದಿದ್ದರು. ಯೂಜಿ ಈ ವರ್ಷ ಪರ್ಪಲ್ ಕ್ಯಾಪ್ ಗೆಲ್ಲುವ ಸ್ಪರ್ಧಿಗಳಲ್ಲಿ ಒಬ್ಬರು.
(3 / 7)
ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಕಳೆದ ವರ್ಷ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ 17 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದರು. ಕ್ಷಣಾರ್ಧದಲ್ಲಿ ಪಂದ್ಯಕ್ಕೆ ಟರ್ನ್ ನೀಡುವ ಸಾಮರ್ಥ್ಯ ಇರುವ ರಶೀದ್ ಎಲ್ಲರಿಗಿಂತ ವಿಭಿನ್ನ ಬೌಲರ್ ಆಗಿ ಮಾಡಿದೆ. 109 ಐಪಿಎಲ್ ಪಂದ್ಯಗಳಲ್ಲಿ 139 ವಿಕೆಟ್ ಪಡೆದಿದ್ದು, ಈ ಬಾರಿಯೂ ವಿಕೆಟ್ ಬೇಟೆಯ ನಿರೀಕ್ಷೆಯಲ್ಲಿದ್ದಾರೆ.
(4 / 7)
ಐಪಿಎಲ್ನಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಿಚೆಲ್ ಸ್ಟಾರ್ಕ್ ಸಹ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. ಅವರು 2015ರ ನಂತರ ಐಪಿಎಲ್ ಆಡಲು ಸಜ್ಜಾಗಿರುವ ಸ್ಟಾರ್ಕ್ ಕೆಕೆಆರ್ ತಂಡಕ್ಕೆ 24.75 ಕೋಟಿಗೆ ಸೇಲಾಗಿದ್ದಾರೆ. ಸದ್ಯ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿರುವ ಮೊತ್ತಕ್ಕೆ ನ್ಯಾಯ ಒದಗಿಸುತ್ತಾರಾ ಎಂಬುದನ್ನು ಕಾದುನೋಡಬೇಕು.
(5 / 7)
ಐಪಿಎಲ್ 2024 ರಲ್ಲಿ ಎಲ್ಲರ ಕಣ್ಣು ಪ್ಯಾಟ್ ಕಮಿನ್ಸ್ ಮೇಲೆ ನೆಟ್ಟಿದೆ. ಈ ಬಾರಿ ಅವರು ಸನ್ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ, ಅವರನ್ನು ಎಸ್ಆರ್ಎಚ್ 20.50 ಕೋಟಿ ರೂಪಾಯಿಗೆ ಖರೀದಿಸಿದೆ. ಹೈದರಾಬಾದ್ ತಂಡದ ನಾಯಕನೂ ಆಗಿರುವ ಕಮಿನ್ಸ್, ಐಪಿಎಲ್ನಲ್ಲಿ ಆಡಿರುವ 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಅವರು ಪರ್ಪಲ್ ಕ್ಯಾಪ್ ಗೆಲ್ಲುವ ಅತಿದೊಡ್ಡ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
(6 / 7)
ಜಸ್ಪ್ರೀತ್ ಬುಮ್ರಾ ಗಾಯದ ಕಾರಣ 2023ರ ಐಪಿಎಲ್ ಆಡದ ಬುಮ್ರಾ, 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬುಮ್ರಾ 120 ಐಪಿಎಲ್ ಪಂದ್ಯಗಳಲ್ಲಿ 145 ವಿಕೆಟ್ ಪಡೆದಿದ್ದಾರೆ. ಬುಮ್ರಾ ಈ ಹಿಂದೆ ಪರ್ಪಲ್ ಕ್ಯಾಪ್ ಗೆದ್ದಿಲ್ಲ, ಆದರೆ ಬುಮ್ರಾ ಅವರನ್ನು ಪ್ರಸ್ತುತ ಯುಗದ ಅತ್ಯುತ್ತಮ ಬೌಲರ್ ಎಂದು ಪರಿಗಣಿಸಲಾಗಿದ್ದು, ಈ ಬಾರಿ ಪರ್ಪಲ್ ಕ್ಯಾಪ್ ಗೆದ್ದರೂ ಅಚ್ಚರಿ ಇಲ್ಲ.
ಇತರ ಗ್ಯಾಲರಿಗಳು