ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ,ದೇಶದ ವಿವಿಧ ನಗರಗಳಲ್ಲಿ ಆಚರಣೆ ಹೀಗಿತ್ತು; ಫೋಟೋಗಳು
ಒಡಿಶಾದ ಪುರಿಯಲ್ಲಿ ನಡೆಯುವ ಖ್ಯಾತ ಆಚರಣೆಗಳಲ್ಲಿ ಜಗನ್ನಾಥ ಯಾತ್ರೆ ಬಹಳ ಖ್ಯಾತಿ ಗಳಿಸಿದೆ. ಇದು ಅತ್ಯಂತ ಪ್ರಸಿದ್ಧವಾದ ಹಿಂದೂ ಹಬ್ಬವಾಗಿದೆ. ಪ್ರತಿ ವರ್ಷ ಜೂನ್ ಅಥವಾ ಜುಲೈನಲ್ಲಿ ಶುಕ್ಲ ಪಕ್ಷದ ಎರಡನೇ ದಿನದಂದು ಪುರಿಯಲ್ಲಿ ಈ ರಥ ಯಾತ್ರೆ ನಡೆಯುತ್ತದೆ.
(1 / 10)
ಅಲ್ಲಿ ಪುರಿಯಲ್ಲಿ ಜಗನ್ನಾಥ ಯಾತ್ರೆ ನಡೆದರೆ ಭಾರತದ ವಿವಿಧ ನಗರಗಳಲ್ಲಿ ಕೂಡಾ ಪುರಿಯಲ್ಲಿ ಜಗನ್ನಾಥನ ರಥಯಾತ್ರೆಯನ್ನು ಆಚರಿಸಲಾಗುತ್ತದೆ.
(ANI)(2 / 10)
ಭಾನುವಾರ ಪುರಿಯಲ್ಲಿ ನಡೆದ ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು
(ANI)(3 / 10)
ಥಾಣೆಯ ಜಗನ್ನಾಥ ಕಲ್ಚರಲ್ ಎಜುಕೇಶನ್ ಟ್ರಸ್ಟ್ ಆಯೋಜಿಸಿದ್ದ 18ನೇ ವಾರ್ಷಿಕ ಜಗನ್ನಾಥ ರಥಯಾತ್ರೆಯಲ್ಲಿ ಒಡಿಸ್ಸಿ ನೃತ್ಯ ಪ್ರದರ್ಶಿಸಲಾಯಿತು.
(Praful Gangurde (HT Photo))(5 / 10)
ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಕುಟುಂಬ ಸಮೇತ ಜಗನ್ನಾಥ ರಥಯಾತ್ರೆಯ ವೇಳೆ ಜಗನ್ನಾಥ ಮಂದಿರದ ಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
(PTI)(6 / 10)
ಕೋಲ್ಕತ್ತಾದಲ್ಲಿ ಮಳೆಯ ನಡುವೆ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಥ ಎಳೆದ ಸಂದರ್ಭ
(ANI)(7 / 10)
ಅಹಮದಾಬಾದ್‌ನಲ್ಲಿ ರಥದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಭಕ್ತನೊಬ್ಬ ತನ್ನ ಭುಜದ ಮೇಲೆ ಜಗನ್ನಾಥ, ಅವರ ಸಹೋದರಿ ಸುಭದ್ರ ಮತ್ತು ಸಹೋದರ ಬಲಭದ್ರನ ವಿಗ್ರಹಗಳನ್ನು ಹೊತ್ತಿರುವ ಫೋಟೋ ಎಲ್ಲರನ್ನೂ ಆಕರ್ಷಿಸಿತು.
((Amit Dave, Reuters))(9 / 10)
ಚಿಂತಾಮಣಿ ಚೌಕ್ ಚಿಂಚವಾಡದಿಂದ ಮಹಾರಾಷ್ಟ್ರದ ಇಸ್ಕಾನ್ ಶ್ರೀ ಗೋವಿಂದ್ ಧಾಮ್ ರಾವೆಟ್ ವರೆಗೆ ಇಸ್ಕಾನ್ ವತಿಯಿಂದ ರಥಯಾತ್ರೆ ನಡೆಸಲಾಯಿತು.
(HT Photo)ಇತರ ಗ್ಯಾಲರಿಗಳು