Somvati Amavasya 2024: ಸೋಮಾವತಿ ಅಮಾವಾಸ್ಯೆ ಯಾವಾಗ? ಈ ರೀತಿ ಮಾಡುವುದರಿಂದ ಲಭಿಸುತ್ತದೆ ಪೂರ್ವಜರ ಆಶೀರ್ವಾದ
- Somvati Amavasya 2024: ಹಿಂದೂ ಧರ್ಮದಲ್ಲಿ ಸೋಮಾವತಿ ಅಮವಾಸ್ಯೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಆ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಸುಖ, ಸಂತೋಷ ಮತ್ತು ಶಾಂತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಸೋಮಾವತಿ ಅಮವಾಸ್ಯೆಯ ದಿನ ಏನು ಮಾಡಬೇಕು ಎಂದು ನೋಡೋಣ.
- Somvati Amavasya 2024: ಹಿಂದೂ ಧರ್ಮದಲ್ಲಿ ಸೋಮಾವತಿ ಅಮವಾಸ್ಯೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಆ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಸುಖ, ಸಂತೋಷ ಮತ್ತು ಶಾಂತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಸೋಮಾವತಿ ಅಮವಾಸ್ಯೆಯ ದಿನ ಏನು ಮಾಡಬೇಕು ಎಂದು ನೋಡೋಣ.
(1 / 7)
ಹಿಂದೂಗಳು ಅಮವಾಸ್ಯೆಗೆ ಧಾರ್ಮಿಕ ಮಹತ್ವವನ್ನು ನೀಡಿದ್ದಾರೆ. ಈ ದಿನದಂದು ಜನರು ಪೂಜೆ, ವ್ರತಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಈ ಬಾರಿ ಶ್ರಾವಣ ಮಾಸದ ಅಮಾವಾಸ್ಯೆಯು ಸೋಮವಾರದಂದು ಬರುವುದರಿಂದ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ.
(2 / 7)
ಸೋಮಾವತಿ ಅಮಾವಾಸ್ಯೆಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಪುಣ್ಯನದಿಯಲ್ಲಿ ಸ್ನಾನ ಮಾಡಿ, ತರ್ಪಣವನ್ನು ನೀಡುವುದರಿಂದ ಪೂರ್ವಜರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಅಷ್ಟೇ ಅಲ್ಲದೇ, ಇದು ಮಕ್ಕಳ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.
(3 / 7)
ಸೋಮಾವತಿ ಅಮಾವಾಸ್ಯೆಯು ಸೆಪ್ಟೆಂಬರ್ 2, 2024 ಸೋಮವಾರದಂದು ಬರುತ್ತದೆ. ಅದು ಶ್ರಾವಣ ಮಾಸದ ಅಮಾವಾಸ್ಯೆಯ ದಿನವಾಗಿದೆ. ಈ ದಿನದಂದು ಪಿತೃ ದೇವತೆಗಳಿಗೆ ಶ್ರಾದ್ಧ, ತರ್ಪಣ ಮತ್ತು ಪಿಂಡವನ್ನು ಅರ್ಪಿಸಲಾಗುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ. ಶ್ರಾವಣ ಮಾಸದ ಅಮವಾಸ್ಯೆಯು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 05:21 ಕ್ಕೆ ಪ್ರಾರಂಭವಾಗುತ್ತದೆ. ಅದು 3ನೇ ಸೆಪ್ಟೆಂಬರ್ 2024 ರಂದು ಬೆಳಿಗ್ಗೆ 07:24 ಕ್ಕೆ ಕೊನೆಗೊಳ್ಳುತ್ತದೆ.
(4 / 7)
ಸೋಮಾವತಿ ಅಮಾವಾಸ್ಯೆಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಹಿಟ್ಟು ಅಥವಾ ಹಿಟ್ಟಿನ ಉಂಡೆಗಳನ್ನು ಮಾಡಿ ಮತ್ತು ಅವುಗಳನ್ನು ಮೀನು ಮತ್ತು ಇರುವೆಗಳಿಗೆ ತಿನ್ನಿಸಬೇಕು.
(5 / 7)
ಈ ದಿನ ಆಲ, ಬಾಳೆ, ತುಳಸಿ ಮುಂತಾದ ಗಿಡಗಳನ್ನು ನೆಡಬೇಕು. ಏಕೆಂದರೆ ಈ ಗಿಡಗಳಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು ನಂಬಲಾಗಿದೆ.
(6 / 7)
ಸೋಮಾವತಿ ಅಮವಾಸ್ಯೆಯಂದು ಮಾಡುವ ಈ ಆಚರಣೆಗಳು ಪೂರ್ವಜರನ್ನು ಮೆಚ್ಚಿಸುತ್ತದೆ. ಅದು ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಸೋಮಾವತಿ ಅಮಾವಾಸ್ಯೆ ದಿನವನ್ನು ಪಿತೃಗಳು ಮತ್ತು ಶಿವನ ಆರಾಧನೆಗೆ ಮೀಸಲಿಡಲಾಗಿದೆ. ಈ ದಿನ ಸೂರ್ಯೋದಯಕ್ಕೆ ಮುನ್ನ ನದಿಯಲ್ಲಿ ಸ್ನಾನ ಮಾಡಿ. ನಂತರ ಹಸಿ ಹಾಲಿಗೆ ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಿ.
ಇತರ ಗ್ಯಾಲರಿಗಳು