Mental Issues: ಹಾರ್ಮೋನ್ ಬದಲಾವಣೆ ಕೂಡಾ ಖಿನ್ನತೆಗೆ ಕಾರಣ ಇರಬಹುದು... ಇದರಿಂದ ಪಾರಾಗುವುದು ಹೇಗೆ?
ಮನುಷ್ಯನ ಮೂಡ್ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಸಂದರ್ಭಕ್ಕೆ, ಪರಿಸ್ಥಿತಿಗೆ ತಕ್ಕಂತೆ ಎಲ್ಲರ ಮೂಡ್ ಬದಲಾಗುತ್ತದೆ. ಆದರೆ ಕೆಲವರು ಮಾತ್ರ ಯಾವಾಗಲೂ ಒಂದೇ ರೀತಿ ಇರುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಕೋಪ ಮಾಡಿಕೊಳ್ಳುವುದು, ಎದುರಿದ್ದವರ ಮೇಲೆ ಅರಚಾಡುವುದು, ಅಳುವುದು ಮಾಡುತ್ತಾರೆ. ಆದರೆ ಇದಕ್ಕೆಲ್ಲಾ ಹಾರ್ಮೋನ್ ಕೂಡಾ ಕಾರಣವಾಗಿರಬಹುದು.
(1 / 6)
ವಿವಿಧ ಹಾರ್ಮೋನುಗಳು ಖಿನ್ನತೆ, ಕೋಪ ಇತ್ಯಾದಿ ಭಾವನೆಗಳನ್ನು ನಿಯಂತ್ರಿಸುತ್ತವೆ. ನಮ್ಮ ದೇಹದಲ್ಲಿ ಸಿರೊಟೋನಿನ್ ಎಂಬ ಹಾರ್ಮೋನ್ ಇದೆ. ಸ್ರವಿಸಿದರೆ ಮಾತ್ರ ಮನಸ್ಸು ಚೆನ್ನಾಗಿರುತ್ತದೆ. ಅದರ ಸ್ರವಿಸುವಿಕೆಯನ್ನು ಹೇಗೆ ಸರಿಪಡಿಸುವುದು? ಇಲ್ಲಿ ಕೆಲವು ಸರಳ ಮಾರ್ಗಗಳಿವೆ. (Freepik)
(2 / 6)
ಆರೋಗ್ಯಕರ ಆಹಾರ: ತಿನ್ನುವುದು ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಇದು ಆರೋಗ್ಯಕರವಾಗಿಲ್ಲದಿದ್ದರೆ, ದೇಹದ ಹಾರ್ಮೋನ್ ಸಮತೋಲನವು ಕಳೆದುಹೋಗುತ್ತದೆ. ಆದ್ದರಿಂದ ಎಣ್ಣೆ, ಮಸಾಲೆ ಸೇರಿದಂತೆ ಅನಾರೋಗ್ಯಕರ ಆಹಾರಗಳನ್ನು ತ್ಯಜಿಸಿ, ಆರೋಗ್ಯಕರ ಆಹಾರದತ್ತ ಗಮನಹರಿಸಿ. ( Freepik)
(3 / 6)
ವ್ಯಾಯಾಮ: ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ. ನಿಮ್ಮ ದೇಹ ಎಷ್ಟು ಚೆನ್ನಾಗಿರುವುದೋ ಮನಸ್ಸು ಕೂಡಾ ಅಷ್ಟು ಖುಷಿ ಆಗಿರುತ್ತದೆ. ಒಬ್ಬರೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ತರಬೇತಿ ಕೇಂದ್ರಕ್ಕೆ ಸೇರಿ. ಇದು ನಿಮ್ಮ ಮನಸ್ಸನ್ನು ಪ್ರಶಾಂತವಾಗಿರಿಸುವಲ್ಲಿ ಸಹಾಯ ಮಾಡುತ್ತದೆ. ( Freepik)
(4 / 6)
ಸೂರ್ಯನ ಬೆಳಕು ಪಡೆಯಿರಿ: ಅನೇಕ ಕಾರಣಗಳಿಗಾಗಿ ಸೂರ್ಯನ ಬೆಳಕು ದೇಹಕ್ಕೆ ಅವಶ್ಯಕವಾಗಿದೆ. ಕೆಲವರು ಸೂರ್ಯನ ಬೆಳಕಿಗೆ ಬರುವುದೇ ಇಲ್ಲ. ಆದರೆ ಸ್ವಲ್ಪ ಸಮಯವಾದರೂ ನೀವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಆದರೆ ಮಧ್ಯಾಹ್ನದ ಬಿಸಿಲಿಗೆ ಬದಲಿಗೆ ಬೆಳಗಿನ ಎಳೆಬಿಸಿಲಿಗೆ ನಿಯಮಿತವಾಗಿ ಒಡ್ಡಿಕೊಳ್ಳುವುದರಿಂದ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ, ಸೂರ್ಯನ ಬೆಳಕು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ನಿಮ್ಮ ದೇಹ ಸೇರುತ್ತದೆ. ( Freepik)
(5 / 6)
ಒತ್ತಡವನ್ನು ಕಡಿಮೆ ಮಾಡಿ: ಅತಿಯಾದ ಒತ್ತಡವು ದೇಹಕ್ಕೆ ಒಳ್ಳೆಯದಲ್ಲ. ಒತ್ತಡದಿಂದಾಗಿ ಸಿರೊಟೋನಿನ್ ಹಾರ್ಮೋನ್ ಸ್ರವಿಸುವಿಕೆಯು ಕಡಿಮೆಯಾಗುತ್ತದೆ. ಹಾಗಾಗಿ ಮನಸ್ಸು ಚೆನ್ನಾಗಿರಲು ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಯೋಗ, ಪ್ರಾಣಾಯಾಮ ಮಾಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯಿರಿ. ( Freepik)
(6 / 6)
ಮಸಾಜ್ ಥೆರಪಿ: ಆಗ್ಗಾಗ್ಗೆ ಮಸಾಜ್ ಥೆರಪಿ ಮಾಡಿಸುವುದರಿಂದ ನೀವು ರಿಲಾಕ್ಸ್ ಆಗುತ್ತೀರಿ. ಇದು ದೇಹದ ನೋವನ್ನು ಕಡಿಮೆ ಮಾಡುತ್ತದೆ. ಮನಸ್ಸೂ ಕೂಡಾ ಚೆನ್ನಾಗಿರುತ್ತದೆ. ತಜ್ಞರ ಪ್ರಕಾರ, ನಿಯಮಿತ ಮಸಾಜ್ ಕಾರ್ಟಿಸೋಲ್ ಹಾರ್ಮೋನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಮನಸ್ಸು ಚೆನ್ನಾಗಿರುತ್ತದೆ. ನೀವು ಉಲ್ಲಾಸದಿಂದ ಇರುತ್ತೀರಿ. ( Freepik)
ಇತರ ಗ್ಯಾಲರಿಗಳು