Tea Stain: ಬಟ್ಟೆಯ ಮೇಲಿನ ಚಹಾ ಕಲೆ ಅಳಿಸುವುದು ಹೇಗೆ? ಇಲ್ಲಿದೆ ಸುಲಭ ತಂತ್ರ
- Simple Tricks To Remove Tea Stain: ನಾವು ಧರಿಸಿದ್ದ ಉಡುಪು, ಟೇಬಲ್ ಕವರ್, ಟೀಪಾಯಿ ಕವರ್ ಮೇಲೆ ಆಕಸ್ಮಿಕವಾಗಿ ಬಿದ್ದ ಚಹಾಕಲೆಯನ್ನು ಅಳಿಸಿ ಹಾಕಲು ಸಾಧ್ಯವಾಗದೇ ಪರದಾಡುತ್ತೇವೆ. ಆದರೆ ಈ ಸುಲಭ ತಂತ್ರದಿಂದ ಚಹಾ ಕಲೆಯನ್ನು ತಕ್ಷಣಕ್ಕೆ ಮಾಯ ಮಾಡಬಹುದು, ಏನು ಆ ತಂತ್ರ ಅಂತೀರಾ, ಮುಂದೆ ಓದಿ.
- Simple Tricks To Remove Tea Stain: ನಾವು ಧರಿಸಿದ್ದ ಉಡುಪು, ಟೇಬಲ್ ಕವರ್, ಟೀಪಾಯಿ ಕವರ್ ಮೇಲೆ ಆಕಸ್ಮಿಕವಾಗಿ ಬಿದ್ದ ಚಹಾಕಲೆಯನ್ನು ಅಳಿಸಿ ಹಾಕಲು ಸಾಧ್ಯವಾಗದೇ ಪರದಾಡುತ್ತೇವೆ. ಆದರೆ ಈ ಸುಲಭ ತಂತ್ರದಿಂದ ಚಹಾ ಕಲೆಯನ್ನು ತಕ್ಷಣಕ್ಕೆ ಮಾಯ ಮಾಡಬಹುದು, ಏನು ಆ ತಂತ್ರ ಅಂತೀರಾ, ಮುಂದೆ ಓದಿ.
(1 / 5)
ಮನೆ ಆಗಿರಲಿ, ಕಚೇರಿ ಆಗಿರಲಿ ಗಂಭೀರ ಚರ್ಚೆ, ಮೀಟಿಂಗ್‌ಗಳು ನಡೆಯುವಾಗ ಚಹಾ ಕುಡಿಯುವುದು ರೂಢಿ. ಮನೆಯಲ್ಲೂ ಪ್ರತಿನಿತ್ಯ ಚಹಾ, ಕಾಫಿ ಕುಡಿಯುತ್ತೇವೆ. ಆದರೆ ಕೆಲವೊಮ್ಮೆ ಚಹಾ ಕುಡಿಯುವಾಗ ಆಕಸ್ಮಿಕವಾಗಿ ಕಪ್ ಕೈಯಿಂದ ಜಾರಿ ಬಿದ್ದು ಅಥವಾ ಕೈ ಕುಲುಕಿ ಚಹಾ ಬಟ್ಟೆಯ ಮೇಲೆ ಚೆಲ್ಲಿ ಕಲೆಯಾಗಬಹುದು. ಆದರೆ ಈ ಕಲೆ ಸುಲಭವಾಗಿ ಹೋಗುವುದಿಲ್ಲ. ಹಾಗಂತ ಕಲೆ ತೆಗೆಯುವುದು ಕಷ್ಟವೇನಲ್ಲ. ಸುಲಭವಾಗಿ ಕಲೆ ತೆಗೆಯಲು ಇಲ್ಲಿದೆ ಸುಲಭ ತಂತ್ರ.
(2 / 5)
ವಿನೆಗರ್: ಅರ್ಧ ಕಪ್ ನೀರು ಮತ್ತು ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ ಒಂದು ಸ್ಪೇಯರ್ ಬಾಟಲಿಗೆ ಹಾಕಿ. ನಂತರ ಆ ನೀರನ್ನು ಟೀ ಅಥವಾ ಚಹಾ ಕಲೆ ಇರುವ ಬಟ್ಟೆಯ ಮೇಲೆ ಚಿಮುಕಿಸಿ. ಇದನ್ನು 5 ರಿಂದ 7 ನಿಮಿಷ ಬಿಡಿ, ಪುನಃ ಇನ್ನೊಮ್ಮೆ ವಿನೆಗರ್ ನೀರು ಸಿಂಪಡಿಸಿ, ನಂತರ ಬಟ್ಟೆಯನ್ನು ನೀರಿನಲ್ಲಿ ಅದ್ದಿ ತೊಳೆಯಿರಿ, ಇದರಿಂದ ಕಲೆ ಮಾಯವಾಗುತ್ತದೆ.
(3 / 5)
ಬಿಸಿನೀರು: ಬಟ್ಟೆಯ ಮೇಲಿನ ಟೀ ಕಲೆ ನಿವಾರಿಸಲು ಬಿಸಿನೀರು ಉತ್ತಮ. ಕಲೆಯಾದ ಜಾಗವನ್ನು ಮಾತ್ರ ಬೇರ್ಪಡಿಸಿ ಹಿಡಿದುಕೊಂಡು ಅದರ ಮೇಲೆ ಸ್ವಲ್ಪ ಬಿಸಿ ನೀರು ಸುರಿಯಿರಿ. ನಂತರ ಸ್ವಲ್ಪ ಡಿರ್ಟಜೆಂಟ್ ಸೇರಿಸಿ ಉಜ್ಜಿ. ಇದರಿಂದ ಕಲೆಗಳು ಮಾಯವಾಗುತ್ತವೆ. ನಂತರ ತಣ್ಣಿರಿನಿಂದ ಇನ್ನೊಮ್ಮೆ ತೊಳೆಯಿರಿ.
(4 / 5)
ನಿಂಬೆರಸ ಮತ್ತು ಉಪ್ಪು: ಉಡುಪಿನಲ್ಲಿ ಕಲೆ ಇರುವ ಜಾಗಕ್ಕೆ ನಿಂಬೆರಸ ಹಾಕಿ. ನಂತರ ಅದನ್ನು ಉಪ್ಪು ಮತ್ತು ಸೋಪಿನಿಂದ ತೊಳೆಯಿರಿ. ಇದರಿಂದ ಕಲೆ ಹೋಗುತ್ತದೆ. ಬಟ್ಟೆ ಒಗೆಯುವಾಗ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕಲೆಯಾದ ಜಾಗಕ್ಕೆ ನೀರು ಹಾಕಿ ಉಜ್ಜುವುದರಿಂದಲೂ ಕಲೆ ನಿವಾರಣೆಯಾಗುತ್ತದೆ.
(5 / 5)
ಅಡಿಗೆ ಸೋಡಾ: ಚಹಾವನ್ನು ಕಪ್‌ಗೆ ಸುರಿಯುವಾಗ ಹಲವು ಬಾರಿ ಮೇಜಿನ ಮೇಲೆ ಹಾಸಿದ ಬಟ್ಟೆಯ ಮೇಲೆ ಚಹಾ ಬಿದ್ದು ಕಲೆಯಾಗುತ್ತದೆ. ದಪ್ಪ ಬಟ್ಟೆಗಳು ಸುಲಭವಾಗಿ ಕಲೆ ಹೋಗುವುದಿಲ್ಲ. ಆಗ ಅಡುಗೆ ಸೋಡಾ ಉಪಯೋಗಕ್ಕೆ ಬರುತ್ತದೆ. ಅಡಿಗೆ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ. ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಿ. ಸ್ವಲ್ಪ ಹೊತ್ತಿನ ನಂತರ ಬಟ್ಟೆ ಒಗೆಯಿರಿ. (ಈ ಲೇಖನದಲ್ಲಿನ ಮಾಹಿತಿಯು ಸಾಮಾನ್ಯ ತಿಳುವಳಿಕೆಯನ್ನು ಆಧರಿಸಿದೆ. ತಜ್ಞರಿಂದ ಸೂಕ್ತ ವಿವರ ಪಡೆಯುವುದು ಉತ್ತಮ.)
ಇತರ ಗ್ಯಾಲರಿಗಳು