Tv Screen Cleaning: ಟಿವಿ ಸ್ಕ್ರೀನ್ ಒರೆಸುವ ಮುನ್ನ ಮರೆಯದೇ ಗಮನಿಸಬೇಕಾದ 6 ಅಂಶಗಳಿವು
- TV Screen Cleaning Tips: ಮನೆಯಲ್ಲಿನ ಟಿವಿ ಸ್ಕ್ರೀನ್ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಧೂಳಿ ಕಣದಿಂದ ಸ್ಕ್ರೀನ್ ಹಾಳಾಗಬಹುದು. ಆದರೆ ಟಿವಿ ಸ್ಕ್ರೀನ್ ಸ್ವಚ್ಛ ಮಾಡುವ ಮುನ್ನ ಕೆಲವು ಅಂಶಗಳನ್ನು ಗಮನಿಸಲೇಬೇಕು.
- TV Screen Cleaning Tips: ಮನೆಯಲ್ಲಿನ ಟಿವಿ ಸ್ಕ್ರೀನ್ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಧೂಳಿ ಕಣದಿಂದ ಸ್ಕ್ರೀನ್ ಹಾಳಾಗಬಹುದು. ಆದರೆ ಟಿವಿ ಸ್ಕ್ರೀನ್ ಸ್ವಚ್ಛ ಮಾಡುವ ಮುನ್ನ ಕೆಲವು ಅಂಶಗಳನ್ನು ಗಮನಿಸಲೇಬೇಕು.
(1 / 7)
ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ವಾಲ್ ಮೌಂಟೆಡ್ ಎಲ್‌ಇಡಿ ಟಿವಿ ಇರುವುದು ಸಹಜ. ಈ ಅತ್ಯಾಧುನಿಕ ಟಿವಿಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಎಲ್ಇಡಿ ಟಿವಿ ಸ್ಕ್ರೀನ್ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಆದರೆ ಸ್ವಚ್ಛ ಮಾಡಲು ಮುನ್ನ ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು.
(2 / 7)
ಟಿವಿ ಸ್ವಚ್ಛ ಮಾಡಲು ಆರಂಭಿಸುವ ಮುನ್ನ ಟಿವಿಗೆ ಕನೆಕ್ಟ್ ಇರುವ ಎಲ್ಲಾ ಸ್ವಿಚ್‌ಗಳನ್ನು ಆಫ್ ಮಾಡಬೇಕು. ಫ್ಲಗ್ ಕಿತ್ತು ಇಡುವುದು ಉತ್ತಮ ಅಭ್ಯಾಸ. ಇದರಿಂದ ವಿದ್ಯುತ್ ಅಪಾಯಗಳನ್ನು ತಪ್ಪಿಸಬಹುದು.
(3 / 7)
ಎಲ್‌ಸಿಡಿ, ಎಲ್‌ಇಡಿ ಟಿವಿ ಸ್ಕ್ರೀನ್‌ಗಳ ಮೇಲಿನ ಸಣ್ಣ ಧೂಳಿನ ಕಿಡಿಯು ಟಿವಿ ಪರದೆ ಸ್ಕ್ರ್ಯಾಚ್ ಉಂಟಾಗಲು ಕಾರಣವಾಗಬಹುದು. ಹಾಗಾಗಿ ಎಲ್‌ಇಡಿ, ಒಎಲ್ಇಡಿ ಮತ್ತು ಪ್ಲಾಸ್ಮಾ ಟಿವಿಗಳ ಪರದೆಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸುವುದು ಸೂಕ್ತ. (Getty images)
(4 / 7)
ಟಿ.ವಿ ಪರದೆಯ ಮೂಲೆ ಹಾಗೂ ಅಂಚುಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಅವಶ್ಯ. ಆದರೆ ಈ ಜಾಗಗಳನ್ನು ಗಟ್ಟಿಯಾಗಿ ಪ್ರೆಸ್ ಮಾಡಿ ಒರೆಸಬಾರದು ಎಂಬುದು ನೆನಪಿರಲಿ.(Getty Images)
(5 / 7)
ಕೆಲವರು ಟಿವಿ ಪರದೆಯನ್ನು ಸ್ವಚ್ಛಗೊಳಿಸಲು ರಾಸಾಯನಿಕ ಸ್ಪ್ರೇ ಬಳಸುತ್ತಾರೆ. ಆದರೆ ಇದರ ಬಳಕೆಗೂ ಮುನ್ನ ಗುಣಮಟ್ಟ ಪರಿಶೀಲಿಸಿ. ಖರೀದಿಗೂ ಮುನ್ನ ಎಚ್ಚರ ವಹಿಸಿ. ಅದನ್ನು ನೇರವಾಗಿ ಪರದೆಗೆ ಸಿಂಪಡಿಸಬೇಡಿ. ಒರೆಸುವ ಬಟ್ಟೆಗೆ ಸಿಂಪಡಿಸಿ ನಂತರ ಟಿವಿ ಪರದೆಯನ್ನು ಒರೆಸಿ.(Getty images)
(6 / 7)
ಸ್ಪ್ರೇಯಿಂದ ಒರೆಸುವ ಮೊದಲು ಪೇಪರ್ ಅಥವಾ ಟಿಶ್ಯೂ ಸಹಾಯದಿಂದ ಧೂಳು ಒರೆಸಿಕೊಳ್ಳಿ. ಟಿವಿ ಸ್ಕ್ರೀನ್ ಜೊತೆಗೆ ಸ್ಪೀಕರ್‌ಗಳು ಹಾಗೂ ಪೋರ್ಟ್‌ಗಳ ಧೂಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.(Getty images)
ಇತರ ಗ್ಯಾಲರಿಗಳು