ತುಳಸಿ ಗಿಡವನ್ನು ಮನೆಯ ಯಾವ ದಿಕ್ಕಿನಲ್ಲಿ ನೆಡಬೇಕು, ಯಾವ ದಿನಗಳಲ್ಲಿ ತುಳಸಿಗೆ ನೀರು ಹಾಕಬಾರದು? ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ ಎಲ್ಲಾ ಹಿಂದೂಗಳ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ತುಳಸಿ, ಮನೆಯಲ್ಲಿ ಇದ್ದರೆ ಲಕ್ಷ್ಮೀಯೇ ನೆಲೆಸಿದಂತೆ. ಮನೆಯಲ್ಲಿ ತುಳಸಿ ಗಿಡ ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ, ಈ ಗಿಡವನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.
(1 / 6)
ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ತುಳಸಿ ಗಿಡವನ್ನು ಇಟ್ಟರೆ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿ ಗಿಡವನ್ನು ಪೂಜಿಸುವವರಿಗೆ ಐಶ್ವರ್ಯ ಮತ್ತು ಸೌಭಾಗ್ಯ ಲಭಿಸುತ್ತದೆ. ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ.
(2 / 6)
ತುಳಸಿ ಗಿಡವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇಲ್ಲದಿದ್ದರೆ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಡಬಹುದು. ಆದರೆ ಯಾವುದೇ ಸಂದರ್ಭದಲ್ಲೂ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದನ್ನು ದಕ್ಷಿಣದಲ್ಲಿ ಇರಿಸಿದರೆ ತೊಂದರೆಗಳು ಉಂಟಾಗುತ್ತದೆ ಎಂಬ ನಂಬಿಕೆ ಇದೆ.
(3 / 6)
ಶಾಸ್ತ್ರಗಳ ಪ್ರಕಾರ, ಭಾನುವಾರ ಮತ್ತು ಏಕಾದಶಿ ದಿನಗಳಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಾರದು. ಉಳಿದ ಎಲ್ಲಾ ದಿನಗಳಲ್ಲಿ ನೀರು ಅರ್ಪಿಸಬಹುದು. ತುಳಸಿ ದೇವಿಯು ಏಕಾದಶಿಯಂದು ಭಗವಾನ್ ವಿಷ್ಣುವನ್ನು ಧ್ಯಾನಿಸಿ ಉಪವಾಸ ಮಾಡುತ್ತಾಳೆ, ಆದ್ದರಿಂದ ಆ ದಿನ ನೀರನ್ನು ಸುರಿಯಬಾರದು ಎಂದು ನಂಬಲಾಗಿದೆ.
(4 / 6)
ತುಳಸಿಗೆ ಲೋಹದ ಪಾತ್ರೆಗಳ ಮೂಲಕ ನೀರು ಹಾಕಿದರೆ ಶುಭವಾಗುತ್ತದೆ. ಅದರಲ್ಲೂ ತಾಮ್ರದ ಪಾತ್ರೆಯಿಂದ ನೀರು ಸುರಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
(Unsplash)(5 / 6)
ತಾಮ್ರದ ಪಾತ್ರೆ ಮೂಲಕ ತುಳಸಿ ಮರಕ್ಕೆ ನೀರು ಹಾಕಿದರೆ ಸಂಪತ್ತು ಮತ್ತು ಕುಟುಂಬದಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ. ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ.
ಇತರ ಗ್ಯಾಲರಿಗಳು