ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು
ದೇಶಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ಸನಾತನ ಧರ್ಮವನ್ನು ಎಲ್ಲರಿಗೂ ಸಾರಿದವರಲ್ಲಿ ಶಂಕರಾಚಾರ್ಯರು ಪ್ರಮುಖರು. ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಆದಿಶಂಕರಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತಾ ಬರಲಾಗಿದೆ.
(1 / 9)
ಮೇ 12 ರಂದು ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಗುತ್ತಿದೆ. ಶಂಕರರು ದೇಶಾದ್ಯಂತ ಸಂಚರಿಸಿ ಕರ್ನಾಟಕದ ಶೃಂಗೇರಿಯಲ್ಲಿ ಶಾರದಾ ಪೀಠ ಸೇರಿ ನಾಲ್ಕೂ ಕಡೆ 4 ಮಠಗಳನ್ನು ಸ್ಥಾಪಿಸಿದರು. ಶಂಕರ ಜಯಂತಿಯಂದು ಅವರು ಸಾರಿದ ಬೋಧನೆಗಳ ಮೂಲಕವೇ ನಿಮ್ಮ ಆತ್ಮೀಯರಿಗೆ ಶುಭ ಕೋರಬಹುದು. (PC: Canva)
(2 / 9)
ಅಹಂ ಬ್ರಹ್ಮಾಸ್ಮಿ- ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ ಅಲ್ಲ, ಎರಡೂ ಒಂದೇ, ಆತ್ಮನಲ್ಲಿ ಪರಮಾತ್ಮನಿದ್ದಾನೆ ಶಂಕರ ಪಂಚಮಿಯ ಶುಭಾಶಯಗಳು.
(3 / 9)
ಲೌಕಿಕ ಪ್ರಪಂಚ ಸತ್ಯವಲ್ಲ, ಆಧ್ಯಾತ್ಮಿಕ ಪ್ರಪಂಚ ಮಾತ್ರವೇ ಸತ್ಯ - ನಿಮ್ಮೆಲ್ಲರಿಗೂ ಆದಿ ಶಂಕರಾಚಾರ್ಯ ಜಯಂತಿಯ ಶುಭಾಶಯ
(4 / 9)
ಬ್ರಹ್ಮಂ ಸತ್ಯಂ, ಜಗಂ ಮಿಥ್ಯಾ- ಬ್ರಹ್ಮ ಅಂತಿಮ ಸತ್ಯ, ಅವನು ನಿರ್ಗುಣ ನಿರಾಕಾರ ಶಂಕರ ಜಯಂತಿಯ ಶುಭ ಹಾರೈಕೆಗಳು.
(5 / 9)
ಅಜ್ಞಾನಿಯು ತನ್ನ ಆಂತರ್ಯದಲ್ಲಿ ದೇವರನ್ನು ಹುಡುಕದೆ ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಾನೆ - ನಿಮಗೂ ನಿಮ್ಮ ಕುಟುಂಬಕ್ಕೂ ಶಂಕರಚಾರ್ಯ ಜಯಂತಿಯ ಶುಭಾಶಯಗಳು.
(6 / 9)
ಸತ್ಯವನ್ನು ತಿಳಿಯಲು ಜ್ಞಾನ ಬಹಳ ಅವಶ್ಯಕ, ಅದು ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಇದೇ ಜ್ಞಾನ ಮಾರ್ಗ ಶಂಕರ ಪಂಚಮಿಯ ಶುಭ ಹಾರೈಕೆಗಳು
(7 / 9)
ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ ಸಹೋದರಹಃ ಅರ್ಥೋ ನಾಸ್ತಿ ಗೃಹಂ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ - ಶಂಕರ ಜಯಂತಿಯ ಶುಭಾಶಯಗಳು
(8 / 9)
ಹುಟ್ಟುವುದು ದುಃಖ ಮುಪ್ಪು ದುಃಖ ಹೆಂಡತಿಯು ದುಃಖ ಮತ್ತೆ ಮತ್ತೆ ಯಾವಾಗಲೂ ಈ ಸಂಸಾರ ಸಾಗರವೇ ದುಃಖ ಆದ್ದರಿಂದ ಎಚ್ಚರಗೊಳ್ಳಿರಿ - ಶಂಕರ ನವಮಿಯ ಶುಭಾಶಯಗಳು
ಇತರ ಗ್ಯಾಲರಿಗಳು