ಬಾಬಾ ವಂಗಾ ಭವಿಷ್ಯ: ಈ 5 ರಾಶಿಯವರು 2025 ರಲ್ಲಿ ಶ್ರೀಮಂತರಾಗುತ್ತಾರೆ; ಹೊಸ ವರ್ಷದಲ್ಲಿ ಖುಲಾಯಿಸಲಿದೆ ಅದೃಷ್ಟ
- ಬಾಬಾ ವಂಗಾ ಭವಿಷ್ಯ: 2025 ಸ್ವಾಗತಿಸಲು ಮೂರೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಖುಷಿಯನ್ನು ಹಂಚಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ರಾಶಿ ಭವಿಷ್ಯವನ್ನು ನೋಡುವುದು ಸಹಜ. 5 ರಾಶಿಯವರಿಗೆ ಉತ್ತಮ ಅದೃಷ್ಟವಿದೆ ಎಂದು ಬಾಬಾ ವಂಗಾ ಭವಿಷ್ಯ ವಾಣಿಯಾಗಿದೆ. ಇವರ ಪ್ರಕಾರ, ಯಾವ ರಾಶಿಚಕ್ರ ಚಿಹ್ನೆಗಳು ಅದೃಷ್ಟದ ಪಟ್ಟಿಯಲ್ಲಿವೆ ನೋಡಿ?
- ಬಾಬಾ ವಂಗಾ ಭವಿಷ್ಯ: 2025 ಸ್ವಾಗತಿಸಲು ಮೂರೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಖುಷಿಯನ್ನು ಹಂಚಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ರಾಶಿ ಭವಿಷ್ಯವನ್ನು ನೋಡುವುದು ಸಹಜ. 5 ರಾಶಿಯವರಿಗೆ ಉತ್ತಮ ಅದೃಷ್ಟವಿದೆ ಎಂದು ಬಾಬಾ ವಂಗಾ ಭವಿಷ್ಯ ವಾಣಿಯಾಗಿದೆ. ಇವರ ಪ್ರಕಾರ, ಯಾವ ರಾಶಿಚಕ್ರ ಚಿಹ್ನೆಗಳು ಅದೃಷ್ಟದ ಪಟ್ಟಿಯಲ್ಲಿವೆ ನೋಡಿ?
(1 / 8)
2025 ರ ಹೊಸ ವರ್ಷದಲ್ಲಿ 5 ರಾಶಿಚಕ್ರ ಚಿಹ್ನೆಗಳು ಭಾರಿ ಅದೃಷ್ಟವನ್ನು ಹೊಂದಲಿವೆ. ಈ 5 ರಾಶಿಯವರಿಗೆ ಸಂಬಂಧಿಸಿದಂತೆ ಬಾಬಾ ವಂಗಾ ಅವರ ಭವಿಷ್ಯ ವಾಣಿಯನ್ನು ಇಲ್ಲಿ ಹೇಳಲಾಗಿದೆ. ಅದೃಷ್ಟದ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ.
(2 / 8)
ಕಟಕ ರಾಶಿ: ಈ ರಾಶಿಯವರು 2025ರ ಜನವರಿಯಲ್ಲಿ ಎಲ್ಲಾ ಹೊಸ ಮತ್ತು ಅನಿರೀಕ್ಷಿತ ಅವಕಾಶಗಳನ್ನು ಪಡೆಯುತ್ತಾರೆ. ದೀರ್ಘಕಾಲದಿಂದ ಮಾಡಿದ ಪ್ರಯತ್ನದ ಫಲಿತಾಂಶವನ್ನು ಪಡೆಯುವ ಸಮಯ ಇದಾಗಿರುತ್ತೆ. ಕಟಕ ರಾಶಿಯವರು ಹೊಸ ವ್ಯವಹಾರವನ್ನು ಪ್ರಾರಂಭಿಸಿ ಅದರಲ್ಲಿ ಸಾಕಷ್ಟು ಲಾಭ ಪಡೆಯುತ್ತಾರೆ.
(3 / 8)
ಮೇಷ ರಾಶಿ: ನೀವು ಮೇಷ ರಾಶಿಯವರಾಗಿದ್ದರೆ, ಬಾಬಾ ವಂಗಾ ಅವರ ಭವಿಷ್ಯ ವಾಣಿ ಪ್ರಕಾರ, 2025 ವರ್ಷವು ನಿಮ್ಮ ಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ. ಅಪಾರ ಸಂಪತ್ತನ್ನು ಹೊಂದುತ್ತೀರಿ. ನಿಮ್ಮ ಕನಸು ನನಸಾಗಲಿದೆ. ಆರ್ಥಿಕವಾಗಿ, ಉತ್ತಮ ಪ್ರಗತಿಯನ್ನು ಸಾಧಿಸುತ್ತೀರಿ.
(4 / 8)
ವೃಷಭ ರಾಶಿ: ಈ ರಾಶಿಚಕ್ರದವರು ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ. ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಕಠಿಣ ಪರಿಶ್ರಮವು 2025 ರಲ್ಲಿ ಫಲ ನೀಡುತ್ತದೆ. ಹೊಸ ವರ್ಷದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತೀರಿ.
(5 / 8)
ಮಿಥುನ ರಾಶಿ: ಈ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಮುಟ್ಟುತ್ತಾರೆ. 2025 ರಲ್ಲಿ ನಿಮ್ಮೊಳಗೆ ಇರುವ ಎಲ್ಲಾ ಯೋಜನೆಗಳು ಹೊಸ ಆಯಾಮವನ್ನು ಪಡೆಯುತ್ತವೆ, ಬೆಳಕಿಗೆ ಬಂದು ಫಲಗಳನ್ನು ಕೊಡುತ್ತವೆ. ಹಣಕಾಸಿನ ತೊಂದರೆ ಇರುವುದಿಲ್ಲ.
(6 / 8)
ಕುಂಭ ರಾಶಿ: ಈ ರಾಶಿಚಕ್ರದ ಜನರು ವೃತ್ತಿ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಮುಟ್ಟುತ್ತಾರೆ. 2025 ರಲ್ಲಿ, ನಿಮ್ಮೊಳಗೆ ಇರುವ ಎಲ್ಲಾ ಸಾಧ್ಯತೆಗಳು ಹೊಸ ಆಯಾಮವನ್ನು ಪಡೆಯುತ್ತವೆ, ಅದು ಬೆಳಕಿಗೆ ಬರುತ್ತದೆ.
(7 / 8)
ಬಾಬಾ ವಂಗಾ, 1911 ರಲ್ಲಿ ಬಲ್ಗೇರಿಯಾದ ಪಾಂಡೆವಾ ಡಿಮಿಟ್ರೋವಾದಲ್ಲಿ ಜನಿಸಿದರು. ಈಕೆಯ ಮೊದಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ. 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದಿಂದಾಗಿ ದೃಷ್ಟಿ ಕಳೆದುಕೊಂಡರು. 1996ರಲ್ಲಿ ವಂಗಾ ನಿಧನರಾದರೂ 5079ನೇ ಇಸವಿವರೆಗೆ ಏನಾಗಲಿದೆ ಎಂಬುದರ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಇತರ ಗ್ಯಾಲರಿಗಳು