ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೃಷಭ ರಾಶಿಯಲ್ಲಿ ಶುಕ್ರ ಬುಧ ಸಂಯೋಗ; ಈ 3 ರಾಶಿಯವರಿಗೆ ಸಾಕೆನಿಸುವಷ್ಟು ಸಂಪತ್ತು ತರಲಿದೆ ಲಕ್ಷ್ಮೀನಾರಾಯಣ ಯೋಗ

ವೃಷಭ ರಾಶಿಯಲ್ಲಿ ಶುಕ್ರ ಬುಧ ಸಂಯೋಗ; ಈ 3 ರಾಶಿಯವರಿಗೆ ಸಾಕೆನಿಸುವಷ್ಟು ಸಂಪತ್ತು ತರಲಿದೆ ಲಕ್ಷ್ಮೀನಾರಾಯಣ ಯೋಗ

ಶುಕ್ರನು ಸದ್ಯಕ್ಕೆ ವೃಷಭ ರಾಶಿಯಲ್ಲಿದ್ದಾನೆ. ಮೇ 31 ರಂದು ಬುಧ ಅದೇ ರಾಶಿಗೆ ಪ್ರವೇಶಿಸುತ್ತಾನೆ. ಪರಿಣಾಮವಾಗಿ ಅನೇಕ ರಾಶಿಯವರು ಶುಭ ಫಲಗಳನ್ನು ಪಡೆಯಲಿದ್ದಾರೆ. ವೃಷಭ ರಾಶಿಯಲ್ಲಿ ಬುಧ ಪ್ರವೇಶದಿಂದಾಗಿ ಶುಭ ಲಕ್ಷ್ಮಿ ನಾರಾಯಣ ಯೋಗವು ರೂಪುಗೊಳ್ಳುತ್ತಿದೆ. 

ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನ ಬದಲಾವಣೆಯಿಂದ ಯೋಗಗಳು ರೂಪುಗೊಳ್ಳುತ್ತವೆ. ಪರಿಣಾಮವಾಗಿ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಕೆಲವರಿಗೆ ಸಮಸ್ಯೆ ಉಂಟಾಗಬಹುದು. ಮೇ 2024 ಕೊನೆಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗ ರೂಪುಗೊಳ್ಳುತ್ತಿದ್ದು ಇದರ ಪರಿಣಾಮ ಯಾವ ರಾಶಿಯವರು ಯಾವ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ ನೋಡೋಣ. 
icon

(1 / 6)

ಮೇ 31 ರಂದು ಶುಕ್ರ ಹಾಗೂ ಬುಧ ಎರಡೂ ಗ್ರಹಗಳು ವೃಷಭ ರಾಶಿಯಲ್ಲಿ ಸಂಯೋಜನೆಗೊಳ್ಳುತ್ತಿವೆ. ಇದರಿಂದ ರೂಪುಗೊಳ್ಳುತ್ತಿರುವ ಲಕ್ಷ್ಮೀ ನಾರಾಯಣ ಯೋಗದಿಂದ 3 ರಾಶಿಯವರಿಗೆ ಧನಲಾಭ, ವೃತ್ತಿಯಲ್ಲಿ ಪ್ರಮೋಷನ್‌ ದೊರೆಯುವ ಸಾಧ್ಯತೆ ಇದೆ. 
icon

(2 / 6)

ವೃಷಭ: ಲಕ್ಷ್ಮೀ ನಾರಾಯಣ ಯೋಗದಿಂದ ನಿಮ್ಮ ವೈಯಕ್ತಿಕ ಜೀವನ ಸುಧಾರಿಸಲಿದೆ. ವೃತ್ತಿ ಜೀವನದಲ್ಲೂ ಮಹತ್ತರ ತಿರುವುಗಳಿವೆ.  ಈ ಸಮಯದಲ್ಲಿ ನೀವು ಸಮಾಜದಲ್ಲಿ ಅನೇಕ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ಇದರ ಪರಿಣಾಮವಾಗಿ ನೀವು ಭವಿಷ್ಯದಲ್ಲಿ ಬಹಳಷ್ಟು ಅನುಕೂಲಗಳನ್ನು ಪಡೆಯುತ್ತೀರಿ. ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಇನ್ನಷ್ಟು ಬದಲಾಗಲಿದೆ. 
icon

(3 / 6)

ಸಿಂಹ: ಲಕ್ಷ್ಮೀ ನಾರಾಯಣ ರಾಜಯೋಗದ ಸಮಯದಲ್ಲಿ ಸಿಂಹ ರಾಶಿಯವರು ಒಳ್ಳೆ ಸುದ್ದಿಯನ್ನು ಕೇಳಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುತ್ತದೆ.  ಎಲ್ಲಾ ವಿಚಾರಗಳಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉದ್ಯೋಗ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.  ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬದಲಾವಣೆ ಉಂಟಾಗಲಿದೆ. ಕಾರು, ಆಸ್ತಿ ಖರೀದಿಸುವ ಆಸೆ ಈಡೇರಲಿದೆ.
icon

(4 / 6)

ಕಟಕ: ಈ ಯೋಗವು ಕಟಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಊಹಿಸದೇ ಇರುವಂಥ ಶುಭ ಸುದ್ದಿ ಕೇಳುತ್ತೀರಿ. ವಿವಿಧ ಮೂಲಗಳಿಂದ ಸಂಪತ್ತು ಹರಿದುಬರಲಿದೆ. ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡಾ ಹೆಚ್ಚಾಗುತ್ತದೆ. ಯಾವುದೇ ಕೆಲಸಲ್ಲಿಯಾದರೂ ಯಶಸ್ಸು ಗಳಿಸುತ್ತೀರಿ.
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು