ಹಿಪ್ಪೆ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ; ದೇವರಿಗೆ ಯಾವ ಎಣ್ಣೆ ಬಳಸಿ ದೀಪ ಹಚ್ಚಿದರೆ ಏನು ಫಲ? ಇಲ್ಲಿದೆ ಮಾಹಿತಿ
ಮನೆಯಲ್ಲಿ ಸಂತೋಷ, ಶಾಂತಿ ಮತ್ತು ನೆಮ್ಮದಿ ಹೆಚ್ಚಾಗಲು ಕೆಲವರು ತುಪ್ಪದಿಂದ ಇನ್ನೂ ಕೆಲವರು ಎಣ್ಣೆ ಬಳಸಿ ದೀಪ ಹಚ್ಚುತ್ತಾರೆ. ದೇವರ ದೀಪ ಬೆಳಗಿಸಲು ಯಾವ ಎಣ್ಣೆ ಒಳ್ಳೆಯದು? ಯಾವ ಎಣ್ಣೆ ಬಳಸಿದರೆ ಏನು ಫಲ ದೊರೆಯುವುದು? ಇಲ್ಲಿದೆ ಮಾಹಿತಿ.
(1 / 9)
ಮನೆಯಲ್ಲಿ ಬೆಳಗ್ಗೆ 4.30 ರಿಂದ 8 ಗಂಟೆ ಒಳಗೆ ದೀಪ ಹಚ್ಚುವುದು ಉತ್ತಮ. ಹಾಗೇ ಸಂಜೆ 5:00 ರಿಂದ 7.00 ರವರೆಗೆ ದೀಪ ಹಚ್ಚಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ ಧನಾತ್ಮಕತೆ ಆವರಿಸುತ್ತದೆ. ಆದರೆ ಯಾವ ಎಣ್ಣೆ ಬಳಸಿದರೆ ಯಾವ ರೀತಿ ಫಲ ದೊರೆಯಲಿದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.
(3 / 9)
ಕೆಲವರು ಹರಳೆಣ್ಣೆ ಬಳಸಿ ದೀಪ ಹಚ್ಚುತ್ತಾರೆ, ಹರಳೆಣ್ಣೆ ದೀಪವನ್ನು ಬೆಳಗಿಸುವುದರಿಂದ ಮನೆಯ ಸದಸ್ಯರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
(4 / 9)
ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಮನಸ್ಸಿನಲ್ಲಿರುವ ಗೊಂದಲಗಳು ಮತ್ತು ಸಮಸ್ಯೆಗಳು ದೂರವಾಗುತ್ತವೆ. ತುಪ್ಪದಿಂದ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ.
(5 / 9)
ಭಕ್ತರು ದೇವಾಲಯದಲ್ಲಿ ಹಿಪ್ಪೆ ಎಣ್ಣೆ ದೀಪ ಹಚ್ಚಿ ಶಿವನನ್ನು ಪ್ರಾರ್ಥಿಸುವುದರಿಂದ ಋಣಭಾರ ದೂರವಾಗುತ್ತವೆ. ಹಿಪ್ಪೆ ಎಣ್ಣೆಯನ್ನು ದೇವಸ್ಥಾನಗಳಲ್ಲಿ ಮಾತ್ರ ಬಳಸಬೇಕು. ಮನೆಯಲ್ಲಿ ದೀಪಗಳನ್ನು ಹಚ್ಚಲು ಬಳಸಬಾರದು.
(7 / 9)
ಕೆಲವರು ಒಂದೆರಡು ಚಮಚ ಮಾತ್ರ ಎಣ್ಣೆ ಹಾಕಿ ಸ್ವಲ್ಪ ಸಮಯದವರೆಗೆ ಮಾತ್ರ ದೀಪ ಉರಿಸುತ್ತಾರೆ, ಆದರೆ ದೀಪದ ತುಂಬಾ ಎಣ್ಣೆ ಹಾಕಿ ಬಹಳ ಸಮಯದವರೆಗೂ ದೀಪ ಉರಿಯುವಂತೆ ಬಿಡಬೇಕು.
(8 / 9)
ದೀಪವನ್ನು ಹಚ್ಚುವಾಗ ಅದು ಮಂಡಿ ಮೇಲೆ ಬಿದ್ದರೆ ಮನೆಗೆ ಸಮಸ್ಯೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ದೀಪ ಹಚ್ಚುವಾಗ ಬಹಳ ಜಾಗರೂಕರಾಗಿರಿ.
ಇತರ ಗ್ಯಾಲರಿಗಳು