Tomorrow Horoscope: ಈ ರಾಶಿಯವರ ಅದೃಷ್ಟ ಕೈಹಿಡಿಯಲಿದೆ; ಶನಿದೇವನ ಆಶೀರ್ವಾದ ಸಿಗಲಿದೆ, ನಾಳಿನ ದಿನಭವಿಷ್ಯ
- Tomorrow Horoscope: ಆಗಸ್ಟ್ 24ರ ಶನಿವಾರ ನಿಮ್ಮ ದಿನಭವಿಷ್ಯ ಹೇಗಿದೆ? ಯಾವೆಲ್ಲಾ ರಾಶಿಯರಿಗೆ ಶುಭಫಲಗಳಿವೆ? ಮೇಷದಿಂದ ಹಿಡಿದು ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ನಾಳಿನ ದಿನಭವಿಷ್ಯ ಇಲ್ಲಿದೆ.
- Tomorrow Horoscope: ಆಗಸ್ಟ್ 24ರ ಶನಿವಾರ ನಿಮ್ಮ ದಿನಭವಿಷ್ಯ ಹೇಗಿದೆ? ಯಾವೆಲ್ಲಾ ರಾಶಿಯರಿಗೆ ಶುಭಫಲಗಳಿವೆ? ಮೇಷದಿಂದ ಹಿಡಿದು ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ನಾಳಿನ ದಿನಭವಿಷ್ಯ ಇಲ್ಲಿದೆ.
(1 / 13)
ಆಗಸ್ಟ್ 24ರ ಶನಿವಾರದಂದು ನಿಮ್ಮ ದಿನಭವಿಷ್ಯ ಹೇಗಿದೆ? ಮೇಷದಿಂದ ಹಿಡಿದು ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಯವರಿಗೆ ನಾಳಿನ ದಿನಭವಿಷ್ಯ ಇಲ್ಲಿದೆ.
(2 / 13)
ಮೇಷ ರಾಶಿ- ಈ ದಿನ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ತಪ್ಪುಗಳನ್ನು ಮಾಡದಿರಲು ಮನಸ್ಸನ್ನು ಒತ್ತಡದಿಂದ ಮುಕ್ತವಾಗಿಡಿ. ಈ ದಿನ ನೀವು ನಿಮ್ಮ ಆಪ್ತರೊಂದಿಗೆ ಸಮಯ ಕಳೆಯಬಹುದು. ಶೈಕ್ಷಣಿಕ ರಂಗದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಕೆಲವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ.
(3 / 13)
ವೃಷಭ ರಾಶಿ - ಆರೋಗ್ಯ ಸುಧಾರಿಸುತ್ತದೆ. ನಿಮ್ಮ ದಿನ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಹಣ ಹರಿದು ಬರುತ್ತದೆ. ಉತ್ತಮ ನೆಟ್‌ವರ್ಕಿಂಗ್‌ನಿಂದ ಹೆಚ್ಚು ಸಂಪರ್ಕ ಸಾಧಿಸುವಿರಿ. ನೀವು ಕೆಲವು ಸಾಮಾಜಿಕ ಕಾರ್ಯಕ್ರಮದಲ್ಲಿ ಅನೇಕ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ.
(4 / 13)
ಮಿಥುನ ರಾಶಿ- ನೀವು ಫಿಟ್ ಆಗಿರುತ್ತೀರಿ. ಕೆಲವೊಂದು ಅನಿರೀಕ್ಷಿತ ಖರ್ಚುಗಳನ್ನು ಎದುರಿಸಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರ್ಥಿಕವಾಗಿ ಮುಂದೆ ಉತ್ತಮ ದಿನ ಬರುತ್ತದೆ. ವೃತ್ತಿಯಲ್ಲಿ ಕೆಲವು ಹೊಸ ಸಾಧನೆಗಳನ್ನು ಸಾಧಿಸಬಹುದು. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ.
(5 / 13)
ಕರ್ಕಾಟಕ ರಾಶಿ - ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಪಡೆಯಬಹುದು. ಈ ದಿನ ನೀವು ಸಾಕಷ್ಟು ಹಣವನ್ನು ಪಡೆಯಬಹುದು. ಕೆಲಸದಲ್ಲಿ ಹೊಸ ಯೋಜನೆಯನ್ನು ಪಡೆಯುವ ಸಾಧ್ಯತೆಯಿದೆ. ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪಾರ್ಟಿ ಅಥವಾ ಕುಟುಂಬದ ಕಾರ್ಯಕ್ರಮವನ್ನು ಪೂರ್ಣವಾಗಿ ಆನಂದಿಸಬಹುದು. ಆರೋಗ್ಯ ಚೆನ್ನಾಗಿರುತ್ತದೆ. ಹಿರಿಯ ವ್ಯಕ್ತಿಯಿಂದ ಉತ್ತಮ ಸಲಹೆ ಪಡೆಯಬಹುದು.
(6 / 13)
ಸಿಂಹ ರಾಶಿ - ಹಣದ ವಿಷಯಗಳಲ್ಲಿ ಯಾರನ್ನಾದರೂ ನಂಬಿ ಕೈಸುಟ್ಟುಕೊಳ್ಳುವ ಸಾಧ್ಯತೆ ಇದೆ. ಪ್ರಯಾಣದ ವೇಳೆ ಆರೋಗ್ಯವಾಗಿರಲು ಹವಾಮಾನ ಪ್ರಮುಖ ಪಾತ್ರ ವಹಿಸುತ್ತದೆ. ವೃತ್ತಿ ಸಂಬಂಧ ಕೆಲವು ಉತ್ತಮ ಸುದ್ದಿಗಳನ್ನು ಪಡೆಯಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಹೆಚ್ಚಿದ ಖರ್ಚುಗಳು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.
(7 / 13)
ಕನ್ಯಾ ರಾಶಿ -ಇಂದು ನೀವು ವ್ಯಾಯಾಮದ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತೀರಿ. ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿರಬಹುದು. ಕೆಲಸದ ಸ್ಥಳದಲ್ಲಿ ಏನನ್ನಾದರೂ ಸಾಧಿಸಲು ಹೆಚ್ಚಿನ ಪ್ರಯತ್ನಗಳು ಬೇಕಾಗಬಹುದು. ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಈ ದಿನವು ಸಕಾರಾತ್ಮಕವಾಗಿರುತ್ತದೆ. ನೀವು ಅಂದುಕೊಂಡಿದ್ದನ್ನು ಕಾರ್ಯಗತಗೊಳಿಸಲು ಇಂದು ಉತ್ತಮ ದಿನ.
(8 / 13)
ತುಲಾ ರಾಶಿ- ನಿಮ್ಮ ಆರೋಗ್ಯ ಈ ದಿನ ಉತ್ತಮವಾಗಿರುತ್ತದೆ. ಇಂದು ವ್ಯಾಪಾರಸ್ಥರು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ. ವೃತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಹೊಸ ವ್ಯವಹಾರದಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇಂದು ಕೆಲವರು ಪಿತ್ರಾರ್ಜಿತ ಆಸ್ತಿಯನ್ನು ಪಡೆದುಕೊಳ್ಳಬಹುದು. ಈ ದಿನ ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ ಸಿಗಬಹುದು.
(9 / 13)
ವೃಶ್ಚಿಕ ರಾಶಿ - ಆರೋಗ್ಯದಲ್ಲಿ ಫಿಟ್ ಆಗಿರಲು ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಇಂದು ಯಾರಾದರೂ ಇದ್ದಕ್ಕಿದ್ದಂತೆ ಕಚೇರಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಇಂದು ನೀವು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಸ್ನೇಹಿತರು ಅಥವಾ ಸಂಬಂಧಿಕರು ಇಂದು ನಿಮ್ಮ ಮನೆಗೆ ಭೇಟಿ ನೀಡಬಹುದು. ಆ ಮೂಲಕ ನಿಮ್ಮ ದಿನವನ್ನು ಆಹ್ಲಾದಕರಗೊಳಿಸಬಹುದು. ಶೈಕ್ಷಣಿಕ ರಂಗದಲ್ಲಿ ಇಂದು ಉತ್ತಮ ಸಾಧನೆ ಮಾಡುವಿರಿ.
(10 / 13)
ಧನು ರಾಶಿ - ಕೆಲವರು ತಮ್ಮ ಸಾಲವನ್ನು ಪಡೆಯಬಹುದು. ಈ ದಿನ ನೀವು ಒಂದು ಪ್ರಮುಖ ವಿಷಯದಲ್ಲಿ ಹಿರಿಯರಿಂದ ಸಲಹೆ ಪಡೆಯಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಅಲುಗಾಡಬಹುದು. ನಗರದಿಂದ ಹೊರಗೆ ಪ್ರಯಾಣಿಸುವ ಸಾಧ್ಯತೆಗಳಿವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಕೆಲವು ದೊಡ್ಡ ಸಾಧನೆಗಳನ್ನು ಸಾಧಿಸಬಹುದು.
(11 / 13)
ಮಕರ ರಾಶಿ- ನೀವು ವ್ಯಾಯಾಮ ಮಾಡುವ ಮೂಲಕ ಹೆಚ್ಚಿನ ಶಕ್ತಿಯನ್ನು ಅನುಭವಿಸುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದ ಸದಸ್ಯರು ನಿಮ್ಮ ಉತ್ತಮ ನಡವಳಿಕೆಯನ್ನು ಮೆಚ್ಚಿ ಹೆಮ್ಮೆ ಪಡುವಂತೆ ಮಾಡುತ್ತಾರೆ. ಇಂದು ನೀವು ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ಹೊಸ ಗುರುತನ್ನು ಸೃಷ್ಟಿಸಿಕೊಳ್ಳಬಹುದು.
(12 / 13)
ಕುಂಭ- ಜಿಮ್‌ಗೆ ಸೇರುವ ಅಥವಾ ಫಿಟ್‌ನೆಸ್ ದಿನಚರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನೀವು ಮಾತನಾಡಬಹುದು. ಹಣಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ವಿದೇಶದಲ್ಲಿ ಅಥವಾ ನಗರದ ಹೊರಗೆ ಓದಲು ಬಯಸುವವರಿಗೆ ಅವರ ಕುಟುಂಬದಿಂದ ಬೆಂಬಲ ಸಿಗುತ್ತದೆ. ನೀವು ಶೈಕ್ಷಣಿಕ ರಂಗದಲ್ಲಿ ನಿಮ್ಮ ಅತ್ಯುತ್ತಮ ಸಾಧನೆ ಮಾಡಬೇಕು.
(13 / 13)
ಮೀನ ರಾಶಿ- ಇಂದು ನೀವು ಆರ್ಥಿಕವಾಗಿ ನಿರಾಶೆಗೊಳ್ಳಬಹುದು. ಇಂದು ನೀವು ಹಣವನ್ನು ಸಂಗ್ರಹಿಸಲು ಕಷ್ಟಪಡಬೇಕಾಗಬಹುದು. ಕೆಲಸದ ಸ್ಥಳದಲ್ಲಿ ಕೆಲವು ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸಿದ ನಂತರ ನೀವು ಸಂತೋಷವಾಗಿರುತ್ತೀರಿ. ನಿಮ್ಮ ಸಕಾರಾತ್ಮಕ ಮನೋಭಾವವು ಮನೆಯನ್ನು ಸಂತೋಷವಾಗಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಉತ್ತಮ ತಯಾರಿ ಮಾಡಬೇಕಾಗುತ್ತದೆ.
ಇತರ ಗ್ಯಾಲರಿಗಳು