Banana Storage Tips: ಬಾಳೆಹಣ್ಣು ಕೊಳೆಯದೆ, ಸಿಪ್ಪೆ ಕಪ್ಪಾಗದೆ ತುಂಬಾ ದಿನ ಫ್ರೆಶ್‌ ಆಗಿ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Banana Storage Tips: ಬಾಳೆಹಣ್ಣು ಕೊಳೆಯದೆ, ಸಿಪ್ಪೆ ಕಪ್ಪಾಗದೆ ತುಂಬಾ ದಿನ ಫ್ರೆಶ್‌ ಆಗಿ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

Banana Storage Tips: ಬಾಳೆಹಣ್ಣು ಕೊಳೆಯದೆ, ಸಿಪ್ಪೆ ಕಪ್ಪಾಗದೆ ತುಂಬಾ ದಿನ ಫ್ರೆಶ್‌ ಆಗಿ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಬಾಳೆಹಣ್ಣು ತಿನ್ನುವುದು ಹಲವರಿಗೆ ಇಷ್ಟವಾದರೂ ಕೂಡ ಅದನ್ನು ತಂದು ಮನೆಯಲ್ಲಿ ಇಟ್ಟ ಎರಡ್ಮೂರು ದಿನಕ್ಕೆ ಸಿಪ್ಪೆ ಕಪ್ಪಾಗಲು ಆರಂಭಿಸುತ್ತದೆ. ಇಲ್ಲದೇ ಇದ್ದರೆ ಕೊಳೆಯಲು ಆರಂಭವಾಗುತ್ತದೆ. ಹಾಗಾದರೆ ಬಾಳೆಹಣ್ಣು ಕೊಳೆಯದಂತೆ ತುಂಬಾ ದಿನ ಫ್ರೆಶ್‌ ಆಗಿ ಇರಿಸಲು ಏನು ಮಾಡಬೇಕು? ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌.

ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಾರಿನಾಂಶ, ಕಾರ್ಬೋಹೈಡ್ರೇಟ್‌, ಪ್ರೊಟೀನ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಅಂಶಗಳು ಇದರಲ್ಲಿ ಹೇರಳವಾಗಿದೆ. ಮಲಬದ್ಧತೆ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪ್ರತಿದಿನ ಬಾಳೆಹಣ್ಣು ತಿನ್ನುವುದೇ ಪರಿಹಾರ. 
icon

(1 / 7)

ಆದರೆ ಮಾರುಕಟ್ಟೆಯಿಂದ ಬಾಳೆಹಣ್ಣು ತಂದು ಮನೆಯಲ್ಲಿ ಇರಿಸಿದರೆ ಬೇಗನೆ ಹಾಳಾಗುತ್ತದೆ. ಹೆಚ್ಚೆಂದರೆ ನಾಲ್ಕು ದಿನ ಮೇಲೆ ಬಾಳೆಹಣ್ಣು ಉಳಿಯುವುದು ಕಷ್ಟ. ನಿಧಾನಕ್ಕೆ ಕಪ್ಪು ಬಣ್ಣಕ್ಕೆ ತಿರುಗಲು ಆರಂಭಿಸಿ, ಕೊಳೆಯುತ್ತದೆ. ಹಾಗಾದರೆ ಇದನ್ನು ತಪ್ಪಿಸಲು ಏನು ಮಾಡಬೇಕು? ಇದಕ್ಕೇನು ಪರಿಹಾರವೇನು? 
icon

(2 / 7)

ಬಾಳೆಹಣ್ಣಿನ ಚಿಪ್ಪಿನ ಸುತ್ತಲೂ ಪ್ಲಾಸ್ಟಿಕ್ ಅಥವಾ ಸೆಲ್ಲೋ ಟೇಪ್‌ನಿಂದ ಸುತ್ತಿ ಇಡಬೇಕು. ಹೀಗೆ ಮಾಡುವುದರಿಂದ ಬಾಳೆಹಣ್ಣು ದೀರ್ಘಕಾಲ ಕೆಡುವುದಿಲ್ಲ. 
icon

(3 / 7)

ಬಾಳೆಹಣ್ಣುಗಳು ಹಾಳಾಗುವುದನ್ನು ತಡೆಯಲು ಮನೆಯಲ್ಲಿ ಹ್ಯಾಂಗರ್‌ಗಳಿಗೆ ನೇತು ಹಾಕಬಹುದು. ಬೇರೆ ವಸ್ತುಗಳ ತಾಕದಂತೆ ಬಾಳೆಹಣ್ಣನ್ನು ಪ್ರತ್ಯೇಕವಾಗಿ ನೇತುಹಾಕುವುದರಿಂದ ಅವು ಬಹಳ ದಿನ ಕೆಡದಂತೆ ಇರುತ್ತವೆ. 
icon

(4 / 7)

ಬಾಳೆಹಣ್ಣುಗಳು ಹಾಳಾಗುವುದನ್ನು ತಡೆಯಲು ಪ್ರತಿ ಬಾಳೆಹಣ್ಣನ್ನು ಪ್ರತ್ಯೇಕವಾಗಿ ಇಡಬಹುದು. ಇದರಿಂದ ಕೊಳೆಯುವ ಸಾಧ್ಯತೆ ಕಡಿಮೆ. 
icon

(5 / 7)

ಸಾಧ್ಯವಾದಷ್ಟು ಕಾಯಿಯಂತಿರುವ ಬಾಳೆಹಣ್ಣನ್ನೇ ಆರಿಸಿಕೊಳ್ಳಿ. ಇದನ್ನು ತುಂಬಾ ದಿನಗಳವರೆಗೆ ಇರಿಸಿಕೊಳ್ಳಬಹುದು. 
icon

(6 / 7)

ಹಣ್ಣಾದ ನಂತರ ಫ್ರಿಜ್‌ನಲ್ಲಿ ಇಡುವುದರಿಂದ ಬಾಳೆಹಣ್ಣನ್ನು ತುಂಬಾ ದಿನ ಕಡೆದಂತೆ ಇಡಬಹುದು. ಆದರೆ ಕಾಯಿ ಅಥವಾ ಅರ್ಧ ಹಣ್ಣಾಗಿರುವ ಬಾಳೆಹಣ್ಣನ್ನು ಯಾವುದೇ ಕಾರಣಕ್ಕೂ ಫ್ರಿಜ್‌ನಲ್ಲಿ ಇಡಬೇಡಿ. ಇದರಿಂದ ಅದು ಹಣ್ಣಾಗದೇ ಹಾಳಾಗಬಹುದು. 
icon

(7 / 7)

ಇತರ ಗ್ಯಾಲರಿಗಳು