ಮಾತಿನ ಮೇಲೆ ಹಿಡಿತ ಅಗತ್ಯ, ಓಡಾಟದ ದಿನವಾಗಿರುತ್ತದೆ, ವ್ಯವಹಾರದಿಂದ ಲಾಭವಾಗಲಿದೆ; ನಾಳಿನ ದಿನಭವಿಷ್ಯ
- ನವೆಂಬರ್ 5 ಮಂಗಳವಾರದ ದಿನಭವಿಷ್ಯದ ಪ್ರಕಾರ ಆತ್ಮವಿಶ್ವಾಸದ ಕೊರತೆಯ ಜೊತೆಗೆ ಓಡಾಟವು ಹೆಚ್ಚಾಗಬಹುದು. ವ್ಯವಹಾರದಲ್ಲಿ ಬದಲಾವಣೆ ಸಾಧ್ಯತೆ. ನಕಾರಾತ್ಮಕ ಯೋಚನೆಗಳಿಂದ ದೂರವಿರುವುದು ಉತ್ತಮ. ನಾಳಿನ (ನವೆಂಬರ್ 5) ದ್ವಾದಶ ರಾಶಿಗಳ ದಿನಭವಿಷ್ಯದಲ್ಲಿ ಏನೇನಿದೆ ನೋಡಿ.
- ನವೆಂಬರ್ 5 ಮಂಗಳವಾರದ ದಿನಭವಿಷ್ಯದ ಪ್ರಕಾರ ಆತ್ಮವಿಶ್ವಾಸದ ಕೊರತೆಯ ಜೊತೆಗೆ ಓಡಾಟವು ಹೆಚ್ಚಾಗಬಹುದು. ವ್ಯವಹಾರದಲ್ಲಿ ಬದಲಾವಣೆ ಸಾಧ್ಯತೆ. ನಕಾರಾತ್ಮಕ ಯೋಚನೆಗಳಿಂದ ದೂರವಿರುವುದು ಉತ್ತಮ. ನಾಳಿನ (ನವೆಂಬರ್ 5) ದ್ವಾದಶ ರಾಶಿಗಳ ದಿನಭವಿಷ್ಯದಲ್ಲಿ ಏನೇನಿದೆ ನೋಡಿ.
(1 / 15)
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನವೆಂಬರ್ 5ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ
(2 / 15)
ಮೇಷ ರಾಶಿ: ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಕೂಡ ಗೊಂದಲದಲ್ಲಿ ಉಳಿಯುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಓಡಾಟ ಹೆಚ್ಚಿರುತ್ತದೆ. ಜೀವನವು ನೋವಿನಿಂದ ಕೂಡಿರಬಹುದು. ಖರ್ಚು ಹೆಚ್ಚಾಗಲಿದೆ. ಆದರೂ ಎಲ್ಲೋ ಒಂದು ಕಡೆ ಲಾಭದ ಅವಕಾಶವಿರುತ್ತದೆ.
(3 / 15)
ವೃಷಭ ರಾಶಿ: ಮನಸ್ಸಿನಲ್ಲಿ ಸಿಡಿಮಿಡಿ ಇರುತ್ತದೆ. ತಾಳ್ಮೆಯ ಕೊರತೆ ಕಾಡಬಹುದು. ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಂದೆಯಿಂದ ಬೆಂಬಲ ಸಿಗಲಿದೆ. ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು.
(4 / 15)
ಮಿಥುನ ರಾಶಿ: ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನ ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಓಡಾಟ ಹೆಚ್ಚಿರುತ್ತದೆ. ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.
(5 / 15)
ಕಟಕ ರಾಶಿ: ಸಂತೋಷ ಹಾಗೂ ಪೂರ್ಣ ವಿಶ್ವಾಸವಿರುತ್ತದೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸಗಳಲ್ಲಿ ಗೌರವ ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ.
(6 / 15)
ಸಿಂಹ ರಾಶಿ: ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಬೌದ್ಧಿಕ ಕೆಲಸವು ಆದಾಯದ ಮೂಲವಾಗಬಹುದು. ವ್ಯಾಪಾರದಿಂದ ಲಾಭ ಹೆಚ್ಚಾಗುತ್ತದೆ. ಸ್ನೇಹಿತರ ಸಹಾಯದಿಂದ ಆದಾಯ ಹೆಚ್ಚಾಗಬಹುದು.
(7 / 15)
ಕನ್ಯಾ ರಾಶಿ: ಮನಸ್ಸು ಸಂತೋಷವಾಗಿರುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಬೌದ್ಧಿಕ ಕೆಲಸದಲ್ಲಿ ಗೌರವ ಸಿಗಲಿದೆ. ಆದಾಯದಷ್ಟೇ ಖರ್ಚು ಕೂಡ ಹೆಚ್ಚಾಗಲಿದೆ.
(8 / 15)
ತುಲಾ ರಾಶಿ: ಮನಸ್ಸು ವಿಚಲಿತವಾಗಿ ಉಳಿಯುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನವಿರಲಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಲಾಭವೂ ಹೆಚ್ಚುತ್ತದೆ. ವಿದ್ಯಾಭ್ಯಾಸಕ್ಕಾಗಿ ಬೇರೆ ಕಡೆ ಹೋಗಬಹುದು.
(9 / 15)
ವೃಶ್ಚಿಕ ರಾಶಿ: ಕೆಲವು ಅಪರಿಚಿತ ಭಯದಿಂದ ನೀವು ತೊಂದರೆಗೊಳಗಾಗಬಹುದು. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಉದ್ಯೋಗ ಬದಲಾವಣೆಯೊಂದಿಗೆ ಪ್ರಗತಿಯ ಸಾಧ್ಯತೆಗಳಿವೆ. ಕೆಲಸದ ವ್ಯಾಪ್ತಿ ಹೆಚ್ಚಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ.
(10 / 15)
ಧನು ರಾಶಿ: ಮನಸ್ಸು ಚಂಚಲವಾಗುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಕೋಪವನ್ನು ತಪ್ಪಿಸಿ. ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಉತ್ತಮ ದಿನ. ನೀವು ನಿಮ್ಮ ತಂದೆಯಿಂದ ಹಣವನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ.
(11 / 15)
ಮಕರ ರಾಶಿ: ಮಾನಸಿಕವಾಗಿ ನೆಮ್ಮದಿ ಇಲ್ಲದಂತಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಮಾತಿನಲ್ಲಿ ನಿಗಾ ಇರಲಿ. ವಾರದ ಆರಂಭದಲ್ಲಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬದಲಾವಣೆ ಉಂಟಾಗಬಹುದು.
(12 / 15)
ಕುಂಭ ರಾಶಿ: ಆತ್ಮಸ್ಥೈರ್ಯ ಜಾಸ್ತಿ ಇರುತ್ತದೆ, ಆದರೆ ಮನಸ್ಸು ಗೊಂದಲಕ್ಕೆ ಸಿಲುಕಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನೀವು ಕುಟುಂಬದಿಂದ ದೂರ ಉಳಿಯಬೇಕಾಗಬಹುದು.
(13 / 15)
ಮೀನ ರಾಶಿ: ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ಶಾಂತವಾಗಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಪ್ರಗತಿಯ ಅವಕಾಶಗಳು ಇರಬಹುದು. ವಾಹನ ಖರೀದಿಸುವ ಯೋಗ ಕೂಡಿ ಬರಬಹುದು.
(14 / 15)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು