ಆಷಾಢ ಅಮಾವಾಸ್ಯೆ 2024; ಪೂರ್ವಜರ ಆಶೀರ್ವಾದ ಪಡೆಯಲು ಅಮಾವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿ-horoscope follow these instructions to get blessings of ancestors astrological prediction in kannada rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಷಾಢ ಅಮಾವಾಸ್ಯೆ 2024; ಪೂರ್ವಜರ ಆಶೀರ್ವಾದ ಪಡೆಯಲು ಅಮಾವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿ

ಆಷಾಢ ಅಮಾವಾಸ್ಯೆ 2024; ಪೂರ್ವಜರ ಆಶೀರ್ವಾದ ಪಡೆಯಲು ಅಮಾವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿ

ಅಮವಾಸ್ಯೆ, ಹುಣ್ಣಿಮೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಾಡುವ ದಾನಕ್ಕೆ ಬಹಳ ಮಹತ್ವವಿದೆ. ಅಮಾವಾಸ್ಯೆ ದಿನ ಕೆಲವರು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಪೂರ್ವಜರಿಗೆ ನೈವೇದ್ಯ ಮಾಡುತ್ತಾರೆ. ಪೂರ್ವಜರನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಮಾಡಿದ ಅರ್ಪಣೆಗಳು ಪೂರ್ವಜರ ಆತ್ಮಗಳನ್ನು ಸಮಾಧಾನಪಡಿಸುತ್ತವೆ ಎಂದು ಹೇಳಲಾಗುತ್ತದೆ.

ಆಷಾಢ ಮಾಸ ನಡೆಯುತ್ತಿದೆ. ಈ ತಿಂಗಳು ವಿಷ್ಣುವಿಗೆ ಸಮರ್ಪಿತವಾಗಿದೆ. ಆಷಾಢ ಮಾಸದಲ್ಲಿ ಅನೇಕ ಉಪವಾಸಗಳು ಮತ್ತು ಹಬ್ಬಗಳಿವೆ. ಆಷಾಢವು ಹಿಂದೂ ಪಂಚಾಂಗದ ಪ್ರಕಾರ ನಾಲ್ಕನೇ ತಿಂಗಳು. ಪೂರ್ವಜರನ್ನು ಮೆಚ್ಚಿಸಲು ಆಷಾಢ ಮಾಸವನ್ನು ವಿಶೇಷವೆಂದು ಪರಿಗಣಿಸಲಾಗಿದೆ.
icon

(1 / 7)

ಆಷಾಢ ಮಾಸದ ಅಮವಾಸ್ಯೆಯ ತಿಥಿ ಕೂಡ ಬಹಳ ಮುಖ್ಯ. ಪೂರ್ವಜರ ಆಶೀರ್ವಾದ ಪಡೆಯಲು ಈ ದಿನ ಅನೇಕ ಕೆಲಸಗಳನ್ನು ಮಾಡಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಮುಕ್ತರಾಗಬಹುದು. ಹಾಗೂ ಜೀವನದಲ್ಲಿ ಸುಖ ಸಂತೋಷ ಗಳಿಸಬಹುದು. ಆಷಾಢ ಅಮವಾಸ್ಯೆಯನ್ನು ಯಾವ ದಿನ ಆಚರಿಸಲಾಗುತ್ತದೆ ನೋಡೋಣ. 
icon

(2 / 7)

ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ತಿಥಿ ಜುಲೈ 5 ರಂದು ಬೆಳಗ್ಗೆ 4:57 ಕ್ಕೆ ಪ್ರಾರಂಭವಾಗುತ್ತದೆ. ಈ ತಿಥಿಯು ಜುಲೈ 6 ರಂದು ಬೆಳಗ್ಗೆ 04:26 ಕ್ಕೆ ಕೊನೆಗೊಳ್ಳುತ್ತದೆ. ಅಂತಹ ಸನ್ನಿವೇಶದಲ್ಲಿ, ಆಷಾಢ ಅಮವಾಸ್ಯೆಯನ್ನು ಜುಲೈ 5, 2024 ರಂದು ಆಚರಿಸಲಾಗುತ್ತದೆ.
icon

(3 / 7)

ಪೂರ್ವಿಕರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರತಿ ತಿಂಗಳ ಅಮವಾಸ್ಯೆ ತಿಥಿಯಂದು ದಾನ, ನೈವೇದ್ಯ ಅರ್ಪಿಸುವುದು ಶ್ರೇಯಸ್ಕರ. ಅಂತಹ ಸಂದರ್ಭದಲ್ಲಿ ಈ ದಿನ ಈ ಕೆಲಸವನ್ನು ಮಾಡಬೇಕು.
icon

(4 / 7)

ಪೂರ್ವಜರಿಗೆ ತರ್ಪಣ ನೀಡುವ ವಿಧಾನ: ಪೂರ್ವಜರಿಗೆ ತರ್ಪಣ ನೀಡಲು ಸೂರ್ಯೋದಯವೇ ಸೂಕ್ತ ಸಮಯ. ಸೂರ್ಯೋದಯದಲ್ಲಿ ಸ್ನಾನ ಮಾಡಿ ಧ್ಯಾನ ಮಾಡಿದ ನಂತರ ಪಿತೃಗಳಿಗೆ ನೈವೇದ್ಯವನ್ನು ಅರ್ಪಿಸಬೇಕು. ಬಿಳಿ ಹೂವುಗಳು, ಕಪ್ಪು ಎಳ್ಳು ಬೀಜಗಳು ಮತ್ತು ಕುಶವನ್ನು ಬಳಸಿ ಪಿತೃಗಳಿಗೆ ತರ್ಪಣವನ್ನು ಅರ್ಪಿಸಬೇಕು. ಪೂರ್ವಜರ ತರ್ಪಣವನ್ನು ದಕ್ಷಿಣಾಭಿಮುಖವಾಗಿ ಮಾಡಬೇಕು. ತರ್ಪಣ ಸಮಯದಲ್ಲಿ ಪೂರ್ವಜರನ್ನು ಧ್ಯಾನಿಸಬೇಕು.
icon

(5 / 7)

ಅಮವಾಸ್ಯೆ ತಿಥಿಯಂದು ಕಾಗೆ, ನಾಯಿ ಅಥವಾ ಹಸುಗಳಿಗೆ ಆಹಾರ ನೀಡಬೇಕು ಎಂದು ಹೇಳಲಾಗುತ್ತದೆ. ಆಷಾಢ ಅಮಾವಾಸ್ಯೆಯಂದು ಅರಳಿ ಮರ, ಆಲದ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಪೂರ್ವಜರ ಆಶೀರ್ವಾದ ದೊರೆಯುತ್ತದೆ. 
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು