ಕನ್ನಡ ಸುದ್ದಿ  /  Photo Gallery  /  Home And Interior Ac Buying Tips Must Follow These Tips Before Buying Ac To Home Reducing Power Bill Rst

AC Buying Tips: ತಾಪಮಾನ ಏರಿಕೆಯಾಗ್ತಿದೆ, ಮನೆಗೆ ಏಸಿ ಹಾಕಿಸಬೇಕು ಅಂತಿದೀರಾ; ಹಾಗಿದ್ರೆ ಈ ವಿಚಾರಗಳು ಗಮನದಲ್ಲಿರಲಿ

ಈ ವರ್ಷ ಬಿಸಿಲಿನ ತಾಪ ಜೋರಾಗಿದೆ. ಮನೆಯ ಒಳಗೆ ಕುಳಿತುಕೊಳ್ಳುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ಇದೆ. ಹಾಗಾಗಿ ಮನೆಗೆ ಏಸಿ ಹಾಕಿಸೋಣ ಅಂತ ನೀವು ನಿರ್ಧಾರ ಮಾಡಿರಬಹುದು. ಆದರೆ ಏಸಿ ಖರೀದಿಗೂ ಮುನ್ನ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಲು ಮರೆಯದಿರಿ.

ಮಾರ್ಚ್‌ ತಿಂಗಳು ಮುಗಿಯುತ್ತಿದೆ. ಏಪ್ರಿಲ್‌ ತಿಂಗಳಿನಲ್ಲಿ ಇನ್ನಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಹಲವರು ಕೂಲರ್‌, ಏಸಿ ಖರೀದಿ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಆದರೆ ಏಸಿ ಖರೀದಿಸುವಾಗ ವಿದ್ಯುತ್‌ ಬಿಲ್‌ ಬಗ್ಗೆಯೂ ಚಿಂತಿಸುವುದು ಸಹಜ. ನೀವು ಈ ಬಾರಿ ಮನೆಗೆ ಏಸಿ ಹಾಕಿಸುವ ಯೋಚನೆ ಇದ್ದರೆ ಈ ಅಂಶ ಗಮನಿಸಿ. 
icon

(1 / 8)

ಏಸಿ ಹಾಕಿಸುವುದರಿಂದ ಕರೆಂಟ್‌ ಬಿಲ್‌ ಜಾಸ್ತಿ ಬರುತ್ತದೆ ಎಂಬುದು ಮಾತ್ರವಲ್ಲ, ಮಷಿನ್‌ ಕೂಡ ಎಷ್ಟು ದಿನ ಬಾಳಿಕೆ ಬರುತ್ತದೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಹಾಗಾಗಿ ಖರೀದಿಗೂ ಮುನ್ನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದ್ರೆ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಎಂಬುದನ್ನು ನೋಡೋಣ.  
icon

(2 / 8)

ತಾಮ್ರದ ಸುರುಳಿ ಹೊಂದಿರುವ ಏಸಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇತರ ಲೋಹದ ಸುರುಳಿಗಳನ್ನು ಹೊಂದಿರುವ ಏಸಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಅವು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ತಾಮ್ರದ ಸುರುಳಿ ಇರುವ ಏಸಿಯಿಂದ ಸ್ವಲ್ಪ ಮಟ್ಟಿಗೆ ವಿದ್ಯುತ್‌ ಉಳಿತಾಯವೂ ಆಗುತ್ತದೆ.
icon

(3 / 8)

ಹೊಸ ಏಸಿ ಖರೀದಿಸುವಾಗ ಬಿಇಇ (BEE) ರೇಟಿಂಗ್ ಪರಿಶೀಲಿಸಬೇಕು. 5 ಸ್ಟಾರ್ ರೇಟಿಂಗ್ ಹೊಂದಿರುವ ಏಸಿ ಖರೀದಿಸುವುದು ಉತ್ತಮ. ಇದಕ್ಕಾಗಿ ನೀವು ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ ಈ ಎಸಿಗಳು ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತವೆ. ಇದರಿಂದ ಭವಿಷ್ಯದಲ್ಲಿ ವೆಚ್ಚ ಕಡಿಮೆಯಾಗುತ್ತದೆ.
icon

(4 / 8)

ವಿಂಡೋ ಏಸಿಗೆ ಹೋಲಿಸಿದರೆ ಸ್ಪ್ಲಿಟ್ ಏಸಿ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಆದಾಗ್ಯೂ, ಸ್ಪ್ಲಿಟ್ ಎಸಿ ವೆಚ್ಚವೂ ಹೆಚ್ಚು. ಸ್ಪ್ಲಿಟ್ ಎಸಿಯನ್ನು ಯಾವುದೇ ಕೋಣೆಯಲ್ಲಿ ಸುಲಭವಾಗಿ ಅಳವಡಿಸಬಹುದು. ಮನೆಯಲ್ಲಿ ವಿಂಡೋ ಏಸಿ ಹಾಕಿಸಲು ಕಿಟಕಿಗಳು ಇರಬೇಕು. ಸ್ಪ್ಲಿಟ್ ಎಸಿಯಲ್ಲಿ, ಆನ್‌ಬೋರ್ಡ್ ಸ್ಲೀಪಿಂಗ್, ಟರ್ಬೊ ಕೂಲಿಂಗ್ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ನೀವು ಪಡೆಯುತ್ತೀರಿ. ನಿಮ್ಮ ಮನೆಗೆ ಯಾವುದು ಉತ್ತಮ ಎಂಬುದನ್ನು ನೀವು ಮೊದಲು ನಿರ್ಧರಿಸಿ. 
icon

(5 / 8)

ಏಸಿ ಖರೀದಿಸುವಾಗ, ಕೋಣೆಯ ಗಾತ್ರವನ್ನು ಪರಿಗಣಿಸುವುದು ಸಹ ಮುಖ್ಯ. ಕೋಣೆಯ ಗಾತ್ರವು 100 ರಿಂದ 120 ಚದರ ಅಡಿ ಇದ್ದರೆ, ನೀವು 1 ಟನ್ ಏಸಿ ಖರೀದಿಸಬಹುದು. ನಿಮ್ಮ ಮನೆ ಇದಕ್ಕಿಂತ ದೊಡ್ಡದಾಗಿದ್ದರೆ, ನಿಮ್ಮ ಮನೆಗೆ ಒಂದೂವರೆಯಿಂದ ಎರಡು ಟನ್ ಏಸಿ ಒಳ್ಳೆಯದು. 
icon

(6 / 8)

ಏಸಿ ಖರೀದಿಸುವಾಗ ಅದರಲ್ಲಿ ಏರ್ ಫಿಲ್ಟರ್ ಇರುವಂತೆ ನೋಡಿಕೊಳ್ಳಿ. ಕೆಲವು ಏಸಿಗಳು ಸ್ಮೆಲ್‌ ಫಿಲ್ಟರ್‌ ಮತ್ತು ಬ್ಯಾಕ್ಟೀರಿಯಾ ವಿರೋಧಿ ಫಿಲ್ಟರ್‌ಗಳನ್ನು ಸಹ ಹೊಂದಿವೆ. ಬೆಲೆ ಹೆಚ್ಚಿದ್ದರೂ, ಈ ಎಲ್ಲಾ ಫಿಲ್ಟರ್‌ಗಳೊಂದಿಗೆ ಎಸಿ ಖರೀದಿಸುವುದು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

IPL_Entry_Point

ಇತರ ಗ್ಯಾಲರಿಗಳು