Life Hacks: ಹೊಸ ವರ್ಷದಲ್ಲಿ ಲೈಫ್ ಈಸಿ ಆಗಿರ್ಬೇಕಾ; ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್, ಫಾಲೋ ಮಾಡಿ
- ಮನೆ, ಆಫೀಸ್, ಟ್ರಾಫಿಕ್, ಓಡಾಟದ ನಡುವೆ ಲೈಫ್ ಈಸಿ ಇದ್ರೆ ಎಷ್ಟು ಚೆಂದ ಅನ್ನಿಸುವುದು ಸಹಜ. ಆದರೆ ಕೆಲವೊಮ್ಮೆ ಮನೆಯಲ್ಲಿ ಕೆಲವು ಕೆಲಸಗಳು ಬಹಳ ಕಷ್ಟ ಎನ್ನಿಸಿ ಬಿಡುತ್ತವೆ. ಅಲ್ಲದೇ ಸಮಯವನ್ನೂ ಹಾಳು ಮಾಡುತ್ತವೆ. ಆದ್ರೆ ಇದರಿಂದ ಪರಿಹಾರ ಪಡೆಯಲು ಹಾಗೂ ಕೆಲಸವನ್ನು ಸರಳ ಮಾಡಿಕೊಂಡು ಸಮಯ ಉಳಿತಾಯ ಮಾಡಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಲೈಫ್ ಹ್ಯಾಕ್ಸ್.
- ಮನೆ, ಆಫೀಸ್, ಟ್ರಾಫಿಕ್, ಓಡಾಟದ ನಡುವೆ ಲೈಫ್ ಈಸಿ ಇದ್ರೆ ಎಷ್ಟು ಚೆಂದ ಅನ್ನಿಸುವುದು ಸಹಜ. ಆದರೆ ಕೆಲವೊಮ್ಮೆ ಮನೆಯಲ್ಲಿ ಕೆಲವು ಕೆಲಸಗಳು ಬಹಳ ಕಷ್ಟ ಎನ್ನಿಸಿ ಬಿಡುತ್ತವೆ. ಅಲ್ಲದೇ ಸಮಯವನ್ನೂ ಹಾಳು ಮಾಡುತ್ತವೆ. ಆದ್ರೆ ಇದರಿಂದ ಪರಿಹಾರ ಪಡೆಯಲು ಹಾಗೂ ಕೆಲಸವನ್ನು ಸರಳ ಮಾಡಿಕೊಂಡು ಸಮಯ ಉಳಿತಾಯ ಮಾಡಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಲೈಫ್ ಹ್ಯಾಕ್ಸ್.
(1 / 11)
ಇತ್ತೀಚಿನ ದಿನಗಳಲ್ಲಿ ಬದುಕನ್ನು ಸರಳವಾಗಿ ಕಳೆಯುವಂತೆ ಮಾಡುವುದು ನಿಜಕ್ಕೂ ಕಷ್ಟ. ಒತ್ತಡದ ನಡುವೆ ಸಮಯ ಎಂಬುದು ಮರಿಚಿಕೆಯಾಗಿದೆ. ಪ್ರತಿದಿನ ಮನೆ, ಕಚೇರಿ ಇವುಗಳ ನಡುವೆಯೇ ಬದುಕು ಹರಿದು ಹಂಚಿ ಹೋಗಿದೆ ಎನ್ನಿಸುವುದು ಸುಳ್ಳಲ್ಲ. ಆದ್ರೆ ಈ ಕೆಲವು ಲೈಫ್ ಹ್ಯಾಕ್ಸ್‌ಗಳನ್ನು ಕಲಿತು ಕೊಂಡರೆ ಬದುಕು ಸುಂದರ ಎನ್ನಿಸುವುದು ಸುಳ್ಳಲ್ಲ.
(2 / 11)
ಶೂ ವಾಸನೆ ಹೋಗಲು ಹೀಗೆ ಮಾಡಿ: ಶೂ ವಾಸನೆಯಿಂದ ಮುಜುಗರ ಉಂಟಾಗುವುದು ಸಾಮಾನ್ಯ. ಇದನ್ನು ಹೋಗಲಾಡಿಸಲು ಇರುವ ಸಿಂಪಲ್ ಟ್ರಿಕ್ಸ್ ಎಂದರೆ ಡ್ರೈ ಟೀ ಬ್ಯಾಗ್ ಅನ್ನು ರಾತ್ರಿಯಿಡಿ ಶೂ ಒಳಗೆ ಇರಿಸುವುದು. ಇದರಿಂದ ಶೂನಿಂದ ಬರುವ ಬ್ಯಾಡ್ ಸ್ಮೆಲ್ ನಿವಾರಣೆಯಾಗುತ್ತದೆ. (Shutterstock )
(3 / 11)
ಕಾರ್ಪೇಟ್ ಸ್ವಚ್ಛ ಮಾಡಲು ಬೇಕಿಂಗ್ ಸೋಡಾ: ಮನೆಯ ಕಾರ್ಪೇಟ್ ಆಹಾರ ಪದಾರ್ಥಗಳು ಬಿದ್ದು ಕೊಳೆಯದಾಗಿದ್ದರೆ ದುರ್ವಾಸನೆ ಬರುತ್ತದೆ. ಅಲ್ಲದೆ ಕಲೆ ಉಂಟಾಗುತ್ತದೆ. ಇದನ್ನು ಸ್ವಚ್ಛ ಮಾಡಲು ಕಾರ್ಪೇಟ್ ಮೇಲೆ ಸೋಡಾ ಪುಡಿ ಉದುರಿಸಿ. ಒಂದಿಷ್ಟು ಸೊತ್ತು ಹಾಗೆ ಬಿಡಿ. ನಂತರ ಆ ಭಾಗವನ್ನಷ್ಟೇ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ಕಲೆ ಸ್ವಚ್ಛವಾಗುವುದು ಮಾತ್ರವಲ್ಲ, ದುರ್ವಾಸನೆಯೂ ನಿವಾರಣೆಯಾಗುತ್ತದೆ. (Starinsider )
(4 / 11)
ಅಡುಗೆ ಪ್ಲಾನಿಂಗ್‌ಗೆ ಕ್ಲಿಪ್ ಬೋರ್ಡ್: ಒಂದು ವಾರಗಳ ಕಾಲ ಏನೇನು ಅಡುಗೆ ಮಾಡಬೇಕು ಎಂಬುದನ್ನು ಮೊದಲೇ ಬರೆದಿಟ್ಟುಕೊಳ್ಳಿ. ಅದನ್ನು ಬರೆದು ಕ್ಲಿಪ್ ಬೋರ್ಡ್ ಮೇಲೆ ಅಂಟಿಸಿ, ಅಡುಗೆಮನೆಯಲ್ಲಿ ನೇತು ಹಾಕಿ. ಇದು ಅಡುಗೆಮನೆಯಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡುವ ನಿಮಗೆ ನೆರವಾಗುತ್ತದೆ.(Shutterstock )
(5 / 11)
ಸ್ಕ್ರೀನ್ ಕ್ಲೀನಿಂಗ್‌ಗೆ ಕಾಫಿ ಫಿಲ್ಟರ್: ಟಿವಿ, ಕಂಪ್ಯೂಟರ್, ಮೊಬೈಲ್‌ನಂತಹ ಪರದೆಯನ್ನು ಸ್ವಚ್ಛ ಮಾಡಲು ಕಾಫಿ ಫಿಲ್ಟರ್ ನಿಮಗೆ ನೆರವಾಗುತ್ತದೆ. ಇದು ಪರದೆಯ ಮೇಲೆ ಯಾವುದೇ ರೀತಿಯ ಸ್ಕ್ರ್ಯಾಚ್ ಉಂಟಾಗದಂತೆ ಸ್ವಚ್ಛ ಮಾಡಲು ನೆರವಾಗುತ್ತದೆ. ಅಲ್ಲದೆ ಸ್ಕ್ರೀನ್ ಅನ್ನು ಪಳಪಳ ಹೊಳೆಯುವಂತೆ ಮಾಡುತ್ತದೆ. (Shutterstock )
(6 / 11)
ಶೂ ಸುತ್ತಿಡಲು ಶವರ್ ಕ್ಯಾಪ್: ಟ್ರಾವೆಲ್ ಮಾಡುವಾಗ ಬಟ್ಟೆಗಳ ಜೊತೆ ಶೂ ಇರಿಸಿಕೊಳ್ಳುವುದು ನಿಜಕ್ಕೂ ಕಷ್ಟ. ಇದರಿಂದ ಬಟ್ಟೆಗಳು ಗಲೀಜಾಗಬಹುದು. ಇದನ್ನು ತಪ್ಪಿಸಲು ಶೂ ಅನ್ನು ಶವರ್ ಕ್ಯಾಪ್‌ನಿಂದ ಕಟ್ಟಿ ಇಡಬಹುದು. ಇದರಿಂದ ಬಟ್ಟೆ ಹಾಳಾಗುತ್ತೆ ಅನ್ನೋ ಚಿಂತೆನೂ ಇರಲ್ಲ. (Shutterstock )
(7 / 11)
ಸಿಂಕ್ ಸ್ವಚ್ಛ ಮಾಡಲು ನಿಂಬೆಹಣ್ಣು: ಅಡುಗೆಮನೆಯ ಸಿಂಕ್ ಎಷ್ಟೇ ಸ್ವಚ್ಛ ಮಾಡಿದ್ರು ವಾಸನೆ ಬರುವುದು, ಕೊಳೆಯಾದಂತೆ ಕಾಣಿಸುವುದು ಸಹಜ. ಹಾಗಾಗಿ ಇದನ್ನು ಸ್ವಚ್ಛ ಮಾಡಲು ನಿಂಬೆಹಣ್ಣು ಬಳಸುವುದು ಉತ್ತಮ. ನಿಂಬೆರಸದಲ್ಲಿರುವ ರಾಸಾಯನಿಕ ಗುಣವು ಸಿಂಕ್ ಅನ್ನು ದುರ್ವಾಸನೆಯಿಂದ ದೂರ ಮಾಡಿ ಪಳ ಪಳ ಹೊಳೆಯುವಂತೆ ಮಾಡುತ್ತದೆ.(Shutterstock )
(8 / 11)
ಸೊಪ್ಪು ಹಾಳಾಗದಂತಿರುವ ಹೀಗೆ ಮಾಡಿ: ಕೊತ್ತಂಬರಿ ಸೊಪ್ಪು, ಪಾಲಾಕ್‌ನಂತಹ ಸೊಪ್ಪು ಹಾಳಾಗದಂತೆ ಇರಿಸಲು, ಮೊದಲು ಅವುಗಳನ್ನು ಕತ್ತರಿಸಿ ಐಸ್ ಕ್ಯೂ ಟ್ರೇನಲ್ಲಿ ಹಾಕಿ. ಅದರ ಮೇಲೆ ಆಲಿವ್ ಎಣ್ಣೆ ಸುರಿಯಿರಿ. ನಂತರ ಫ್ರಿಜ್‌ನಲ್ಲಿ ಇಡಿ. ಇದರಿಂದ ಸೊಪ್ಪು ತಾಜಾವಾಗಿ ಇರುವುದು ಮಾತ್ರವಲ್ಲ, ಅಡುಗೆಯ ಘಮವೂ ಹೆಚ್ಚುತ್ತದೆ. (Shutterstock )
(9 / 11)
ಗಾಜಿನ ಜಾರ್ ಓಪನರ್ ಆಗಿ ರಬ್ಬರ್ ಬ್ಯಾಂಡ್: ಗಾಜಿನ ಜಾರ್‌ನ ಮುಚ್ಚಳ ತೆರೆಯಲು ಕಷ್ಟ ಪಡುತ್ತೀರಾ, ಹಾಗಾದರೆ ಮುಚ್ಚಳದ ಸುತ್ತಲೂ ರಬ್ಬರ್ ಬ್ಯಾಂಡ್ ಸುತ್ತಿಡಿ. ಇದರಿಂದ ಮುಂದಿನ ಬಾರಿ ನೀವು ಸುಲಭವಾಗಿ ಮುಚ್ಚಳ ತೆರೆಯಲು ಸಾಧ್ಯವಾಗುತ್ತದೆ. ಇದು ನಿಮ್ಮ ಸಮಯವನ್ನೂ ಉಳಿಸುತ್ತದೆ. (Shutterstock )
(10 / 11)
ಸ್ನೀಕರ್ ಶೂ ಕ್ಲೀನಿಂಗ್‌ಗೆ ಟೂತ್‌ಪೇಸ್ಟ್: ನಿಮ್ಮ ನೆಚ್ಚಿನ ಸ್ನೀಕರ್ ಶೂ ಸ್ವಚ್ಛ ಮಾಡಲು ದಾರಿ ಹುಡುಕುತ್ತಿದ್ದರೆ, ಟೂತ್‌ಪೇಸ್ಟ್ ನಿಮಗೆ ಸಹಾಯ ಮಾಡುತ್ತೆ. ಟೂತ್‌ಪೇಸ್ಟ್ ಅನ್ನು ಶೂಗೆ ಹಚ್ಚಿ ಬ್ರಷ್ ಅಥವಾ ಬಟ್ಟೆಯಂದ ಉಜ್ಜಿ. ನಂತರ ತಣ್ಣೀರಿನ ಒದ್ದೆ ಬಟ್ಟೆಯಿಂದ ಒರೆಸಿ. ಇದರಿಂದ ನಿಮ್ಮ ಶೂ ಪಳಪಳ ಹೊಳೆಯುವುದರಲ್ಲಿ ಅನುಮಾನವಿಲ್ಲ. (Shutterstock )
ಇತರ ಗ್ಯಾಲರಿಗಳು