ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜುಲೈ ತಿಂಗಳ 2ನೇ ಪ್ರದೋಷ ವ್ರತಾಚರಣೆ, ಶುಭ ಮುಹೂರ್ತ ಯಾವಾಗ, ಶಿವನನ್ನು ಆರಾಧಿಸುವ ವಿಧಾನ ಹೇಗೆ?

ಜುಲೈ ತಿಂಗಳ 2ನೇ ಪ್ರದೋಷ ವ್ರತಾಚರಣೆ, ಶುಭ ಮುಹೂರ್ತ ಯಾವಾಗ, ಶಿವನನ್ನು ಆರಾಧಿಸುವ ವಿಧಾನ ಹೇಗೆ?

ಪ್ರದೋಷ ವ್ರತವನ್ನು ಪ್ರತಿ ತಿಂಗಳು ಆಚರಿಸಲಾಗುತ್ತದೆ. ಇದನ್ನು ಶಿವನ ಆರಾಧನೆಗೆ ಸಮರ್ಪಿಸಲಾಗಿದೆ. ಎರಡನೇ ಪ್ರದೋಷ ಉಪವಾಸವನ್ನು ಆಷಾಢ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ವ್ರತ ಗುರುವಾರ ಇರುವುದರಿಂದ ಇದನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುವುದು. ಗುರು ಪ್ರದೋಷವು ಈ ಮಾಸದ ಕೊನೆಯ ಪ್ರದೋಷ ಉಪವಾಸವಾಗಿರುತ್ತದೆ. 

ಇಂದು ಆಷಾಢ ಮಾಸದ ಕೊನೆಯ ಉಪವಾಸವಾಗಿರುತ್ತದೆ. ಗುರು ಪ್ರದೋಷ ವ್ರತದ ದಿನದಂದು ಶಿವನನ್ನು ಆರಾಧಿಸುವುದರಿಂದ ಶತ್ರುಗಳ ಮೇಲೆ ಜಯ ಸಿಗುತ್ತದೆ. ಕುಟುಂಬದಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಪ್ರದೋಷ ವ್ರತ ಪೂಜೆಯನ್ನು ಸಂಜೆ  ಮಾಡಲಾಗುತ್ತದೆ, ಆದರೆ ಹಗಲಿನಲ್ಲಿ ರುದ್ರಾಭಿಷೇಕವನ್ನು ಮಾಡಬಹುದು. ಪ್ರದೋಷ ಉಪವಾಸದ ದಿನದಂದು ರುದ್ರಾಭಿಷೇಕವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. 
icon

(1 / 8)

ಪಂಚಾಂಗದ ಪ್ರಕಾರ, ಆಷಾಢ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿ ಜುಲೈ 18 ರಂದು ರಾತ್ರಿ 8:44 ಕ್ಕೆ ಪ್ರಾರಂಭವಾಗುತ್ತದೆ, ಇದು ಜುಲೈ 19 ರಂದು ಸಂಜೆ 07:41 ಕ್ಕೆ ಕೊನೆಗೊಳ್ಳುತ್ತದೆ. ಗುರು ಪ್ರದೋಷ ವ್ರತದ ದಿನದಂದು ಪ್ರದೋಷ ಕಾಲ ಶಿವನ ಆರಾಧನೆಗೆ 39 ನಿಮಿಷಗಳ ಶುಭ ಸಮಯವಿರುತ್ತದೆ.
icon

(2 / 8)

ಶಿವಪೂಜೆಯ ಶುಭ ಸಮಯವು ರಾತ್ರಿ 8:44 ರಿಂದ 9:23 ರವರೆಗೆ ಇರುತ್ತದೆ. ಪ್ರದೋಷ ಪೂಜೆಯ ಸಮಯವನ್ನು ಆಧರಿಸಿ ಜುಲೈ 18 ರಂದು ಗುರು ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ.
icon

(3 / 8)

ಗುರು ಪ್ರದೋಷ ವ್ರತದಂದು ಶಿವನ ರುದ್ರಾಭಿಷೇಕ ಅತ್ಯಂತ ಮಂಗಳಕರವಾಗಿದೆ.  ಮನೆಯಲ್ಲಿ ಸಾಧ್ಯವಾಗದಿದ್ದರೆ ದೇವಸ್ಥಾನದಲ್ಲಿ ನೀವು ರುದ್ರಾಭಿಷೇಕ ಮಾಡಬಹುದು. ಇದು ನಿಮಗೆ ಬಹಳ ಶುಭಫಲ ನೀಡುತ್ತದೆ. 
icon

(4 / 8)

ಪ್ರದೋಷ ವ್ರತದ ವಿಧಾನ: ಪ್ರದೋಷ ವ್ರತದ ದಿನ (ಜುಲೈ 18) ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.
icon

(5 / 8)

ವ್ರತವನ್ನು ಆಚರಿಸಲು ಶಿವನು ಕುಟುಂಬ ಸಹಿತ ಇರುವ ಫೋಟೋವನ್ನು ಸಿದ್ಧ ಮಾಡಿಕೊಳ್ಳಿ. ಅಕ್ಕಿ, ಹೂ, ಹಣ್ಣು ಬಿಲ್ವಪತ್ರೆ ಎಲ್ಲವನ್ನೂ ಹೊಂದಿಸಿಕೊಂಡು ಪೂಜೆಯನ್ನು ಆರಂಭಿಸಿ.  
icon

(6 / 8)

ವ್ರತವನ್ನು ಆಚರಿಸಲು ಶಿವನು ಕುಟುಂಬ ಸಹಿತ ಇರುವ ಫೋಟೋವನ್ನು ಸಿದ್ಧ ಮಾಡಿಕೊಳ್ಳಿ. ಅಕ್ಕಿ, ಹೂ, ಹಣ್ಣು ಬಿಲ್ವಪತ್ರೆ ಎಲ್ಲವನ್ನೂ ಹೊಂದಿಸಿಕೊಂಡು ಪೂಜೆಯನ್ನು ಆರಂಭಿಸಿ.  (Freepik)

ಸಂಜೆ ಮನೆಯ ದೇವರಕೋಣೆಯಲ್ಲಿ ದೀಪ ಹಚ್ಚಿ. ನಂತರ ಶಿವನ ದೇವಸ್ಥಾನದಲ್ಲಿ  ಶಿವನಿಗೆ ಅಭಿಷೇಕ ಮಾಡಿ. ಸಾಧ್ಯವಾದರೆ ಕುಟುಂಬದವರೆಲ್ಲಾ ಈ ಪೂಜೆಯಲ್ಲಿ ಪಾಲ್ಗೊಳ್ಳಿ. ಪೂಜೆಯ ನಂತರ ಪ್ರದೋಷ ವ್ರತ ಕಥೆಯನ್ನು ಕೇಳಿ ಶಿವನ ಆರತಿಯನ್ನು ಮಾಡಿ. 
icon

(7 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(8 / 8)

ಇತರ ಗ್ಯಾಲರಿಗಳು