ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಆರೋಗ್ಯದ ಕಾಳಜಿ ಮಾಡಿ, ಕಚೇರಿ ರಾಜಕೀಯದಿಂದ ದೂರವಿದ್ದರೆ ಉತ್ತಮ; ನಾಳಿನ ದಿನಭವಿಷ್ಯ
ಜನವರಿ 24, ಶುಕ್ರವಾರದ ದಿನಭವಿಷ್ಯದ ಪ್ರಕಾರ ಹಲವು ರಾಶಿಯವರಿಗೆ ಶುಭಫಲಗಳಿವೆ. ಸಂಗಾತಿಯೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯಲಿದ್ದೀರಿ. ಹಣದ ವಿಚಾರದಲ್ಲಿ ಅದೃಷ್ಟ ನಿಮ್ಮ ಪಾಲಿಗಿರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಹೊರಗಿನ ಆಹಾರ ಸೇವನೆಗೆ ಕಡಿವಾಣ ಹಾಕಿ. ಶುಭಸುದ್ದಿಗಳನ್ನು ಕೇಳಲಿದ್ದೀರಿ.
(1 / 15)
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಜನವರಿ 24ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ
(2 / 15)
ಮೇಷ ರಾಶಿ
ಇಂದು ರೊಮ್ಯಾಂಟಿಕ್ ದಿನವಾಗಲಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ. ನಿಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳಿ. ಡೇಟಿಂಗ್ ಹೋಗುವ ಮೂಲಕ ಸಂಗಾತಿಯ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ.
(3 / 15)
ವೃಷಭ ರಾಶಿ
ಇಂದು ನಿಮ್ಮ ಪಾಲಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಹಣದ ವಿಷಯಗಳಲ್ಲಿ ಅದೃಷ್ಟ ಒಲಿಯಲಿದೆ. ಬಡ್ತಿಯ ಅವಕಾಶಗಳಿವೆ. ಅಧಿಕ ರಕ್ತದೊತ್ತಡ ಇರುವವರು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು.
(4 / 15)
ಮಿಥುನ ರಾಶಿ
ನೀವು ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡಬೇಕಾಗುತ್ತದೆ. ಇಂದು ಬಹಳ ವಿಶೇಷವಾದ ದಿನವಾಗಲಿದೆ. ಒಂಟಿ ಇರುವವರಿಗೆ ಜನ ಮೆಚ್ಚಿದ ಸಂಗಾತಿ ಸಿಗಬಹುದು. ಜಂಕ್ ಫುಡ್ ಸೇವನೆಯಿಂದ ದೂರವಿರಿ.
(5 / 15)
ಕಟಕ ರಾಶಿ
ಇಂದು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಪೂರ್ಣ ಬದಲಾವಣೆಗಳ ದಿನವಾಗಲಿದೆ. ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ ಸಾಧ್ಯತೆ.
(6 / 15)
ಸಿಂಹ ರಾಶಿ
ಇಂದು ಹೆಚ್ಚು ಹೊರಗಿನ ಆಹಾರವನ್ನು ಸೇವಿಸಬೇಡಿ. ವ್ಯಾಪಾರ, ಆರೋಗ್ಯ, ಉದ್ಯೋಗ, ಹಣ, ಪ್ರೀತಿ ಯಾವುದೇ ವಿಷಯವಾಗಿರಲಿ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
(7 / 15)
ಕನ್ಯಾ ರಾಶಿ
ಇಂದು ಸಡಗರದಿಂದ ಕೂಡಿದ ದಿನವಾಗಲಿದೆ. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಚೇರಿ ರಾಜಕೀಯದಿಂದ ದೂರವಿರುವುದು ಉತ್ತಮ. ಕಾಲೋಚಿತ ಹಣ್ಣುಗಳನ್ನು ಸೇವಿಸಿ.
(8 / 15)
ತುಲಾ ರಾಶಿ
ಇಂದು ನಿಮಗೆ ತುಂಬಾ ಧನಾತ್ಮಕ ದಿನವಾಗಲಿದೆ. ವೃತ್ತಿಯ ವಿಷಯದಲ್ಲಿ, ನೀವು ಕೆಲವು ಪ್ರಮುಖ ಜವಾಬ್ದಾರಿಯನ್ನು ಪಡೆಯಬಹುದು. ಇದರಿಂದ ನಿಮಗೆ ಅನುಕೂಲವಾಗಲಿದೆ. ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.
(9 / 15)
ವೃಶ್ಚಿಕ ರಾಶಿ
ಇಂದು ನಿಮಗೆ ಅದ್ಭುತವಾದ ದಿನವಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಎಲ್ಲಾ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಕೆಲವು ಶುಭ ಸುದ್ದಿಗಳನ್ನು ಕೇಳಲಿದ್ದೀರಿ.
(10 / 15)
ಧನು ರಾಶಿ
ಇಂದು ಏರಿಳಿತಗಳಿಂದ ಕೂಡಿದ ದಿನವಾಗಿರಲಿದೆ. ವೃತ್ತಿಜೀವನದಲ್ಲಿ ನಿಮ್ಮ ಸ್ಥಾನವನ್ನು ಪಡೆಯಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಗಡುವಿನೊಳಗೆ ಕೆಲಸವನ್ನು ಪೂರ್ಣಗೊಳಿಸದಿರುವುದಕ್ಕೆ ಬಾಸ್‌ನಿಂದ ಖಂಡನೆಗೆ ಒಳಗಾಗಬೇಕಾಗಬಹುದು.
(11 / 15)
ಮಕರ ರಾಶಿ
ಇಂದು ನಿಮ್ಮ ಹಣಕಾಸಿನ ಪರಿಸ್ಥಿತಿಯು ಖರ್ಚುಗಳಿಂದ ಹದಗೆಡಬಹುದು. ನಿಮ್ಮ ದಿನವು ಪ್ರಕ್ಷುಬ್ಧತೆಯಿಂದ ತುಂಬಿರುತ್ತದೆ. ರಾಜಕೀಯದ ನಕಾರಾತ್ಮಕ ಪ್ರಭಾವದಿಂದಾಗಿ, ಕೆಲವು ಪ್ರಮುಖ ಅವಕಾಶಗಳು ನಿಮ್ಮ ಕೈಯಿಂದ ಜಾರಿ ಹೋಗಬಹುದು.
(12 / 15)
ಕುಂಭ ರಾಶಿ
ಅನಗತ್ಯವಾಗಿ ಗಾಸಿಪ್ ಮಾಡಬೇಡಿ. ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ ಮತ್ತು ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿ. ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಸುದ್ದಿಗಳನ್ನು ಸ್ವೀಕರಿಸಬೇಕಾಗಬಹುದು. ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸದಿರಿ .
(13 / 15)
ಮೀನ ರಾಶಿ
ಇಂದು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ವಿಶೇಷವಾಗಿ ಸೃಜನಶೀಲ ವಿಷಯಗಳ ಮೂಲಕ ಆದಾಯವನ್ನು ಹೆಚ್ಚಿಸುವ ಅವಕಾಶಗಳು ಉಂಟಾಗಬಹುದು.
(14 / 15)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು