ಯಾರ ತಂಟೆಗೂ ಹೋಗಲ್ಲ, ಗಲಾಟೆಯಿಂದ ದೂರ ಉಳಿಯುತ್ತಾರೆ; ಕಟಕ ಸೇರಿ ಈ 5 ರಾಶಿಯವರು ತುಂಬಾ ಸೂಕ್ಷ್ಮ
- ಗ್ರಹಗಳ ಸಂಚಾರದ ಆಧಾರದ ಮೇಲೆ ಪ್ರತಿಯೊಂದು ರಾಶಿಯವರಿಗೂ ಉತ್ತಮ ಫಲಗಳಿರುತ್ತವೆ. ಆದರೆ ಕೆಲವು ರಾಶಿಯವರು ತುಂಬಾ ಸೂಕ್ಷ್ಮ ಇರುತ್ತಾರೆ. ಸಣ್ಣ ಗಲಾಟೆಯಾದರೂ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
- ಗ್ರಹಗಳ ಸಂಚಾರದ ಆಧಾರದ ಮೇಲೆ ಪ್ರತಿಯೊಂದು ರಾಶಿಯವರಿಗೂ ಉತ್ತಮ ಫಲಗಳಿರುತ್ತವೆ. ಆದರೆ ಕೆಲವು ರಾಶಿಯವರು ತುಂಬಾ ಸೂಕ್ಷ್ಮ ಇರುತ್ತಾರೆ. ಸಣ್ಣ ಗಲಾಟೆಯಾದರೂ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
(1 / 7)
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಅತ್ಯಂತ ಗ್ರಹಿಕೆ ಮತ್ತು ತುಂಬಾ ಸೂಕ್ಷ್ಮವಾಗಿರುತ್ತಾರೆ. ತಮಗೆ ಇಷ್ಟವಾದವರನ್ನು ಯಾವುದೇ ಕಾರಣಕ್ಕೂ ನೋಯಿಸಲು ಇಷ್ಟ ಪಡುವುದಿಲ್ಲ. ಮಾತನಾಡುವಾಗ ತುಂಬಾ ಯೋಚನೆ ಮಾಡಿ ನಾಲಿಗೆ ಬಿಗಿ ಹಿಡಿದು ಮಾತನಾಡುತ್ತಾರೆ. ಉದ್ದೇಶಪೂರ್ವಕವಾಗಿ ಸಂಭವಿಸುವ ಘರ್ಷಣೆಗಳಿಂದ ಇವರು ಯಾವಾಗಲೂ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಈ ರೀತಿಯ ಸ್ವಭಾವ ಯಾವೆಲ್ಲಾ ರಾಶಿಯವರಿಗೆ ಇದೆ ಎಂಬುದನ್ನು ತಿಳಿಯೋಣ.
(2 / 7)
ಕಟಕ ರಾಶಿ: ಈ ರಾಶಿಯವರು ಪ್ರಭಾವಕ್ಕೊಳಗಾಗುವುದಿಲ್ಲ. ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ಈ ಜಗತ್ತಿನ ಕಠೋರತೆ ಮತ್ತು ಅನ್ಯಾಯಗಳನ್ನು ನಿಭಾಯಿಸುವುದು ಅಸಾಧ್ಯವೆಂದು ಆಗಾಗೆ ಅಂದುಕೊಳ್ಳುತ್ತಾರೆ. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುವುದಿಲ್ಲ. ಇವುಗಳಿಂದ ದೂರ ಉಳಿಯುತ್ತಾರೆ. ಪ್ರತಿಯೊಬ್ಬರ ಸುಧಾರಣೆಗಾಗಿ ಕೆಲಸ ಮಾಡುತ್ತಾರೆ.
(3 / 7)
ವೃಶ್ಚಿಕ ರಾಶಿ: ಈ ರಾಶಿಯವರು ಸ್ವಭಾವತಃ ಸೂಕ್ಷ್ಮ ಮನಸಿನವರು. ವಿಷಯಗಳ ಬಗ್ಗೆ ತುಂಬಾ ಆಳವಾಗಿ ಯೋಚನೆ ಮಾಡುತ್ತಾರೆ. ಯಾರನ್ನಾದರೂ ನಂಬಿದರೆ ಅವರಿಗೆ ತಮ್ಮಲ್ಲಿರುವ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಗೇಲಿ ಮಾಡುತ್ತಾರೆಂಬ ಕಾರಣಕ್ಕೆ ದೂರ ಉಳಿಯುತ್ತಾರೆ. ಜನರನ್ನು ಗೆಲ್ಲುವ ಪ್ರಯತ್ನದಲ್ಲಿ ಧೈರ್ಯಶಾಲಿಯಂತೆ ನಟಿಸಬಹುದು.
(4 / 7)
ತುಲಾ ರಾಶಿ: ಇವರು ಸಾಮಾಜಿಕ ಸಂವಹನವನ್ನು ಇಷ್ಟಪಡುತ್ತಾರೆ. ತಮ್ಮ ಸುತ್ತಲಿನ ಇತರರ ಸಂತೋಷವನ್ನು ನೋಡಲು ಬಯಸುತ್ತಾರೆ. ವ್ಯಕ್ತಿಗಳನ್ನು ಸಾಂತ್ವನಗೊಳಿಸಲು ಮುಂದಾಗುತ್ತಾರೆ. ನಕಾರಾತ್ಮಕ ಜನರನ್ನು ಸಹಿಸುವುದಿಲ್ಲ. ತಮ್ಮ ಜೀವನವನ್ನು ಹಾಳುಮಾಡಲು ಯತ್ನಿಸುವವರನ್ನು ದೂರ ಉಳಿಯಲು ಪ್ರಯತ್ನಿಸುತ್ತಾರೆ.
(5 / 7)
ಮೀನ ರಾಶಿ: ಸ್ನೇಹಿತರು ಮತ್ತು ಕುಟುಂಬದವರನ್ನು ಪ್ರಾಮಾಣಿಕವಾಗಿ ಪ್ರೀತಿಸುವವರು ಮೀನ ರಾಶಿಯವರು. ವಾಸ್ತವದೊಂದಿಗೆ ಜೀವಿಸುವವರನ್ನು ಇಷ್ಟಪಡುತ್ತಾರೆ. ಪ್ರೀತಿ ಮತ್ತು ಸಹಾನುಭೂತಿಯನ್ನು ಇತರೆ ಜನರ ಮೇಲೆ ವ್ಯಯಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಮೀನ ರಾಶಿಯವರು ತುಂಬಾ ಸೂಕ್ಷ್ಮವಾಗಿರುತ್ತಾರೆ.
(6 / 7)
ಕನ್ಯಾ ರಾಶಿ: ಕನ್ಯಾ ರಾಶಿಯವರು ಕೂಡ ಹೆಚ್ಚು ಸೂಕ್ಷ್ಮ ಮತ್ತು ಭಾವನಾತ್ಮಕವಾಗಿರುತ್ತಾರೆ. ಆದರೆ ಈ ಗುಣಲಕ್ಷಣಗಳನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ನಕಾರಾತ್ಮಕ ವಿಷಯಗಳನ್ನು ಗಮನಿಸಲು ಹೆಚ್ಚು ಒಲವು ತೋರುತ್ತಾರೆ. ಸ್ವಂತ ದೌರ್ಬಲ್ಯಗಳನ್ನು ತ್ವರಿತವಾಗಿ ನೋಡುತ್ತಾರೆ. ವ್ಯಕ್ತಿಗಳನ್ನು ತಮ್ಮೊಂದಿಗೆ ಬರಮಾಡಿಕೊಳ್ಳುವ ಮೊದಲು ವಾಸ್ತವವನ್ನು ತಿಳಿದುಕೊಳ್ಳಲು ಮುಂದಾಗುತ್ತಾರೆ. ಯಾರ ಮೇಲೆ ಹೆಚ್ಚು ವಿಶ್ವಾಸ ಇಟ್ಟಿರುತ್ತಾರೋ ಅವರಿಗೆ ತಮ್ಮ ನೈಜತೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.
ಇತರ ಗ್ಯಾಲರಿಗಳು