ಅಯ್ಯೋ, ಆಸ್ಕರ್ ಕಾರ್ಯಕ್ರಮದಲ್ಲಿ ಹೀಗೆಲ್ಲ ಆಯ್ತ? ಅತ್ಯುತ್ತಮ, ಕೆಟ್ಟ ಮತ್ತು ಅತಿರೇಕದ ಕ್ಷಣಗಳಿಗೆ ಸಾಕ್ಷಿಯಾದ ಸಮಾರಂಭ
- ಆಸ್ಕರ್ 2024 ಕಾರ್ಯಕ್ರಮವು ಈ ಬಾರಿ ಹಲವು ಬಗೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೆಲವೊಂದು ಕ್ಷಣಗಳು ಕಣ್ಣಲ್ಲಿ ನೀರು ತರಿಸಿದರೆ, ಇನ್ನು ಕೆಲವು ವಿಷಯಗಳು ನಗು ತರಿಸಿವೆ. ಇನ್ನು ಕೆಲವು ಕ್ಷಣಗಳು "ಛೀ ಹೀಗೆಲ್ಲ ಮಾಡೋದ" ಅನ್ನೋ ರೀತಿ ಇತ್ತು. 96ನೇ ಅಕಾಡೆಮಿ ಅವಾರ್ಡ್ ಸಮಾರಂಭದ ಕೆಲವೊಂದು ಕ್ಷಣಗಳ ಝಲಕ್ ಇಲ್ಲಿದೆ.
- ಆಸ್ಕರ್ 2024 ಕಾರ್ಯಕ್ರಮವು ಈ ಬಾರಿ ಹಲವು ಬಗೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೆಲವೊಂದು ಕ್ಷಣಗಳು ಕಣ್ಣಲ್ಲಿ ನೀರು ತರಿಸಿದರೆ, ಇನ್ನು ಕೆಲವು ವಿಷಯಗಳು ನಗು ತರಿಸಿವೆ. ಇನ್ನು ಕೆಲವು ಕ್ಷಣಗಳು "ಛೀ ಹೀಗೆಲ್ಲ ಮಾಡೋದ" ಅನ್ನೋ ರೀತಿ ಇತ್ತು. 96ನೇ ಅಕಾಡೆಮಿ ಅವಾರ್ಡ್ ಸಮಾರಂಭದ ಕೆಲವೊಂದು ಕ್ಷಣಗಳ ಝಲಕ್ ಇಲ್ಲಿದೆ.
(1 / 9)
ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಲವು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದು. ಇದೇ ಸಂದರ್ಭದಲ್ಲಿ ನಿರಾಶೆ, ಹತಾಶೆ, ಅನಿರೀಕ್ಷಿತ ಕ್ಷಣಗಳಿಗೆ ಆಸ್ಕರ್ ಕಾರ್ಯಕ್ರಮ ಸಾಕ್ಷಿಯಾಗಿದೆ. ಕೆಲವು ಸಿನಿಮಾಗಳು, ನಟಿಯರು, ನಟರು ಅನಿರೀಕ್ಷಿತವಾಗಿ ಗೆಲುವಿನ ನಗೆ ಬೀರಿದರು. ಕೆಲವೊಂದು ಘಟನೆಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವು.
(2 / 9)
ಅತ್ಯುತ್ತಮ ಕ್ಷಣ : ಟ್ರಯಂಫ್: ದಿ ಹೋಲ್ಡ್ ಓವರ್ಸ್‌ನಲ್ಲಿ ನಟಿಸಿರುವ ಡಾ'ವೈನ್ ಜಾಯ್ ರಾಂಡೋಲ್ಫ್ ಅವರು ಅತ್ಯುತ್ತಮ ಪೋಷಕ ನಟಿಯಾಗಿ ಹೊರಹೊಮ್ಮಿದ ಕ್ಷಣ ಭಾವುಕರಾದರು. ಭವ್ಯ ವೇದಿಕೆಯಲ್ಲಿ ಅವರ ಪ್ರತಿಭೆಯ ಅನಾವರಣವೂ ಆಯ್ತು.
(AFP)(3 / 9)
ನಿರಾಶೆ: ಮೆಸ್ಸಿ ದಿ ಡಾಗ್‌ನಲ್ಲಿ ನಟಿಸಿರುವ ನಾಯಿಯ ನೋಟ ಸಾಕಷ್ಟು ಜನರಿಗೆ ನಿರಾಶೆ ತಂದಿತು. ಸಿನಿಮಾದಲ್ಲಿದ್ದಂತಹ ನೋಟ ಸಿಗದೆ ಜನರು ನಿರಾಶರಾದರು.
(AP)(4 / 9)
ಖುಷಿಯ ಕ್ಷಣ: ಆಸ್ಕರ್ ಕಾರ್ಯಕ್ರಮವನ್ನು ಜಿಮ್ಮಿ ಕಿಮ್ಮೆಲ್ ಅತ್ಯಂತ ಸುಂದರಾಗಿ ನಡೆಸಿಕೊಟ್ಟರು. ಇವರ ಹಾಸ್ಯ, ಬುದ್ಧಿವಂತಿಕೆಯ ಮಾತುಗಳು ಜನರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಖುಷಿಯ, ಲವಲವಿಕೆಯ ವಾತಾವರಣ ತಂದುಕೊಟ್ಟಿತು.
(AFP)(5 / 9)
ಭಾವುಕ ಕ್ಷಣ: ಮಾಸ್ಟಿಸ್ಲಾವ್ ಚೆರ್ನೊವ್ ಭಾವೋದ್ರಿಕ್ತ ಮನವಿ: ಮಾರಿಯುಪೋಲ್‌ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ನಿರ್ದೇಶಕ ಮಾಸ್ಟಿಸ್ಲಾವ್ ಚೆರ್ನೊವ್ ಅವರು ತಮ್ಮ ಚಿತ್ರದ ಕುರಿತು ವಿಷಾದ ವ್ಯಕ್ತಪಡಿಸಿ ಹೃದಯಸ್ಪರ್ಶಿ ಭಾಷಣ ಮಾಡಿದರು. ಇದು ಸಹೃದಯರ ಹೃದಯ ಹಿಂಡಿತು.
(AFP)(6 / 9)
ಅತ್ಯುತ್ತಮ: ಓಪನ್‌ಹೈಮರ್ ಸಿನಿಮಾ ಏಳು ವಿಭಾಗಗಳಲ್ಲಿ ಗೆಲುವು ಪಡೆಯಿತು. ಈ ಕ್ಷಣಗಳು ಅತ್ಯುತ್ತಮವಾಗಿತ್ತು.
(AFP)(7 / 9)
ಹೀಗಾಗ್ಬರ್ದಿತ್ತು: ಡಾ'ವೈನ್ ಜಾಯ್ ರಾಂಡೋಲ್ಫ್ ಅವರ ಭಾವುಕ ಭಾಷಣದ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಇದು ವಿಜೇತರಿಗೆ ಗೊಂದಲವುಂಟು ಮಾಡಿತ್ತು. ಆಸ್ಕರ್‌ನಂತಹ ಪ್ರಮುಖ ಕಾರ್ಯಕ್ರಮಕ್ಕೆ ಇದು ಮುಜುಗರ ಉಂಟುಮಾಡಿತು.
(AFP)(8 / 9)
ಜೆಂಡಯಾ ಅವರ ಅತ್ಯಂತ ಸ್ಮರಣೀಯ ಫ್ಯಾಷನ್ ಸ್ಟೇಟ್‌ಮೆಂಟ್: ತನ್ನ ಬೋಲ್ಡ್ ಫ್ಯಾಷನ್ ಸ್ಟೇಟ್‌ಮೆಂಟ್ ಮೂಲಕ ಹೊಸ ಟ್ರೆಂಡ್ ಅನ್ನು ಸ್ಥಾಪಿಸಿದ ಜೆಂಡಯಾ ಅವರ ಅದ್ಭುತ ಉಡುಗೆ ಆಯ್ಕೆಯು ಎಲ್ಲರ ಗಮನ ಸೆಳೆಯಿತು.
(AFP)ಇತರ ಗ್ಯಾಲರಿಗಳು