ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ; ವೃಶ್ಚಿಕ ಸೇರಿ 5 ರಾಶಿಯವರಿಗೆ ವೃತ್ತಿಯಲ್ಲಿ ಸವಾಲು, ಕಷ್ಟದ ದಿನಗಳು ಹೆಚ್ಚು

ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ; ವೃಶ್ಚಿಕ ಸೇರಿ 5 ರಾಶಿಯವರಿಗೆ ವೃತ್ತಿಯಲ್ಲಿ ಸವಾಲು, ಕಷ್ಟದ ದಿನಗಳು ಹೆಚ್ಚು

  • Saturn Retrograde: ಜೂನ್ 29 ರಿಂದ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. 139 ದಿನಗಳು ಅಂದರೆ ಶನಿ ದೇವರು ನವೆಂಬರ್ 15 ರವರೆಗೆ ಅಲ್ಲಿಯೇ ಇರುತ್ತಾನೆ. ಶನಿ ದೇವರ ಈ ವಕ್ರೀ ಚಲನೆಯಿಂದ ಕೆಲವು ರಾಶಿಯವರು ತೊಂದರೆಗಳನ್ನು ಎದುರಿಸುತ್ತಾರೆ. ಆ ರಾಶಿಯವರು ಯಾರೆಂಬುದರ ವಿವರ ಇಲ್ಲಿದೆ.

ಈ ತಿಂಗಳ ಕೊನೆಯಲ್ಲಿ ಶನಿ ಹಿಮ್ಮುಖನಾಗಿ ಚಲಿಸುತ್ತಾನೆ, ಈ ಕಾರಣದಿಂದಾಗಿ ಕೆಲವು ರಾಶಿಯವರು ಜಾಗರೂಕರಾಗಿರಬೇಕು. ಇವರಲ್ಲಿ ಹಠಾತ್ ಖರ್ಚುಗಳು ಹೆಚ್ಚಾಗುತ್ತವೆ. ಆರೋಗ್ಯ, ವೃತ್ತಿ ಮತ್ತು  ಕೌಟುಂಬಿಕ ವಿಷಯಗಳಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ಶನಿಯ ಹಿಮ್ಮುಖ ಸಂಚಾರವು ಅವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
icon

(1 / 8)

ಕಟಕ ರಾಶಿ: ಶನಿಯ ಹಿಮ್ಮುಖ ಚಲನೆಯು ತುಂಬಾ ಹಾನಿಕಾರಕವಾಗಿದೆ. ಈ ರಾಶಿಯವರು ವ್ಯವಹಾರದಲ್ಲಿ ಭಾರಿ ನಷ್ಟವನ್ನು ಎದುರಿಸುವ ಸಾಧ್ಯತೆ ಇದೆ. ಹಣವನ್ನು ನೀರಿನಂತೆ ಖರ್ಚು ಮಾಡುತ್ತೀರಿ. ಸ್ವಲ್ಪ ಜಾಗರೂಕರಾಗಿರಬೇಕು. ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಒಂದು ಸಣ್ಣ ತಪ್ಪು ಅಥವಾ ಅಜಾಗರೂಕತೆ ಸಾಕಷ್ಟು ಹಾನಿ ಉಂಟುಮಾಡಬಹುದು. ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇದಕ್ಕೆ ಪರಿಹಾರವಾಗಿ ಶನಿವಾರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪಗಳನ್ನು ಬೆಳಗಿಸಿ.
icon

(2 / 8)

ವೃಶ್ಚಿಕ ರಾಶಿ: ಈ ರಾಶಿಯವರಿಗೆ ದೈಹಿಕ ತೊಂದರೆಗಳು ಮತ್ತು ಆರ್ಥಿಕ ಸಮಸ್ಯೆಗಳು ಇರಲಿವೆ. ಕೆಲವು ವಿಷಯಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ, ನಿಮ್ಮ ಪ್ರೀತಿಯ ಜೀವನದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ವೈಫಲ್ಯಗಳನ್ನು ಎದುರಿಸುತ್ತೀರಿ. ಇದು ನಿಮಗೆ ಖಿನ್ನತೆಯನ್ನು ಉಂಟುಮಾಡುತ್ತದೆ. ಇದು ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂಬ ಸೂಚನೆಗಳಿವೆ. ಇದನ್ನು ಸರಿಪಡಿಸಲು, ನೀವು ಪ್ರತಿ ಶನಿವಾರ ಕಪ್ಪು ಬಟ್ಟೆಗಳನ್ನು ಧರಿಸಬೇಕು.
icon

(3 / 8)

ಮಕರ ರಾಶಿ: ಶನಿಯ ಹಿಮ್ಮುಖ ಚಲನೆಯಿಂದಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಒತ್ತಡವಿರುತ್ತದೆ. ಜೀವನದಲ್ಲಿ ಸಂತೋಷವಾಗಿರುವುದಿಲ್ಲ. ಕೆಟ್ಟ ಆಲೋಚನೆಗಳು ಬರುತ್ತವೆ. ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಕೆಲವು ಜನರಿಗೆ ಬಲವಾದ ಸಂಬಂಧಗಳು ಮುರಿದುಬೀಳುತ್ತವೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ಹಣದ ಕೊರತೆ ಎದುರಾಗುತ್ತೆ. ಇದಕ್ಕೆ ಪರಿಹಾರವಾಗಿ, ಪ್ರತಿ ಶನಿವಾರ ಬ್ಲ್ಯಾಕ್ ಬೆರ್ರಿಗಳನ್ನು ದಾನ ಮಾಡಿ.
icon

(4 / 8)

ಕುಂಭ ರಾಶಿ: ಶನಿಯ ಹಿಮ್ಮುಖ ಚಲನೆಯು ಕುಂಭ ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ವ್ಯವಹಾರದಲ್ಲಿ ನೀವು ಹಠಾತ್ ಸಮಸ್ಯೆಗಳನ್ನು ಎದುರಿಸುತ್ತೀರಿ. ಅತಿಯಾದ ಕೋಪವು ನೀವು ಮಾಡಿದ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಕಚೇರಿಯಲ್ಲಿ ನಿಮ್ಮ ಕಿರಿಯರ ಮೇಲೆ ಕೋಪಗೊಳ್ಳಬೇಡಿ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ.
icon

(5 / 8)

ಮೀನ ರಾಶಿ: ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯಿಂದ ಮೀನ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಏರಿಳಿತಗಳು ಇರುತ್ತವೆ. ನಿಮ್ಮ ಯೋಜನೆಗಳು ಯಶಸ್ವಿಯಾಗುವುದಿಲ್ಲ. ವ್ಯವಹಾರದಲ್ಲಿ ನಷ್ಟವನ್ನು ಎದುರಿಸುವಿರಿ. ವೈಯಕ್ತಿಕ ಜೀವನದಲ್ಲಿ, ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಕೆಟ್ಟದಾಗಿರುತ್ತೆ. ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ವೈವಾಹಿಕ ಜೀವನದಲ್ಲಿ ಸಂಬಂಧವು ಹದಗೆಡಬಹುದು. 
icon

(6 / 8)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(7 / 8)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(8 / 8)

ಇತರ ಗ್ಯಾಲರಿಗಳು